SBI Personal Loan: ಎಸ್​ಬಿಐ ಯೋನೋ ಮೂಲಕ ಫಟಾಫಟ್​ ಪರ್ಸನಲ್ ಲೋನ್ ರಿಯಲ್ ಟೈಮ್ ಎಕ್ಸ್​ಪ್ರೆಸ್ ಕ್ರೆಡಿಟ್ | Real Time Express Credit Through Yono Announced By State Bank Of India


SBI Personal Loan: ಎಸ್​ಬಿಐ ಯೋನೋ ಮೂಲಕ ಫಟಾಫಟ್​ ಪರ್ಸನಲ್ ಲೋನ್ ರಿಯಲ್ ಟೈಮ್ ಎಕ್ಸ್​ಪ್ರೆಸ್ ಕ್ರೆಡಿಟ್

ಸಾಂದರ್ಭಿಕ ಚಿತ್ರ

ಯೋನೋ ಮೂಲಕ ರಿಯಲ್ ಟೈಮ್ ಎಕ್ಸ್​ಪ್ರೆಸ್ ಕ್ರೆಡಿಟ್ ನೀಡುವುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಘೋಷಣೆ ಮಾಡಿದೆ.

ಸ್ಟೇಟ್ ಬ್ಯಾಂಕ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಸೋಮವಾರ ಘೋಷಣೆ ಮಾಡಿದ ಪ್ರಕಾರ, ಯೋನೋ ಪ್ಲಾಟ್​ಫಾರ್ಮ್​ನಲ್ಲಿ (Yono) ರಿಯಲ್ ಟೈಮ್ ಎಕ್ಸ್​ಪ್ರೆಸ್ ಕ್ರೆಡಿಟ್ ಪರಿಚಯಿಸುತ್ತಿದೆ. ಈ ಮೂಲಕ ಅರ್ಹ ಗ್ರಾಹಕರಿಗೆ 35 ಲಕ್ಷ ರೂಪಾಯಿ ತನಕ ವೈಯಕ್ತಿಕ ಸಾಲ (Personal Loan) ದೊರೆಯುತ್ತದೆ. ಬ್ಯಾಂಕ್ ತಿಳಿಸಿರುವ ಪ್ರಕಾರ, ಈ ಸಾಲದ ಉತ್ಪನ್ನವು ವೇತನದಾರ ಗ್ರಾಹಕರಿಗಾಗಿ ಇದೆ. ಎಕ್ಸ್​ಪ್ರೆಸ್ ಕ್ರೆಡಿಟ್ ಇದೀಗ ಡಿಜಿಟಲ್ ರೂಪದಲ್ಲಿ ಸಿಗುತ್ತಿದ್ದು, ಗ್ರಾಹಕರು ಯೋನೋ ಮೂಲಕ ಇದನ್ನು ಪಡೆಯಬಹುದು. ಇದು ಶೇ 100ರಷ್ಟು ಕಾಗದರಹಿತ ಆಗಿರುತ್ತದೆ. ಮೊದಲಿಂದ ಕೊನೆ ತನ ಎಂಟು ಹಂತದ ಪಯಣ ಆಗಿರಲಿದೆ ಮತ್ತು ಡಿಜಿಟಲ್ ಅನುಭವ ನೀಡಲಿದೆ.

ರಿಯಲ್ ಟೈಮ್ ಎಕ್ಸ್​ಪ್ರೆಸ್ ಸಾಲದ ಅಡಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ಮತ್ತು ರಕ್ಷಣಾ ವಲಯದ ವೇತನದಾರ ಗ್ರಾಹಕರು ವೈಯಕ್ತಿಕ ಸಾಲ ಪಡೆಯುವ ಸಲುವಾಗಿ ಎಸ್​ಬಿಐ ಶಾಖೆಗೆ ಭೇಟಿ ನೀಡುವ ಅಗತ್ಯ ಇಲ್ಲ. ಕ್ರೆಡಿಟ್ ಪರಿಶೀಲನೆ, ಅರ್ಹತೆ, ವಿತರಣೆ ಮತ್ತು ದಾಖಲಾತಿಗಳ ಸಂಗ್ರಹ ಎಲ್ಲವೂ ರಿಯಲ್​ಟೈಮ್​ನಲ್ಲಿ ಡಿಜಿಟಲ್​ ಆಗಿ ಮುಗಿಯುತ್ತದೆ, ಎನ್ನಲಾಗಿದೆ.

ಎಸ್​ಬಿಐ ಅಧ್ಯಕ್ಷ ದಿನೇಶ್ ಖರ ಮಾತನಾಡಿ, ರಿಯಲ್ ಟೈಮ್ ಎಕ್ಸ್​ಪ್ರೆಸ್ ಕ್ರೆಡಿಟ್ ಸಾಲ ವ್ಯವಸ್ಥೆಯನ್ನು ರಿಯಲ್​ಟೈಮ್​ನಲ್ಲಿ ನಮ್ಮ ಅರ್ಹ ಗ್ರಾಹಕರಿಗೆ ಯೋನೋ ಮೂಲಕ ಪರಿಚಯಿಸುತ್ತಿರುವುದಕ್ಕೆ ಸಂತೋಷವಾಗಿದೆ ಎಂದಿದ್ದಾರೆ. ಈ ಎಕ್ಸ್​ಪ್ರೆಸ್ ಕ್ರೆಡಿಟ್ ಉತ್ಪನ್ನದ ಮೂಲಕ ಸಾಲ ಪ್ರಕ್ರಿಯೆಯಲ್ಲಿ ನಮ್ಮ ಗ್ರಾಹಕರಿಗೆ ಡಿಜಿಟಲ್, ತಡೆರಹಿತ ಮತ್ತು ಕಾಗದರಹಿತ ಅನುಭವವನ್ನು ದೊರಕಿಸುತ್ತದೆ. ನಾವು ಎಸ್​ಬಿಐನಲ್ಲಿ ಬ್ಯಾಂಕಿಂಗ್ ಸರಳಗೊಳಿಸಲು ನಿರಂತರವಾಗಿ ತಂತ್ರಜ್ಞಾನ ಮುಂಚೂಣಿಯ ವಿಸ್ತೃತ ಡಿಜಿಟಲ್​ ಬ್ಯಾಂಕಿಂಗ್ ಅನುಭವವನ್ನು ಗ್ರಾಹಕರಿಗೆ ಒದಗಿಸುತ್ತಿದ್ದೇವೆ, ಎಂದು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *