SBI ATM Cash Withdraw: ಒಟಿಪಿ ಮೂಲಕ ಎಸ್​ಬಿಐ ಎಟಿಎಂ ನಗದು ವಿಥ್​ಡ್ರಾ ಹೇಗೆ ಗೊತ್ತೆ? | How To Withdraw Cash From SBI ATM Through OTP Here Is The Details


SBI ATM Cash Withdraw: ಒಟಿಪಿ ಮೂಲಕ ಎಸ್​ಬಿಐ ಎಟಿಎಂ ನಗದು ವಿಥ್​ಡ್ರಾ ಹೇಗೆ ಗೊತ್ತೆ?

ಸಾಂದರ್ಭಿಕ ಚಿತ್ರ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದ ಒಟಿಪಿ ಮೂಲಕವಾಗಿ ನಗದು ವಿಥ್​ಡ್ರಾ ಮಾಡುವುದು ಹೇಗೆ? ಇಲ್ಲಿದೆ ಹಂತಹಂತವಾದ ಮಾಹಿತಿ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (SBI) 24 ಗಂಟೆಗಳ OTP ಆಧಾರಿತ ನಗದು ಹಿಂಪಡೆಯುವ ಆಯ್ಕೆಯನ್ನು ಪರಿಚಯಿಸುವ ಮೂಲಕ ಎಟಿಎಂಗಳಲ್ಲಿ ನಗದು ಹಿಂಪಡೆಯುವ ಭದ್ರತಾ ಮಟ್ಟವನ್ನು ಹೆಚ್ಚಿಸಿದೆ. ಎಸ್‌ಬಿಐನಿಂದ 2020ರ ಜನವರಿ ತನ್ನ ಎಟಿಎಂಗಳಿಗೆ ಒಂದು-ಟೈಮ್ ಪಾಸ್‌ವರ್ಡ್ (OTP) ಆಧಾರಿತ ನಗದು ಹಿಂಪಡೆಯುವ ವ್ಯವಸ್ಥೆಯನ್ನು ಪ್ರಾರಂಭಿಸಿತು. “ನಮ್ಮ ಒಟಿಪಿ ಆಧಾರಿತ ನಗದು ಹಿಂತೆಗೆದುಕೊಳ್ಳುವ ವ್ಯವಸ್ಥೆಯು ಎಸ್​ಬಿಐ ಎಟಿಎಂಗಳಲ್ಲಿ ವಹಿವಾಟು ನಡೆಸುವುದು ವಂಚಕರ ವಿರುದ್ಧದ ಸಂರಕ್ಷಣೆ ಆಗಿದೆ. ನಿಮ್ಮನ್ನು ವಂಚನೆಗಳಿಂದ ರಕ್ಷಿಸುವುದು ಯಾವಾಗಲೂ ನಮ್ಮ ಪ್ರಮುಖ ಆದ್ಯತೆಯಾಗಿದೆ,” ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದೆ. ಒಟಿಪಿ ಎಂಬುದು ಸಿಸ್ಟಂನಿಂದ ಜನರೇಟ್ ಆದ ಸಂಖ್ಯೆಗಳನ್ನು ಒಳಗೊಂಡಂಥದ್ದು ಆಗಿದ್ದು, ಅದು ಒಂದೇ ವಹಿವಾಟಿಗೆ ಬಳಕೆದಾರರನ್ನು ದೃಢೀಕರಿಸುತ್ತದೆ. ಈ ಒಟಿಪಿ ಆಧಾರಿತ ನಗದು ಹಿಂಪಡೆಯುವ ಸೌಲಭ್ಯವು ರೂ. 10,000ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಮತ್ತು ಎಸ್​ಬಿಐನ ಎಟಿಎಂಗಳಲ್ಲಿ ಲಭ್ಯವಿದೆ.

ಎಸ್​ಬಿಐನ ಒಟಿಪಿ ಆಧಾರಿತ ನಗದು ಹಿಂಪಡೆಯುವ ವ್ಯವಸ್ಥೆ ಕಾರ್ಯನಿರ್ವಹಣೆ ಹೀಗಿದೆ:

– ಎಸ್‌ಬಿಐ ಕಾರ್ಡ್‌ದಾರರು ಎಟಿಎಂನಲ್ಲಿ ನಗದು ಹಿಂಪಡೆಯುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಸಮಯದಲ್ಲಿ ಎಸ್‌ಬಿಐನಲ್ಲಿ ನೋಂದಾಯಿಸಲಾದ ಅವರ ಮೊಬೈಲ್ ಸಂಖ್ಯೆಗೆ ಒಟಿಪಿ ಸ್ವೀಕರಿಸುತ್ತಾರೆ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿಯನ್ನು ಕಳುಹಿಸಲಾಗುತ್ತದೆ.

– ಒಟಿಪಿಯು ನಾಲ್ಕು ಅಂಕಿಗಳ ಸಂಖ್ಯೆಯಾಗಿದ್ದು ಅದು ಒಂದೇ ವಹಿವಾಟಿಗೆ ಬಳಕೆದಾರರನ್ನು ದೃಢೀಕರಿಸುತ್ತದೆ. ಎಸ್​ಬಿಐ ಕಾರ್ಡ್‌ದಾರರು ಹಣವನ್ನು ಹಿಂಪಡೆಯಲು ಈ ಪರದೆಯಲ್ಲಿ ಬ್ಯಾಂಕ್‌ನಲ್ಲಿ ನೋಂದಾಯಿಸಲಾದ ತಮ್ಮ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ ಒಟಿಪಿ ಅನ್ನು ನಮೂದಿಸಬೇಕು.

– ಇದು ಎಸ್​ಬಿಐ ಕಾರ್ಡ್‌ದಾರರನ್ನು ಅನಧಿಕೃತ ಎಟಿಎಂ ನಗದು ಹಿಂಪಡೆಯುವಿಕೆಯಿಂದ ರಕ್ಷಿಸುತ್ತದೆ.

ಎಸ್‌ಬಿಐ ಎಟಿಎಂಗಳಲ್ಲಿ ಹಣವನ್ನು ಹಿಂಪಡೆಯುವಾಗ ಸ್ಕಿಮ್ ಮಾಡಿದ/ಕ್ಲೋನ್ ಮಾಡಿದ ಕಾರ್ಡ್‌ಗಳ ಖಾತೆಯಲ್ಲಿ ಅನಧಿಕೃತ ವಹಿವಾಟುಗಳ ಅಪಾಯದಿಂದ ಗ್ರಾಹಕರನ್ನು ಇದು ರಕ್ಷಿಸುತ್ತದೆ ಎಂದು ಎಸ್‌ಬಿಐ ಹಿಂದಿನ ಫೇಸ್‌ಬುಕ್ ಪೋಸ್ಟ್ ಹೇಳಿದೆ.

TV9 Kannada


Leave a Reply

Your email address will not be published. Required fields are marked *