Sankashti Chaturthi: ಬಾಣಾಸುರನನ್ನು ಸೋಲಿಸಲು ಶ್ರೀ ಕೃಷ್ಣನಿಗೆ ಸಹಾಯ ಮಾಡಿತ್ತು ಈ ವ್ರತ, ವಿಘ್ನರಾಜ ಸಂಕಷ್ಟ ಚತುರ್ಥಿಯ ಮಹತ್ವ ತಿಳಿಯಿರಿ | Vighnaraja Sankashti Chaturthi 2022 Know date significance and vrat katha


ಸಂಸ್ಕೃತದಲ್ಲಿ ಸಂಕಷ್ಟಿ ಎಂದರೆ ವಿಮೋಚನೆ. ಆದ್ದರಿಂದ, ಭಕ್ತರಿಗೆ ಎದುರಾಗುವ ತೊಂದರೆಯನ್ನು ಗಣೇಶ ನಿವಾರಿಸುತ್ತಾನೆ ಎಂಬ ನಂಬಿಕೆ ಇದೆ. ಹೀಗಾಗಿ ಭಕ್ತರು ತಮಗೆ ಯಾವುದೇ ಸಂಕಷ್ಟ, ಅಡತಡೆಗಳು ಎದುರಾಗದಿರಲಿ ಎಂದು ಇಂದು ಪ್ರಾರ್ಥಿಸುತ್ತಾರೆ.

Sankashti Chaturthi: ಬಾಣಾಸುರನನ್ನು ಸೋಲಿಸಲು ಶ್ರೀ ಕೃಷ್ಣನಿಗೆ ಸಹಾಯ ಮಾಡಿತ್ತು ಈ ವ್ರತ, ವಿಘ್ನರಾಜ ಸಂಕಷ್ಟ ಚತುರ್ಥಿಯ ಮಹತ್ವ ತಿಳಿಯಿರಿ

ಪ್ರಥಮ ಪೂಜಿತ ಗಣೇಶ

ವಿಘ್ನ ವಿನಾಶಕ, ಸಂಕಷ್ಟ ಹರ ಗಣಪತಿಯ ಭಕ್ತರಿಗೆ ಇಂದು ವಿಶೇಷ ದಿನ. ಏಕೆಂದರೆ ಸೆಪ್ಟೆಂಬರ್ 13ರ ಇಂದು ವಿಘ್ನರಾಜ ಸಂಕಷ್ಟ ಚತುರ್ಥಿ ಇದೆ(Vighnaraja Sankashti Chaturthi 2022). ವಿಘ್ನರಾಜ ಎಂದರೆ ಅಡೆತಡೆಗಳನ್ನು ನಿಯಂತ್ರಿಸುವವನು. ಆದ್ದರಿಂದ, ಭಕ್ತರು ತಮ್ಮ ಜೀವನದಲ್ಲಿ ಎದುರಾಗುವ ಅಡೆತಡೆಗಳು, ಸಂಕಷ್ಟಗಳನ್ನು ತೊಡೆದುಹಾಕಲು ಈ ದಿನ ಉಪವಾಸವನ್ನು ಮಾಡುತ್ತಾರೆ. ಹಾಗೂ ಪ್ರಥಮ ಪೂಜಿತ ಗಣೇಶನಿಗೆ(Lord Ganesha) ಪ್ರಾರ್ಥನೆ ಸಲ್ಲಿಸುತ್ತಾರೆ. ಸಂಸ್ಕೃತದಲ್ಲಿ ಸಂಕಷ್ಟಿ ಎಂದರೆ ವಿಮೋಚನೆ. ಆದ್ದರಿಂದ, ಭಕ್ತರಿಗೆ ಎದುರಾಗುವ ತೊಂದರೆಯನ್ನು ಗಣೇಶ ನಿವಾರಿಸುತ್ತಾನೆ ಎಂಬ ನಂಬಿಕೆ ಇದೆ. ಹೀಗಾಗಿ ಭಕ್ತರು ತಮಗೆ ಯಾವುದೇ ಸಂಕಷ್ಟ, ಅಡತಡೆಗಳು ಎದುರಾಗದಿರಲಿ ಎಂದು ಇಂದು ಪ್ರಾರ್ಥಿಸುತ್ತಾರೆ. ಈ ಸಂಕಷ್ಟ ಚತುರ್ಥಿಯು ಮಂಗಳವಾರ ಬಂದಿರುವುದರಿಂದ ಇದನ್ನು ಅಂಗಾರಕ ಸಂಕಷ್ಟ ಚತುರ್ಥಿ ಎಂದೂ ಕರೆಯುತ್ತಾರೆ.

