Samvat 2077: ಕಳೆದ ಒಂದು ವರ್ಷದಲ್ಲಿ ಹೆಚ್ಚು ರಿಟರ್ನ್ಸ್ ನೀಡಿದ ಟಾಪ್ 10 ಷೇರುಗಳಲ್ಲಿ ಟಾಟಾ ಸಮೂಹದ 3 ಕಂಪೆನಿ | 3 Out Of Top 10 Best Returns Given Stocks In Samvat 2077 Are Tata Group Stocks


Samvat 2077: ಕಳೆದ ಒಂದು ವರ್ಷದಲ್ಲಿ ಹೆಚ್ಚು ರಿಟರ್ನ್ಸ್ ನೀಡಿದ ಟಾಪ್ 10 ಷೇರುಗಳಲ್ಲಿ ಟಾಟಾ ಸಮೂಹದ 3 ಕಂಪೆನಿ

ಸಾಂದರ್ಭಿಕ ಚಿತ್ರ

ಕಳೆದ ಬುಧವಾರಕ್ಕೆ ಕೊನೆಗೊಂಡ ಹಿಂದೂ ಕ್ಯಾಲೆಂಡರ್ ವರ್ಷ ಸಂವತ್ 2077ರಲ್ಲಿ ಟಾಟಾ ಸಮೂಹದ ಷೇರುಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ. ಈ ವರ್ಷದಲ್ಲಿ ಉತ್ತಮ ಪ್ರದರ್ಶನ ನೀಡಿದ 10 ನಿಫ್ಟಿ ಸ್ಟಾಕ್‌ಗಳಲ್ಲಿ ಉಪ್ಪಿನಿಂದ ಸಾಫ್ಟ್‌ವೇರ್ ತನಕ ಉದ್ಯಮ ಇರುವ ಟಾಟಾ ಸಮೂಹದ ಮೂರು ಸ್ಟಾಕ್​ಗಳು ಇದರಲ್ಲಿ ಭಾಗವಾಗಿವೆ ಎಂದು ಡೇಟಾ ತೋರಿಸಿದೆ. ಸಂವತ್ 2077ರ ಅವಧಿಯಲ್ಲಿ ಟಾಟಾ ಮೋಟಾರ್ಸ್ ಶೇ 228ರಷ್ಟು ಏರಿಕೆ ಕಂಡರೆ, ಟಾಟಾ ಸ್ಟೀಲ್ ಶೇ 167 ಮತ್ತು ಟೈಟಾನ್ ಶೇ 91ರಷ್ಟು ಹೆಚ್ಚಳ ಆಗುವ ಮೂಲಕ ಟಾಟಾ ಸಮೂಹದ ನಿಫ್ಟಿ ಸ್ಟಾಕ್‌ಗಳು ಬಲವಾದ ಆದಾಯವನ್ನು ನೀಡಿದ ಇತರ ಎರಡು ಸ್ಟಾಕ್‌ಗಳಾಗಿವೆ. ಉಳಿದ ಟಾಪ್ 10 ಉತ್ತಮ ಪ್ರದರ್ಶನದ ನಿಫ್ಟಿ ಷೇರುಗಳೆಂದರೆ ಬಜಾಜ್ ಫಿನ್‌ಸರ್ವ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹಿಂಡಾಲ್ಕೊ ಇಂಡಸ್ಟ್ರೀಸ್, ಒಎನ್​ಜಿಸಿ, ಗ್ರಾಸಿಮ್ ಇಂಡಸ್ಟ್ರೀಸ್, ಜೆಎಸ್​ಡಬ್ಲ್ಯು ಸ್ಟೀಲ್ ಮತ್ತು ಅದಾನಿ ಪೋರ್ಟ್ಸ್ ಈ ಅವಧಿಯಲ್ಲಿ ಶೇ 92ರಿಂದ ಶೇ 139ರಷ್ಟು ಏರಿಕೆಯಾಗಿವೆ.

