SBI credit card: ಕೆಲವು ವಹಿವಾಟುಗಳ ಪ್ರೊಸೆಸಿಂಗ್ ಶುಲ್ಕ ಹೆಚ್ಚಿಸಿದ ಎಸ್​ಬಿಐ; ವಿವರ ಇಲ್ಲಿದೆ – SBI credit card Processing Fees revised for few transactions Know details here latest business news in Kannada


SBI credit card Processing Fees; ಕ್ರೆಡಿಟ್ ಕಾರ್ಡ್ ಪ್ರೊಸೆಸಿಂಗ್ ಶುಲ್ಕ ಪರಿಷ್ಕರಣೆ ಸಂಬಂಧ ಎಸ್​ಬಿಐ ವೆಬ್​ಸೈಟ್​​ನಲ್ಲಿಯೂ ಮಾಹಿತಿ ನೀಡಲಾಗಿದ್ದು, ಗ್ರಾಹಕರಿಗೆ ಎಸ್​ಎಂಎಸ್ ಸಂದೇಶ ಕಳುಹಿಸಲಾಗಿದೆ.

SBI credit card: ಕೆಲವು ವಹಿವಾಟುಗಳ ಪ್ರೊಸೆಸಿಂಗ್ ಶುಲ್ಕ ಹೆಚ್ಚಿಸಿದ ಎಸ್​ಬಿಐ; ವಿವರ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾ (SBI) ಕ್ರೆಡಿಟ್ ಕಾರ್ಡ್ ಹೊಂದಿರುವವರು ಇನ್ನು ಮುಂದೆ ಕೆಲವು ವಹಿವಾಟುಗಳಿಗೆ ಹೆಚ್ಚಿನ ಪ್ರೊಸೆಸಿಂಗ್ ಶುಲ್ಕ (processing fees) ತೆರಬೇಕಾಗಲಿದೆ. ವ್ಯಾಪಾರದ ಇಎಂಐ, ಬಾಡಿಗೆ ಪಾವತಿ ಸೇರಿದಂತೆ ಕೆಲವು ವಹಿವಾಟುಗಳ ಪ್ರೊಸೆಸಿಂಗ್ ಶುಲ್ಕ ಹೆಚ್ಚಳ ಮಾಡಿ ಬ್ಯಾಂಕ್ ಪ್ರಕಟಣೆ ಹೊರಡಿಸಿದ್ದು, ಪರಿಷ್ಕೃತ ಶುಲ್ಕ ನವೆಂಬರ್ 15ರಿಂದಲೇ ಅನ್ವಯವಾಗಲಿದೆ ಎಂದು ತಿಳಿಸಿದೆ. ವ್ಯಾಪಾರದ ಇಎಂಐ ವಹಿವಾಟುಗಳ ಪ್ರೊಸೆಸಿಂಗ್ ಶುಲ್ಕವನ್ನು 99 ರೂ.ನಿಂದ 199 ರೂ. ಗೆ ಹೆಚ್ಚಿಸಿದ್ದು, ತೆರಿಗೆಯನ್ನೂ ಪಾವತಿಸಬೇಕಾಗುತ್ತದೆ. ಬಾಡಿಗೆ ಪಾವತಿ ವಹಿವಾಟಿಗೆ 99 ರೂ. ಪ್ರೊಸೆಸಿಂಗ್ ಶುಲ್ಕ ನಿಗದಿಪಡಿಸಲಾಗಿದ್ದು, ತೆರಿಗೆಯನ್ನೂ ಪಾವತಿಸಬೇಕಾಗುತ್ತದೆ.

ಕ್ರೆಡಿಟ್ ಕಾರ್ಡ್ ಪ್ರೊಸೆಸಿಂಗ್ ಶುಲ್ಕ ಪರಿಷ್ಕರಣೆ ಸಂಬಂಧ ಎಸ್​ಬಿಐ ವೆಬ್​ಸೈಟ್​​ನಲ್ಲಿಯೂ ಮಾಹಿತಿ ನೀಡಲಾಗಿದ್ದು, ಗ್ರಾಹಕರಿಗೆ ಎಸ್​ಎಂಎಸ್ ಸಂದೇಶ ಕಳುಹಿಸಲಾಗಿದೆ. ಇಷ್ಟೇ ಅಲ್ಲದೆ ರಿವಾರ್ಡ್ ಪಾಯಿಂಟ್​ಗಳಿಗೆ ಸಂಬಂಧಿಸಿ ನೀಡಲಾಗುವ ಕೊಡುಗೆಗಳ ಬಗ್ಗೆಯೂ ಮಾಹಿತಿ ನೀಡಿದೆ.

