Sathya Sai Baba Birth Anniversary: ಪುಟ್ಟಪರ್ತಿ ಸತ್ಯಸಾಯಿ ಬಾಬಾ ಆಶ್ರಮದಲ್ಲಿದೆ ಇಷ್ಟಾರ್ಥ ಈಡೇರಿಸುವ ವಿಶ್​ಫುಲ್​ ಫಿಲ್ಲಿಂಗ್​ ಟ್ರಿ ವಿಶ್ – Sathya Sai Baba Birth Anniversary: Here is the life and legacy Puttaparthi Sai Baba in kannada


ಅನಂತಪುರ ಜಿಲ್ಲೆಯ ಪುಟ್ಟಪರ್ತಿಯಲ್ಲಿರುವ ಪ್ರಶಾಂತಿ ನಿಲಯದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ 94ನೇ ಜನ್ಮ ದಿನೋತ್ಸವವನ್ನು ಆಚರಿಸಲಾಗುತ್ತಿದ್ದು. ಇದು ಅವರ ಮರಣದ ನಂತರ 12ನೇ ವರ್ಷದ ಜನ್ಮದಿನವಾಗಿದೆ.

Sathya Sai Baba Birth Anniversary: ಪುಟ್ಟಪರ್ತಿ ಸತ್ಯಸಾಯಿ ಬಾಬಾ ಆಶ್ರಮದಲ್ಲಿದೆ ಇಷ್ಟಾರ್ಥ ಈಡೇರಿಸುವ ವಿಶ್​ಫುಲ್​ ಫಿಲ್ಲಿಂಗ್​ ಟ್ರಿ ವಿಶ್

ಸತ್ಯ ಸಾಯಿ ಬಾಬಾ

ಅಮರಾವತಿ: ಭಗವಾನ್ ಶ್ರೀ ಸತ್ಯಸಾಯಿ ಬಾಬಾ(Sathya Sai Baba Birth) ಅವರು 1926 ನವೆಂಬರ್ 23 ರಂದು ಜನಿಸಿದರು. ಸ್ವತಃ ತಾವೇ ಶಿರಡಿ ಸಾಯಿಬಾಬಾ(Shirdi Sai Baba) ಅವರ ಪುನರ್ಜನ್ಮ ಎಂದು ಹೇಳಿಕೊಂಡಿದ್ದರು. 2011 ಏಪ್ರಿಲ್​ 24 ರಂದು ಸ್ವರ್ಗಸ್ಥರಾದರು. ಸತ್ಯಸಾಯಿ ಜಯಂತಿಯನ್ನು ಪುಟ್ಟಪರ್ತಿಯಲ್ಲಿ(Puttaparthi) ವೇಣುಗೋಪಾಲ ಸ್ವಾಮಿ ರಥೋತ್ಸವದೊಂದಿಗೆ ಏಳು ದಿನಗಳ ಕಾಲ ಆಚರಿಸಲಾಗುತ್ತದೆ.

ಇನ್ನು ಈ ಬಾರಿ ನವೆಂಬರ್​ 18ರಂದು ರಥೋತ್ಸವ ನಡೆದಿದ್ದು, 19 ರಂದು ಗಿರಿಜನ ಅಭಿವೃದ್ಧಿ ಕಾರ್ಯಕ್ರಮದ ಜೊತೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಲಾಗಿದ್ದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ತೆಲಂಗಾಣ ರಾಜ್ಯಪಾಲ ಡಾ ತಮಿಳಿಸೈ ಸೌಂದರರಾಜನ್ ಭಾಗವಹಿಸಿದ್ದರು. ಶ್ರೀ ಸತ್ಯಸಾಯಿಬಾಬಾ ಅವರ 94ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ನವೆಂಬರ್ 23 ರಂದು ಪ್ರಶಾಂತಿ ನಿಲಯಕ್ಕೆ ಭೇಟಿ ನೀಡಲಿದ್ದಾರೆ.

‘ಪ್ರಶಾಂತಿ ನಿಲಯಂಎಂದು ಕರೆಯಲ್ಪಡುವ ಸತ್ಯಸಾಯಿ ಆಶ್ರಮವು ಸಾಯಿಬಾಬಾ ಅವರು ವಾಸಿಸುವ ಸ್ಥಳವಾಗಿದೆ. ಇದು 1950 ರಲ್ಲಿ ಉದ್ಘಾಟನೆ ಮಾಡಲಾಯಿತು. ಇನ್ನು ಈ ಆಶ್ರಮದಲ್ಲಿ ವರ್ಷಪೂರ್ತಿ ನಾನಾ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ. ಈ ಆಶ್ರಮವು ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿದ್ದು, ಸಾವಿರಾರು ಜನರಿಗೆ ಆಶ್ರಯ ಕಲ್ಪಿಸಿದೆ.

TV9 Kannada


Leave a Reply

Your email address will not be published.