ಟಾಟಾ ಸಮೂಹದ ನಿಫ್ಟಿಯ ಇತರ ಷೇರುಗಳಾದ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಶೇ 61ರಷ್ಟು ಏರಿದರೆ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಶೇ 30ರಷ್ಟು ಜಿಗಿದಿದೆ. ಆದರೆ ಡಾ.ರೆಡ್ಡೀಸ್ ಲ್ಯಾಬ್ಸ್ ಮತ್ತು ಹೀರೋ ಮೋಟೋಕಾರ್ಪ್ ಶೇ 3ರಿಂದ 14ರ ತನಕ ಕುಸಿದಿರುವುದು ಹೊರತುಪಡಿಸಿದರೆ ಇತರ ಎಲ್ಲ ನಿಫ್ಟಿ ಷೇರುಗಳು ಸಂವತ್ 2077 ಅನ್ನು ಲಾಭದೊಂದಿಗೆ ಕೊನೆಗೊಳಿಸಿವೆ. ನಿಫ್ಟಿಯ ಇತರ ಷೇರುಗಳಲ್ಲಿ ವಿಪ್ರೋ ಶೇ 89, ಟೆಕ್ ಮಹೀಂದ್ರಾ ಶೇ 77, ರಿಲಯನ್ಸ್ ಇಂಡಸ್ಟ್ರೀಸ್ ಶೇ 25 ಮತ್ತು ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಶೇ 10ರಷ್ಟು ಜಿಗಿದವು. “ನಾವು ವಿವಿಧ ಆರ್ಥಿಕ ಸೂಚಕಗಳನ್ನು ನೋಡಿದಾಗ ಸುತ್ತಲೂ ಸ್ಪಷ್ಟವಾಗಿ ಪ್ರಕಾಶವಾದ ಬೆಳಕು ಹೊಳೆಯುತ್ತಿದೆ. ಆರ್ಥಿಕತೆಯು ಚಲಿಸುತ್ತಿರುವಂತೆ ತೋರುತ್ತಿದೆ. ಸದ್ಯಕ್ಕೆ ಸಾಕಷ್ಟು ಉತ್ತೇಜನಕಾರಿಯಾಗಿದೆ. ಇದು ನಿರಂತರವಾಗಿದೆಯೇ ಅಥವಾ ಇಲ್ಲವೇ ಎಂಬುದು ಒಂದು ಪ್ರಮುಖ ಪ್ರಶ್ನೆಯಾಗಿದೆ. ಆದರೆ ಖಚಿತವಾಗಿಯೂ ಮೇಲ್ಮುಖವಾಗಿ ಸಾಗುವತ್ತ ಎದುರು ನೋಡುತ್ತಿದೆ,” ಎಂದು ಕೇರ್ ರೇಟಿಂಗ್ಸ್ ಹೇಳಿದೆ.

13 ವರ್ಷಗಳಲ್ಲಿ ಉತ್ತಮ ಲಾಭ
ಒಟ್ಟಾರೆಯಾಗಿ, ಆರ್ಥಿಕತೆಯು ಸರಿಯಾದ ಹಾದಿಯಲ್ಲಿದೆ ಮತ್ತು ಮಾರ್ಚ್​ವರೆಗೆ ಮುಂದುವರಿಯುತ್ತದೆ ಎಂದು ಅದು ನಂಬುತ್ತದೆ. ಮೂರನೇ ಅಲೆಯ ಸಾಧ್ಯತೆಯು ಕಡಿಮೆ ಇರುವಂತೆ ತೋರುತ್ತಿದೆ ಮತ್ತು ಲಸಿಕೆ ಅಭಿಯಾನವು ಉತ್ತಮವಾಗಿ ಪ್ರಗತಿಯಲ್ಲಿದೆ. ಆದ್ದರಿಂದ ಅದು ಬಂದಲ್ಲಿ ಅದರ ಪರಿಣಾಮವನ್ನು ವ್ಯವಹಾರವು ಉತ್ತಮವಾಗಿ ಭರಿಸುತ್ತದೆ ಎಂದು ನಿರೀಕ್ಷಿಲಾಗುತ್ತಿದೆ. ಕೊವಿಡ್ ಕಾರಣದ ಲಾಕ್‌ಡೌನ್‌ಗಳು ಮತ್ತು ಆರ್ಥಿಕ ಬೆಳವಣಿಗೆಯನ್ನು ತಡೆಯುವ ಅನಿಶ್ಚಿತತೆಗಳ ಹೊರತಾಗಿಯೂ ಸಂವತ್ 2077ರ ವರ್ಷವು 13 ವರ್ಷಗಳಲ್ಲಿ ಉತ್ತಮ ಲಾಭದೊಂದಿಗೆ ಕೊನೆಗೊಂಡಿತು. ಹೇರಳವಾದ ನಗದು ಲಭ್ಯತೆಯ ಮೇಲೆ ಸವಾರಿ ಮಾಡುವ ಮೂಲಕ ಹೂಡಿಕೆದಾರರು ಈ ವರ್ಷ ಈಕ್ವಿಟಿಗಳಲ್ಲಿ ಸುಮಾರು ಶೇ 40ರಷ್ಟು ಲಾಭವನ್ನು ಗಳಿಸಿದ್ದಾರೆ – ಇತರ ಆಸ್ತಿ ವರ್ಗಗಳಿಗೆ (Asset Class) ಹೋಲಿಸಿದರೆ ಇದು ಉತ್ತಮ ಆದಾಯ.

