Savings Money: ಏರುಮುಖವಾಗಿ ಸಾಗುತ್ತಿರುವ ಅಗತ್ಯ ವಸ್ತುಗಳ ಬೆಲೆ: ಹಣದುಬ್ಬರದ ಪರಿಸ್ಥಿತಿಯಲ್ಲಿ ಉಳಿತಾಯ ಮಾಡಲು ಇಲ್ಲಿದೆ ಟಿಪ್ಸ್​ | Tips for saving in an inflationary situation


Savings Money: ಏರುಮುಖವಾಗಿ ಸಾಗುತ್ತಿರುವ ಅಗತ್ಯ ವಸ್ತುಗಳ ಬೆಲೆ: ಹಣದುಬ್ಬರದ ಪರಿಸ್ಥಿತಿಯಲ್ಲಿ ಉಳಿತಾಯ ಮಾಡಲು ಇಲ್ಲಿದೆ ಟಿಪ್ಸ್​

ಸಾಂದರ್ಭಿಕ ಚಿತ್ರ

ರೆಸ್ಟೋರೆಂಟ್​ಗಳಲ್ಲಿ ಮಾತ್ರವಲ್ಲ, ಆನ್ ಲೈನ್​ನಲ್ಲಿ ಆಹಾರ ಆರ್ಡರ್ ಮಾಡುವುದು ದುಬಾರಿಯಾಗಿದೆ. ಹೀಗಿದ್ದಾಗ ಹಣ ಉಳಿತಾಯ ಮಾಡಲು ಕೆಲವೊಂದು ಟಿಪ್ಸ್​ಗಳನ್ನು ನೀಡಲಾಗಿದೆ. ಇವುಗಳು ನಿಮಗೆ ಸಹಾಯಕವಾಗಬಹುದು.

ಪ್ರಸ್ತುತ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ (Cost of essential items) ಗಳು ಏರುಮುಖವಾಗಿ ಸಾಗುತ್ತಲೇ ಇದೆ. ಒಂದೆಡೆ ರಷ್ಯಾ ಮತ್ತು ಉಕ್ರೇನ್ (russia and ukraine) ದೇಶಗಳ ನಡುವಿನ ಯುದ್ಧದಿಂದಾಗಿ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಇದರಿಂದ ಅನೇಕ ದೇಶಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಭಾರತದಲ್ಲೂ ಹಣದುಬ್ಬರ(Inflation) ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸಲು ರೆಸ್ಟೋರೆಂಟ್​ಗಳು, ಬಾರ್​ಗಳು, ಕೆಫೆಗಳಂಥ ಅನೇಕ ವ್ಯಾಪಾರ ಸಂಸ್ಥೆಗಳು ವಸ್ತುಗಳ ಬೆಲೆ ಏರಿಸಿವೆ. ಇಷ್ಟೊಂದು ದುಬಾರಿಯಾದರೆ ಹೇಗಪ್ಪಾ ಎಂಬ ಪರಿಸ್ಥಿತಿ ಬಂದಿದೆ. ಹೀಗಿದ್ದಾಗ ಹಣ ಉಳಿತಾಯ ಮಾಡುವುದು ಹೇಗೆ?

ಆಹಾರ ಮತ್ತು ಪಾನೀಯಗಳ ಬೆಲೆಗಳು ಶೇ.15ರಷ್ಟು ಏರಿಕೆಯಾಗಿದೆ. ರೆಸ್ಟೋರೆಂಟ್ ಮಾಲೀಕರ ಪ್ರಕಾರ, ಕಳೆದ ಮೂರು ತಿಂಗಳಲ್ಲಿ ಬೆಲೆಗಳು ಶೇ.7ರಿಂದ 30ರ ವರೆಗೆ ಏರಿಕೆಯಾಗಿದೆ. ರೆಸ್ಟೋರೆಂಟ್​ಗಳಲ್ಲಿ ಮಾತ್ರವಲ್ಲ, ಆನ್ ಲೈನ್​ನಲ್ಲಿ ಆಹಾರ ಆರ್ಡರ್ ಮಾಡುವುದು ದುಬಾರಿಯಾಗಿದೆ. ಡೋಮಿನೋಸ್ ಫಿಜಾ, ಕೆಎಫ್ ಸಿ ಮತ್ತು ಫಿಜ್ಜಾ ಹಟ್ ಇವುಗಳು ತಮ್ಮ ಬೆಲೆಗಳನ್ನು ಏರಿಸಿವೆ.

