
Rajasthan Royals IPL 2022
RR vs RCB: Qaulifier 2: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಬ್ಯಾಟಿಂಗ್ – ಬೌಲಿಂಗ್ನಲ್ಲಿ ಅಮೋಘ ಪ್ರದರ್ಶನ ನೀಡಿದ ಆರ್ ಆರ್ ಫೈನಲ್ಗೆ ಲಗ್ಗೆಯಿಟ್ಟಿದೆ. ಜೋಸ್ ಬಟ್ಲರ್ ಸಿಡಿಸಿದ ದಾಖಲೆಯ 4ನೇ ಶತಕ ಹಾಗೂ ವೇಗದ ಬೌಲರ್ಗಳ ಭರ್ಜರಿ ಪ್ರದರ್ಶನದಿಂದ ಅಬ್ಬರಿಸಿದ ರಾಯಲ್ಸ್ 7 ವಿಕೆಟ್ಗಳಿಂದ ಜಿಯಿಸಿ 2008ರ ಬಳಿಕ ಇದೇ ಮೊದಲ ಬಾರಿ ಐಪಿಎಲ್ ಫೈನಲ್ ತಲುಪಿದ ಸಾಧನೆ ಮಾಡಿದೆ.
ಮೊದಲ ಕ್ವಾಲಿಫೈಯರ್ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಕುಂಡಿದ್ದ ರಾಜಸ್ಥಾನ್ ರಾಯಲ್ಸ್ (GT vs RR) ಕ್ವಾಲಿಫೈಯರ್ – 2 ನಲ್ಲಿ ಬೊಂಬಾಟ್ ಕಮ್ಬ್ಯಾಕ್ ಮಾಡಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಬ್ಯಾಟಿಂಗ್ – ಬೌಲಿಂಗ್ನಲ್ಲಿ ಅಮೋಘ ಪ್ರದರ್ಶನ ನೀಡಿದ ಆರ್ ಆರ್ (RR vs RCB) ಫೈನಲ್ಗೆ ಲಗ್ಗೆಯಿಟ್ಟಿದೆ. ಜೋಸ್ ಬಟ್ಲರ್ ಸಿಡಿಸಿದ ದಾಖಲೆಯ 4ನೇ ಶತಕ ಹಾಗೂ ವೇಗದ ಬೌಲರ್ಗಳ ಭರ್ಜರಿ ಪ್ರದರ್ಶನದಿಂದ ಅಬ್ಬರಿಸಿದ ರಾಯಲ್ಸ್ 7 ವಿಕೆಟ್ಗಳಿಂದ ಜಿಯಿಸಿ 2008ರ ಬಳಿಕ ಇದೇ ಮೊದಲ ಬಾರಿ ಐಪಿಎಲ್ ಫೈನಲ್ ತಲುಪಿದ ಸಾಧನೆ ಮಾಡಿದೆ. ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ್ ಶೇನ್ ವಾರ್ನ್ ನಾಯಕತ್ವದಲ್ಲಿ ಫೈನಲ್ ತಲುಪಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿತ್ತು. ಈಗ ಮತ್ತೆ ಫೈನಲ್ಗೇರಿರುವ ಆರ್ಆರ್ ಈ ಬಾರಿ ಕಪ್ ಗೆದ್ದು ನಾವು ಅದನ್ನು ದಂತಕಥೆ ಶೇನ್ ವಾರ್ನ್ಗೆ (Shane Warne) ಅರ್ಪಿಸುತ್ತೇವೆ ಎಂದು ಹೇಳಿದೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್, “ಕಳೆದ ಪಂದ್ಯದಲ್ಲಿ ಸೋಲು ಕಂಡು ಈಗ ಕಮ್ಬ್ಯಾಕ್ ಮಾಡುವುದು ಸುಲಭವಲ್ಲ. ಐಪಿಎಲ್ನಲ್ಲಿ ಸೋಲು-ಗೆಲುವು ಮಾಮೂಲಿ. ನಾವು ಕೂಡ ಕೆಲವು ಪಂದ್ಯಗಳನ್ನು ಸೋತಿದ್ದೇವೆ. ನಮಗೆ ಸೋತ ನಂತರ ಹೇಗೆ ಕಮ್ಬ್ಯಾಕ್ ಮಾಡಬೇಕೆಂದು ಚೆನ್ನಾಗಿ ತಿಳಿದಿದೆ. ಈ ವಿಕೆಟ್ ವೇಗಿಗಳಿಗೆ ಹೆಚ್ಚಿನ ನೆರವು ನೀಡಿತು. ಚೆನ್ನಾಗಿ ಬೌನ್ಸ್ ಆಗುತ್ತಿತ್ತು. ಮೊದಲ ಇನ್ನಿಂಗ್ಸ್ ಅನ್ನು ಚೆನ್ನಾಗಿ ಮುಗಿಸಿದೆವು. ಮ್ಯಾಕ್ಸ್ವೆಲ್ ಮತ್ತು ದಿನೇಶ್ ಕಾರ್ತಿಕ್ ಎಷ್ಟು ಅಪಾಯಕಾರಿ ಎಂಬುದು ಎಲ್ಲರಿಗೂ ತಿಳಿದಿದೆ. ಅವರನ್ನು ಬೇಗನೆ ಔಟ್ ಮಾಡಿದ್ದು ಸಹಕಾರಿ ಆಯಿತು,” ಎಂದು ಹೇಳಿದ್ದಾರೆ.
Faf du Plessis: ಪಂದ್ಯ ಮುಗಿದ ಬಳಿಕ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಏನು ಹೇಳಿದ್ರು ಗೊತ್ತೇ?
“ಟಾಸ್ ಗೆದ್ದಿದ್ದು ಈ ಪಂದ್ಯ ಜಯಿಸಲು ಮತ್ತೊಂದು ಕಾರಣ. ನನಗನಿಸುವ ಪ್ರಕಾರ ಟಾಸ್ ಒಂದು ಪಂದ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮೊದಲ ಮತ್ತು ಎರಡನೇ ಇನ್ನಿಂಗ್ಸ್ಗೆ ವಿಕೆಟ್ ತುಂಬಾನೆ ಬದಲಾಗಿತ್ತು. ಒಬೆಡ್ ಮೆಕಾಯ್ ಅವರಿಗೆ ಇದು ಚೊಚ್ಚಲ ಐಪಿಎಲ್. ಅವರನ್ನು ನಂಬಿ ಬೌಲಿಂಗ್ ಕೊಡಬಹುದು. ಜೋಸ್ ಬಟ್ಲರ್ ಕೊಡುಗೆ ತಂಡಕ್ಕ ಅತ್ಯುತ್ತಮವಾಗಿದೆ.”
ರಾಜಸ್ಥಾನ್ ಚೊಚ್ಚಲ ಸೀಸನ್ನಲ್ಲಿ ಪ್ರಶಸ್ತಿ ಗೆದ್ದ ಬಗ್ಗೆ ಮಾತನಾಡಿದ ಸ್ಯಾಮ್ಸನ್, “ನಾನು ಆಗ ತುಂಬಾ ಚಿಕ್ಕವನಾಗಿದ್ದೆ. ಆಗ ನಾನು ಕೇರಳದಲ್ಲಿ ಅಂಡರ್- 16 ಪಂದ್ಯವನ್ನಾಡುತ್ತಿದ್ದೆ. ನನ್ನ ಸ್ನೇಹಿತರ ಜೊತೆ ಫೈನಲ್ ಪಂದ್ಯ ವೀಕ್ಷಣೆ ಮಾಡಿದ್ದೆ. ಕೊನೆಯಲ್ಲಿ ಶೇರ್ ವಾರ್ನ್ ಮತ್ತು ಸೊಹೈಲ್ ತನ್ವೀರ್ ವಿನ್ನಿಂಗ್ ಶಾಟ್ ಹೊಡೆದ ಕ್ಷಣ ಈಗಲೂ ನನ್ನ ಕಣ್ಣ ಮುಂದಿದೆ,” ಎಂಬುದು ಸ್ಯಾಮ್ಸನ್ ಮಾತು.