SBI Quarter Results: ಎಸ್​ಬಿಐ ನಿವ್ವಳ ಲಾಭದಲ್ಲಿ ಭಾರಿ ಹೆಚ್ಚಳ; ಆದಾಯದಲ್ಲಿಯೂ ಜಿಗಿತ – SBI net profit jumps 74 percent to Rupees 13,265 crore in July-September, Stand alone profit and revenue business news in Kannada


ಮರುಪಾವತಿಯಾಗದ ಸಾಲದ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಮತ್ತು ಹೆಚ್ಚಿನ ಬಡ್ಡಿ ಸ್ವೀಕೃತವಾಗಿರುವುದರಿಂದ ಲಾಭದಲ್ಲಿ ಹೆಚ್ಚಳವಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.

SBI Quarter Results: ಎಸ್​ಬಿಐ ನಿವ್ವಳ ಲಾಭದಲ್ಲಿ ಭಾರಿ ಹೆಚ್ಚಳ; ಆದಾಯದಲ್ಲಿಯೂ ಜಿಗಿತ

ಸಾಂದರ್ಭಿಕ ಚಿತ್ರ

ನವದೆಹಲಿ: 23ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿವ್ವಳ ಲಾಭದಲ್ಲಿ ಶೇಕಡಾ 74ರಷ್ಟು ಹೆಚ್ಚಾಗಿದ್ದು, 13,265 ಕೋಟಿ ರೂ. ಆಗಿದೆ. ಮರುಪಾವತಿಯಾಗದ ಸಾಲದ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಮತ್ತು ಹೆಚ್ಚಿನ ಬಡ್ಡಿ ಸ್ವೀಕೃತವಾಗಿರುವುದರಿಂದ ಲಾಭದಲ್ಲಿ ಹೆಚ್ಚಳವಾಗಿದೆ ಎಂದು ಬ್ಯಾಂಕ್ ತಿಳಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್ 7,627 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.

ಒಟ್ಟು ಆದಾಯದಲ್ಲಿಯೂ ಹೆಚ್ಚಳ

ಬ್ಯಾಂಕ್​ನ ಆದಾಯದಲ್ಲಿಯೂ ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್ 77,689.09 ಕೋಟಿ ರೂ. ಆದಾಯ ಗಳಿಸಿದ್ದರೆ ಈ ಬಾರಿ 88,734 ಕೋಟಿ ರೂ. ಆದಾಯ ಗಳಿಸಿದೆ.

ನಿವ್ವಳ ಬಡ್ಡಿ ಆದಾಯದಲ್ಲಿಯೂ ಶೇಕಡಾ 13ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 31,184 ಕೋಟಿ ರೂ. ನಿವ್ವಳ ಬಡ್ಡಿ ಆದಾಯ ದೊರೆತಿದ್ದರೆ ಈ ವರ್ಷ 35,183 ಕೋಟಿ. ರೂ. ದೊರೆತಿದೆ. ಬ್ಯಾಂಕ್​ನ ಅನುತ್ಪಾದಕ ಆಸ್ತಿ ಶೇಕಡಾ 3.52ಕ್ಕೆ ಇಳಿಕೆಯಾಗಿದೆ. ಕಳೆದ ವರ್ಷ ಇದು ಶೇಕಡಾ 4.90ರಷ್ಟಿತ್ತು ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.

TV9 Kannada


Leave a Reply

Your email address will not be published.