ಸ್ಪೆಷಾಲಿಟಿ ರೆಸ್ಟೋರೆಂಟ್ ಗಳನ್ನು ನಡೆಸುವ ರೆಸ್ಟೋರೆಂಟ್ ಪ್ಲಾಂಟ್​ಗಳಾದ ಮೇನ್ ಲ್ಯಾಂಡ್ ಚೈನಾ, ಏಷ್ಯಾ ಕಿಚನ್ ಮತ್ತು ಸಿಗ್ರಿ ಗ್ಲೋಬಲ್ ಇವುಗಳ ಅಧ್ಯಕ್ಷ ಅಂಜನ್ ಚಟರ್ಜಿ ಹೇಳುವ ಪ್ರಕಾರ, ರಷ್ಯಾ- ಉಕ್ರೇನ್ ಯುದ್ಧ ಈ ರೀತಿ ಪರಿಣಾಮ ಬೀರುತ್ತದೆಂದು ತಾವು ನಿರೀಕ್ಷಿಸಿರಲಿಲ್ಲ ಎನ್ನುತ್ತಾರೆ. ಸನ್ ಫ್ಲವರ್ ಆಯಿಲ್ ಮತ್ತು ಪೆಟ್ರೋಲ್- ಡೀಸೆಲ್ ಬೆಲೆಗಳು ಮಿತಿ ಮೀರಿ ಏರಿಕೆಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ ರೆಸ್ಟೋರೆಂಟ್ ಮಾಲೀಕರ ಬಳಿ ಬೆಲೆ ಏರಿಸದ ಹೊರತು ಬೇರೆ ವಿಧಿ ಇಲ್ಲ.

ಗ್ರಾಹಕ ದರ ಸೂಚಿಯ ಪ್ರಕಾರ, ಫೆಬ್ರವರಿಯಲ್ಲಿ ಶೇ.5.85ರಷ್ಟು ಇದ್ದ  ಆಹಾರ ಹಣದುಬ್ಬರ ಮಾರ್ಚ್​ನಲ್ಲಿ ಶೇ.7.68ರಷ್ಟಾಯಿತು. ಇಂಥ ಹಣದುಬ್ಬರ ವಾತಾವರಣದಲ್ಲಿ ನಿಮ್ಮ ಖರ್ಚುಗಳನ್ನು ಉಳಿಸಲು ನಾವು ಮುಂದೆ ನೀಡುವ ಕೆಲವೊಂದು ಟಿಪ್ಸ್​ಗಳು ಸಹಾಯಕವಾಗಬಹುದು.