ಚತುರ್ಥಿ ತಿಥಿ 2022 ಆರಂಭ ಸಮಯ

ಚತುರ್ಥಿ ತಿಥಿ ಸೆಪ್ಟೆಂಬರ್ 13, 2022 ರಂದು ಬೆಳಗ್ಗೆ 10:37ಕ್ಕೆ ಪ್ರಾರಂಭವಾಗುತ್ತದೆ. ಹಾಗೂ ಸೆಪ್ಟೆಂಬರ್ 14, 2022 ರ ಬೆಳಗ್ಗೆ 10:25ಕ್ಕೆ ಕೊನೆಗೊಳ್ಳುತ್ತದೆ. ರಾತ್ರಿ 08:26ಕ್ಕೆ ಸಂಕಷ್ಟಿ ದಿನದ ಚಂದ್ರೋದಯ.

ವಿಘ್ನರಾಜ ಸಂಕಷ್ಟ ಚತುರ್ಥಿ 2022 ಯೋಗ

ವಿಘ್ನರಾಜ ಸಂಕಷ್ಟ ಚತುರ್ಥಿಯಂದು ಸರ್ವಾರ್ಥ ಸಿದ್ಧಿ ಮತ್ತು ಅಮೃತ ಸಿದ್ಧಿ ಯೋಗವೂ ರೂಪುಗೊಳ್ಳುತ್ತಿದೆ. ಈ ಎರಡೂ ಯೋಗಗಳಲ್ಲಿ ಗಣೇಶನ ಆರಾಧನೆಯು ಎರಡು ಪಟ್ಟು ಫಲಿತಾಂಶವನ್ನು ನೀಡುತ್ತದೆ.

ಸರ್ವಾರ್ಥ ಸಿದ್ಧಿ ಯೋಗ – ಸೆಪ್ಟೆಂಬರ್‌ 13 ರಂದು ಮಂಗಳವಾರ ಬೆಳಗ್ಗೆ 06:36 ರಿಂದ ಸೆಪ್ಟೆಂಬರ್‌ 14 ರಂದು ಬುಧವಾರ ಬೆಳಗ್ಗೆ 6:12 ರವರೆಗೆ

ಅಮೃತ ಸಿದ್ಧಿ ಯೋಗ – ಸೆಪ್ಟೆಂಬರ್‌ 13 ರಂದು ಮಂಗಳವಾರ ಬೆಳಗ್ಗೆ 06:36 ರಿಂದ ಸೆಪ್ಟೆಂಬರ್‌ 14 ರಂದು ಬುಧವಾರ ಬೆಳಗ್ಗೆ 6:12 ರವರೆಗೆ

ವಿಘ್ನರಾಜ ಸಂಕಷ್ಟಿ ಗಣೇಶ ಚತುರ್ಥಿ ಮಹತ್ವ

ಈ ದಿನದಂದು ಶಿವನು ತನ್ನ ಮಗ ಗಣೇಶನನ್ನು ಎಲ್ಲಾ ದೇವರುಗಳಿಗಿಂತ ಶ್ರೇಷ್ಠನೆಂದು ಘೋಷಿಸಿದನು ಎಂದು ನಂಬಲಾಗಿದೆ. ಪ್ರತಿ ತಿಂಗಳು, ಗಣಪತಿಯನ್ನು ಬೇರೆ ಬೇರೆ ಹೆಸರು ಮತ್ತು ಪೀಠದಿಂದ ಪೂಜಿಸಲಾಗುತ್ತದೆ. ಈ ದಿನ ಭಕ್ತರು ಬೇಗ ಎದ್ದು ಸ್ನಾನ ಮಾಡಿ ನಂತರ ಶುಭ್ರವಾದ ಬಟ್ಟೆಯನ್ನು ಧರಿಸಿ ಗಣೇಶನಿಗೆ ಪೂಜಿಸುತ್ತಾರೆ. ಭಕ್ತರು ವ್ರತ ಕಥಾ ಓದುವುದರೊಂದಿಗೆ ಸಂಜೆ ವ್ರತ ಪೂಜೆ ನಡೆಯುತ್ತದೆ. ಚತುರ್ಥಿ ವ್ರತದ ಪ್ರಭಾವದಿಂದ ವ್ಯಕ್ತಿಯ ಎಲ್ಲಾ ಅಡೆತಡೆಗಳು ದೂರವಾಗುತ್ತವೆ, ಎಲ್ಲಾ ತೊಂದರೆಗಳು ದೂರವಾಗುತ್ತವೆ. ಚತುರ್ಥಿ ತಿಥಿಯ ಶ್ರಾದ್ಧವನ್ನು ಸಹ ಈ ದಿನ ಪಿತೃ ಪಕ್ಷದಲ್ಲಿ ಮಾಡಲಾಗುತ್ತದೆ.

TV9 Kannada


Leave a Reply

Your email address will not be published.