ರಿವಾರ್ಡ್ ಪಾಯಿಂಟ್​ಗೆ​ ಸಂಬಂಧಿಸಿ ಏನೇನು ಆಫರ್​ಗಳಿವೆ?

ಸಿಂಪ್ಲಿ ಕ್ಲಿಕ್ ಅಡ್ವಾಂಟೇಜ್ ಎಸ್​ಬಿಐ ಕಾರ್ಡ್ ಹೊಂದಿರುವವರು ಅಮೆಜಾನ್ ಡಾಟ್ ಇನ್​ನಲ್ಲಿ ಮಾಡುವ ವೆಚ್ಚಗಳಿಗೆ 10X ರಿವಾರ್ಡ್ ಪಾಯಿಂಟ್​ಗಳನ್ನು ನೀಡುವುದಾಗಿಯೂ ಎಸ್​ಬಿಐ ಹೇಳಿದೆ. ಸದ್ಯ ನೀಡಲಾಗುತ್ತಿರುವ 5X ರಿವಾರ್ಡ್ ಪಾಯಿಂಟ್​ ಅನ್ನು 2023ರ ಜನವರಿ 1ರಿಂದ ಪರಿಷ್ಕರಣೆ ಮಾಡಲಾಗುವುದು ಎಂದು ಎಸ್​ಬಿಐ ಹೇಳಿದೆ. ಅಪೋಲೊ 24X7 ಆನ್​ಲೈನ್​ನಲ್ಲಿ, ಮುಬ್​ಮೈಶೋ, ಈಜಿಡಿನ್ನರ್​, ಲೆನ್ಸ್​​ಕಾರ್ಟ್, ನೆಟ್​ಮೆಡ್ಸ್​, ಕ್ಲಿಯರ್​ಟ್ರಿಪ್​ಗಳಲ್ಲಿ ಮಾಡುವ ಖರ್ಚುಗಳಿಗೆ 10X ರಿವಾರ್ಡ್ ಪಾಯಿಂಟ್​ಗಳು ಮುಂದುವರಿಯಲಿವೆ. ನಿಯಮಗಳು ಮತ್ತು ಷರತ್ತುಗಳು ಅನಗ್ವಯವಾಗಲಿವೆ ಎಂದು ಎಸ್​ಬಿಐ ತಿಳಿಸಿದೆ.

ಇತ್ತೀಚಗೆಷ್ಟೇ ಎಸ್​ಬಿಐ ಬಡ್ಡಿ ದರದಲ್ಲಿಯೂ ಹೆಚ್ಚಳ ಮಾಡಿತ್ತು. ಸಾಲದ ಮೇಲಿನ ಬಡ್ಡಿ ದರ ಹಾಗೂ ಠೇವಣಿಗಳ ಬಡ್ಡಿ ದರವನ್ನೂ ಹೆಚ್ಚಿಸಲಾಗಿತ್ತು. ಇದೀಗ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಪ್ರೊಸೆಸಿಂಗ್ ಶುಲ್ಕವನ್ನೂ ಹೆಚ್ಚಿಸಿದೆ. ಈ ನಿರ್ಧಾರ ಅನೇಕ ಗ್ರಾಹಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಕೆಲವು ದಿನಗಳ ಹಿಂದಷ್ಟೇ ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿಸುವುದಕ್ಕೆ ಐಸಿಐಸಿಐ ಬ್ಯಾಂಕ್ ಶುಲ್ಕ ವಿಧಿಸುವುದಾಗಿ ತಿಳಿಸಿತ್ತು. ಬಾಡಿಗೆ ಪಾವತಿಗೆ ಶೇಕಡಾ 1ರಷ್ಟು ಶುಲ್ಕ ವಿಧಿಸುವುದಾಗಿ ಅದು ಗ್ರಾಹಕರಿಗೆ ತಿಳಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *