Savings Account Interest: ಭಾರತದ ಪ್ರಮುಖ ಬ್ಯಾಂಕ್​ಗಳ ಪೈಕಿ ಉಳಿತಾಯ ಖಾತೆಗಳ ಮೇಲೆ ಹೆಚ್ಚಿನ ಬಡ್ಡಿ ದರ ಎಲ್ಲಿ ಗೊತ್ತಾ? | India Major Banks Savings Account Rate Of Interest Listed Here


Savings Account Interest: ಭಾರತದ ಪ್ರಮುಖ ಬ್ಯಾಂಕ್​ಗಳ ಪೈಕಿ ಉಳಿತಾಯ ಖಾತೆಗಳ ಮೇಲೆ ಹೆಚ್ಚಿನ ಬಡ್ಡಿ ದರ ಎಲ್ಲಿ ಗೊತ್ತಾ?

ಸಾಂದರ್ಭಿಕ ಚಿತ್ರ

ಬ್ಯಾಂಕ್​ಗಳಲ್ಲಿ ಶುರು ಮಾಡುವ ಸೇವಿಂಗ್ಸ್ ಬ್ಯಾಂಕ್ ಅಕೌಂಟ್ (Savings Bank Account) ಅಥವಾ ಉಳಿತಾಯ ಖಾತೆ ಎಂಬುದು ಪ್ರಾಥಮಿಕವಾದ ಬ್ಯಾಂಕ್ ಖಾತೆ. ಸ್ವ ಉದ್ಯೋಗಿಗಳು, ಸಂಬಳದಾರರು ಹೀಗೆ ಒಂದು ಬಗೆಯಲ್ಲಿ ಆದಾಯ ಇರುವಂಥವರು ತಮ್ಮ ಹಣವನ್ನು ಉಳಿತಾಯ ಮಾಡುವುದಕ್ಕೆ ಹಾಗೂ ಅಗತ್ಯ ಬಿದ್ದಾಗ ವಿಥ್​ಡ್ರಾ ಮಾಡುವುದಕ್ಕೆ ಬಳಸಬಹುದು. ತಕ್ಷಣವೇ ಹಣ ಬೇಕೆಂದಾಗ ದೊರೆಯುತ್ತದೆ ಮತ್ತು ಬಡ್ಡಿ ಸಿಗುತ್ತದೆ ಎಂಬುದು ಇದರ ಅನುಕೂಲ. ಆ ಉಳಿತಾಯ ಖಾತೆಯಲ್ಲಿ ಇರುವ ಮೊತ್ತದ ಮೇಲೆ ಬಡ್ಡಿ ಅಂತೂ ಸಿಗುತ್ತದೆ. ಹಿರಿಯ ಪೆನ್ಷನರ್​ಗಳ ಮಧ್ಯದಲ್ಲಿ ಉಳಿತಾಯ ಖಾತೆ ಬಹಳ ಜನಪ್ರಿಯವಾದದ್ದು. ಅಥವಾ ಕೆಲವು ತಿಂಗಳ ವೇತನವನ್ನು ಕೈಯಲ್ಲಿ ಇಟ್ಟುಕೊಳ್ಳಲು ಬಯಸುವವರಿಗೂ ಇದು ಸೂಕ್ತ. ಬ್ಯಾಂಕ್​ಗಳಲ್ಲಿ ವಿವಿಧ ಬಗೆಯ ಉಳಿತಾಯ ಖಾತೆಯನ್ನು ತೆರೆಯಲು ಅವಕಾಶ ಮಾಡಿಕೊಡುತ್ತವೆ.

