SBI ಬ್ಯಾಂಕ್​ ಮ್ಯಾನೇಜರ್​ಗೆ ಚಾಕು ತೋರಿಸಿ ₹4 ಲಕ್ಷ ಹಣ, ಚಿನ್ನಾಭರಣ ಹೊತ್ತೊಯ್ದ ಖದೀಮ


ಬೆಂಗಳೂರು: ಬ್ರ್ಯಾಂಚ್​​ ಮ್ಯಾನೇಜರ್​ಗೆ ಚಾಕು ತೋರಿಸಿದ ಖದೀಮ ಬರೋಬ್ಬರಿ 4 ಲಕ್ಷ ನಗದು ಹಾಗೂ ಚಿನ್ನಾಭರಣಗಳನ್ನು ಲೂಟಿ ಮಾಡಿ ಪರಾರಿಯಾದ ಘಟನೆ ನಗರದ ಮಡಿವಾಳ ಎಸ್​ಬಿಐ ಬ್ಯಾಂಕ್​ನಲ್ಲಿ ನಡೆದಿದೆ.

ಇಂದು ಸಂಜೆ ಆರು ಗಂಟೆಯ ಹೊತ್ತಿಗೆ ಬ್ಯಾಂಕ್​ಗೆ ನುಗ್ಗಿದ ಖದೀಮ ಬ್ರ್ಯಾಂಚ್ ಮ್ಯಾನೇಜರ್ ಗೆ ಚಾಕು ತೋರಿಸಿ ಹೆದರಿಸಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ಹಣ ಮತ್ತು 100 ಗ್ರಾಂ ನಷ್ಟು ಚಿನ್ನಾಭರಣಗಳನ್ನು ಹೊತ್ತೊಯ್ದಿದ್ದಾನೆ. ಈ ಬ್ಯಾಂಕ್​ನಲ್ಲಿ ಕೇವಲ ಇಬ್ಬರೆ ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಖದೀಮ ಏಕಾಂಗಿಯಾಗಿ ಬಂದು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಸದ್ಯ ಸ್ಥಳಕ್ಕೆ ಮಡಿವಾಳ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಸಿಬ್ಬಂದಿ ಬಳಿ ಘಟನೆಯ ಮಾಹಿತಿ ಪಡೆದು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

News First Live Kannada


Leave a Reply

Your email address will not be published. Required fields are marked *