ಬೆಂಚ್​ಮಾರ್ಕ್ ಸೂಚ್ಯಂಕಗಳು ಸಂವತ್ 2077ರಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ 39ರಿಂದ 40ರಷ್ಟು ಗಳಿಸಿದವು. ಕಳೆದ ವರ್ಷ, ಮಾರ್ಚ್‌ನಲ್ಲಿ ಮಾರುಕಟ್ಟೆಗಳು ಪ್ರಮುಖ ಕುಸಿತದಿಂದ ಪುಟಿದೆದ್ದಾಗ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಶೇ 10ರಿಂದ 11ರಷ್ಟು ಗಳಿಸಿದವು. ಈಕ್ವಿಟಿ ಮಾರುಕಟ್ಟೆಗಳು ಸಂವತ್ 2077ರಲ್ಲಿ ಐತಿಹಾಸಿಕ ಪ್ರಯಾಣವನ್ನು ಹೊಂದಿದ್ದವು. ನಿಫ್ಟಿಯು 18000-ಪಾಯಿಂಟ್ಸ್ ಗುರುತನ್ನು ಮೀರಿಸುವುದರೊಂದಿಗೆ ಹೊಸ ಸಾರ್ವಕಾಲಿಕ ಗರಿಷ್ಠವನ್ನು ಮುಟ್ಟಿತು ಮತ್ತು ಸೆನ್ಸೆಕ್ಸ್ ಮೊದಲ ಬಾರಿಗೆ 60,000 ಪಾಯಿಂಟ್ಸ್ ದಾಟಿತು. ಸರ್ಕಾರದ ಹಣಕಾಸಿನ ಉತ್ತೇಜನ ಮತ್ತು ಜಾಗತಿಕ ಕೇಂದ್ರೀಯ ಬ್ಯಾಂಕರ್‌ಗಳ ಮೃದು ಹಣಕಾಸು ನೀತಿಯ ನಿಲುವು ಸಂವತ್ 2077ರಲ್ಲಿ ಷೇರುಗಳ ಪ್ರಮುಖ ಚಾಲಕ ಅಂಶಗಳು ಎಂದು ವಿಶ್ಲೇಷಕರು ಹೇಳಿದ್ದಾರೆ. ಕೊವಿಡ್‌ನ ಎರಡನೇ ಅಲೆಯ ನಂತರ, ಹೆಚ್ಚಿನ ಆವರ್ತನದ ಪ್ರಮುಖ ಆರ್ಥಿಕ ಸೂಚಕಗಳಾದ ಜಿಎಸ್‌ಟಿ ಸಂಗ್ರಹ, ರೈಲ್ವೆ ಸರಕು ಸಾಗಣೆ, ಸುಧಾರಣೆಯ ಚಿಹ್ನೆಗಳು. ವಿದ್ಯುತ್ ಬಳಕೆ, ಆಮದು-ರಫ್ತು ಡೇಟಾ, ಇ-ವೇ ಬಿಲ್‌ಗಳು, ಲಸಿಕೆ ಅಭಿಯಾನ ಮಧ್ಯೆ ಹೂಡಿಕೆದಾರರ ಭಾವನೆಯನ್ನು ಹೆಚ್ಚಿಸಿವೆ.

ಹೆಚ್ಚಿನ ಸೂಚ್ಯಂಕಗಳು ಪಾಸಿಟಿವ್
ಒಟ್ಟಾರೆಯಾಗಿ, ಹೆಚ್ಚಿನ ವಲಯಗಳು ಧನಾತ್ಮಕ ಆದಾಯವನ್ನು ನೀಡಿವೆ. ಲೋಹಗಳು (ಶೇ 128 ಏರಿಕೆ), ರಿಯಾಲ್ಟಿ (ಶೇ 113 ಏರಿಕೆ) ಮತ್ತು PSU ಬ್ಯಾಂಕ್‌ಗಳು (ಶೇ 93 ಏರಿಕೆ) ಟಾಪ್ ಗೇಯ್ನರ್‌ಗಳಾಗಿವೆ. ಫಾರ್ಮಾ (ಶೇ 23 ಏರಿಕೆ), ಎಫ್​ಎಂಸಿಜಿ (ಶೇ 29) ಮತ್ತು ಖಾಸಗಿ ಬ್ಯಾಂಕ್‌ಗಳು (ಶೇ 30ರಷ್ಟು) ರಕ್ಷಣಾತ್ಮಕವಾಗಿ ಉಸಿರಾಡಿದವು. ಹೋಲಿಕೆ ಮಾಡಿದರೆ, ಮಿಡ್ ಮತ್ತು ಸ್ಮಾಲ್-ಕ್ಯಾಪ್‌ಗಳು ಸಂವತ್ 2077ರಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದವು. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇ 61ರಷ್ಟು ಏರಿತು. ಆದರೆ ಬಿಎಸ್‌ಇ ಸ್ಮಾಲ್‌ಕ್ಯಾಪ್ ವರ್ಷದಲ್ಲಿ ಶೇ 79ರಷ್ಟು ಜಿಗಿದಿದೆ.

ಇದನ್ನೂ ಓದಿ: Rakesh Jhunjhunwala: ಟಾಟಾ ಸಮೂಹದ ಈ 2 ಕಂಪೆನಿ ಷೇರಿನಿಂದ ಜುಂಜುನ್​ವಾಲಾಗೆ ವಾರದಲ್ಲೇ 1300 ಕೋಟಿ ರೂ.ಗೂ ಹೆಚ್ಚು ಲಾಭ

TV9 Kannada


Leave a Reply

Your email address will not be published. Required fields are marked *