ವೇತನ ಖಾತೆ, ಹಿರಿಯ ನಾಗರಿಕರ ಉಳಿತಾಯ ಖಾತೆ, ಶೂನ್ಯ ಬ್ಯಾಲೆನ್ಸ್ ಖಾತೆ ಇವೆಲ್ಲ ಬಹಳ ಪ್ರಖ್ಯಾತವಾದವು. ಉಳಿತಾಯ ಖಾತೆ ಮೇಲೆ ಬಡ್ಡಿ ದರವನ್ನು ಸಾಮಾನ್ಯವಾಗಿ ದೈನಂದಿನ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ಆ ದಿನದ ಕೊನೆಗೆ ಎಷ್ಟು ಬಾಕಿ ಇರುತ್ತದೆ ಎಂಬುದರ ಆಧಾರದ ಮೇಲೆ ಬಡ್ಡಿ ಲೆಕ್ಕ ಹಾಕಲಾಗುತ್ತದೆ. ಆ ನಂತರ ಮೊತ್ತವನ್ನು ತ್ರೈಮಾಸಿಕವಾಗಿ ಅಥವಾ ಅರ್ಧ ವಾರ್ಷಿಕವಾಗಿ ಪಾವತಿಸಲಾಗುತ್ತದೆ. ಅದು ಶೇ 4ರಿಂದ 7.1ರ ಮಧ್ಯೆ ಉಳಿತಾಯ ಖಾತೆಗೆ ಜಮೆ ಮಾಡಲಾಗುತ್ತದೆ. ಭಾರತದ ಬ್ಯಾಂಕ್​ಗಳು ವಿದೇಶೀ ಬ್ಯಾಂಕ್​ಗಳು ಉಳಿತಾಯ ಖಾತೆ ಮೇಲೆ ನೀಡುವ ಬಡ್ಡಿ ದರದ ಹೋಲಿಕೆಯನ್ನು ಇಲ್ಲಿ ನಿಮ್ಮೆದುರು ಇಡಲಾಗಿದೆ.

DBS ಬ್ಯಾಂಕ್
* ರೂ. 1 ಲಕ್ಷವರೆಗಿನ ಬಾಕಿಗೆ ಶೇ 3.25ರ ಬಡ್ಡಿದರಗಳನ್ನು ಪಡೆಯುತ್ತದೆ* ರೂ. 1 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಯಾವುದೇ ಬ್ಯಾಲೆನ್ಸ್‌ಗಳು ಹಾಗೂ ರೂ. 2 ಲಕ್ಷದವರೆಗೆ ಹೆಚ್ಚಿನ ಮೊತ್ತದ ಮೇಲೆ ಶೇ 3.5 ಪಡೆಯುತ್ತವೆ** ರೂ 2 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಯಾವುದೇ ಬ್ಯಾಲೆನ್ಸ್‌ಗಳು ಹಾಗೂ ರೂ. 5 ಲಕ್ಷಗಳ ತನಕ ಹೆಚ್ಚಿನ ಮೊತ್ತದ ಮೇಲೆ ಶೇ 4 ಅನ್ನು ಪಡೆಯುತ್ತವೆ** ರೂ. 5 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಯಾವುದೇ ಬ್ಯಾಲೆನ್ಸ್‌ಗಳು ಹಾಗೂ ರೂ. 5 ಕೋಟಿಗಳು ಅದರ ಮೇಲೆ ಹೆಚ್ಚಿನ ಮೊತ್ತದ ಮೇಲೆ ಶೇ 3 ಅನ್ನು ಪಡೆಯುತ್ತವೆ** ರೂ. 5 ಕೋಟಿಗಳು ಮತ್ತು ಅದಕ್ಕಿಂತ ಹೆಚ್ಚಿನ ಯಾವುದೇ ಬ್ಯಾಲೆನ್ಸ್‌ಗಳು ಅದರ ಮೇಲೆ ಹೆಚ್ಚಿನ ಮೊತ್ತದ ಮೇಲೆ ಶೇ 3.75 ದೊರೆಯುತ್ತದೆ.

ಎಚ್​ಎಸ್​ಬಿಸಿ ಬ್ಯಾಂಕ್
10 ಕೋಟಿ ರೂಪಾಯಿವರೆಗಿನ ಮೊತ್ತದ ಮೇಲೆ ಶೇ 2 ರೂ. 10 ಕೋಟಿಗಿಂತ ಹೆಚ್ಚಿನ ಠೇವಣಿಗಳ ಮೇಲೆ ಶೇ 2.50

ಸ್ಟ್ಯಾಂಡರ್ಡ್ ಚಾರ್ಟರ್ಡ್
* 50 ಲಕ್ಷ ರೂಪಾಯಿವರೆಗಿನ ಬಾಕಿಗೆ ಶೇ 2.75
* 50 ಲಕ್ಷಕ್ಕಿಂತ ಹೆಚ್ಚಿನ ಮತ್ತು 40 ಕೋಟಿ ರೂಪಾಯಿವರೆಗಿನ ಬಾಕಿ ಮೇಲೆ ಶೇ 3.25
* ರೂ 40 ಕೋಟಿಗಿಂತ ಹೆಚ್ಚಿನ ಠೇವಣಿಗಳಿಗೆ ಶೇ 0.50

TV9 Kannada


Leave a Reply

Your email address will not be published.