  1. ಡೈನ್ ಔಟ್, ಈಸಿ ಡಿನ್ನರ್, ನಿಯರ್ ಬೈ ನಂತಹ ಕೆಲ ಆಪ್​ಗಳ ಮೂಲಕ ರೆಸ್ಟೋರೆಂಟ್​ಗಳಲ್ಲಿ ರಿಸರ್ವೇಷನ್ ಬುಕ್ ಮಾಡುವ ಜೊತೆಗೆ ನಿಮ್ಮ ಬಿಲ್ಲಿನ ಮೇಲೆ ರಿಯಾಯಿತಿಯನ್ನು ಪಡೆಯಬಹುದು. ನೀವು ಝೋಮ್ಯಾಟೋ ಪ್ರೋ, ಡೈನ್ ಔಟ್ ಪಾರ್ಸ್ ಪೋರ್ಟ್, ಸ್ವಿಗ್ಗಿ ಒನ್ ಆಪ್​ಗಳಿಗೆ ಸಬ್ ಸ್ಕ್ರೈಬ್ ಆದರೆ ಅಥವಾ ಸದಸ್ಯತ್ವ ಪಡೆದರೆ, ನಿಮಗೆ ನಿಮ್ಮ ಬಿಲ್ಲಿನ ಮೇಲೆ ಶೇ.15ರಿಂದ 25ರವರೆಗೆ ರಿಯಾಯಿತಿ ಸಿಗುತ್ತದೆ. ಈ ಆಪ್​ಗಳು ವಿವಿಧ ರೆಸ್ಟೋರೆಂಟ್​ಗಳೊಂದಿಗೆ ಸಂಪರ್ಕ ಹೊಂದಿದ್ದು, ಅದರಿಂದ ನಮಗೆ ವಿವಿಧ ರೀತಿಯ ರಿಯಾಯಿತಿಗಳು ಡೈನಿಂಗ್ ಹಾಗೂ ಡೆಲಿವರಿ ಮೇಲೆ ದೊರೆಯಲಿದೆ.
  2. ನೀವು ಈ ಆಪ್ ಬಳಸುವಾಗ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿದರೂ ಆಫರ್​ಗಳು ದೊರೆಯುತ್ತದೆ. ನೀವು ನಿಗದಿತ ಕಾರ್ಡ್ ಬಳಸಿದರೆ, ನಿಮ್ಮ ಬಿಲ್​ಗಳ ಮೇಲೆ ರಿಯಾಯಿತಿ ಪಡೆಯಬಹುದು. ಹ್ಯಾಪಿ ಅವರ್ಸ್ ವೇಳೆ ನೀವು ಲಿಕ್ಕರ್​ಗಳ ಮೇಲೆ ಬೈ ಒನ್ ಗೆಟ್ ಒನ್ ಫ್ರೀ ಆಫರ್ ಸಿಗಲಿದೆ. ಆಹಾರ ವಸ್ತುಗಳ ಮೇಲೂ ರಿಯಾಯಿತಿ ದೊರೆಯಲಿದೆ.
  3. ಫೀಕ್ ಟೈಮ್​ನಲ್ಲಿ ಪಾರ್ಸಲ್ ಕೊಂಡಾಗಲೂ ನಿಮಗೆ ಹೆಚ್ಚಿನ ರಿಯಾಯಿತಿ ದೊರೆಯುತ್ತದೆ. ಅದರರ್ಥ ಜನಭರಿತ ಡೈನಿಂಗ್ ರೆಸ್ಟೋರೆಂಟ್​ಗಳಿಗೆ ಹೋಗಿ ಕಾದು ಕುಳಿತು ಆಹಾರ ಸೇವಿಸುವ ಬದಲು, ಆಹಾರ ಪಾರ್ಸಲ್ ಕೊಂಡು ಹೋಗಲು ಇಂತಹ ಸಂದರ್ಭದಲ್ಲಿ ಕೆಲವು ರೆಸ್ಟೋರೆಂಟ್​ಗಳು ಶೇಕಡಾ 10ರವರೆಗೆ ರಿಯಾಯಿತಿ ನೀಡುತ್ತವೆ. ವಾರಾಂತ್ಯದ ಬದಲು ನೀವು ವಾರದ ದಿನಗಳಲ್ಲಿ ರೆಸ್ಟೋರೆಂಟ್​ಗಳಿಗೆ ಹೋಗಬಹುದು. ವಾರದ ದಿನಗಳಲ್ಲಿ ರೆಸ್ಟೋರೆಂಟ್ ಗಳು ಹೆಚ್ಚು ಜನಭರಿತವಾಗಿರುವುದಿಲ್ಲ. ಗ್ರಾಹಕರನ್ನು ಆಕರ್ಷಿಸಲು ವಿವಿಧ ರೀತಿಯ ರಿಯಾಯಿತಿಗಳನ್ನು ನೀಡುತ್ತಾರೆ.

TV9 Kannada


Leave a Reply

Your email address will not be published. Required fields are marked *