Science Gallery: ಬೆಂಗಳೂರಿನ ಸೈನ್ಸ್​ ಗ್ಯಾಲರಿಗೆ ಕಿರಣ್ ಮಜುಂದಾರ್, ರೋಹಿಣಿ ನಿಲೇಕಣಿ, ಕ್ರಿಸ್ ಗೋಪಾಲಕೃಷ್ಣನ್ ಜಂಟಿಯಾಗಿ ರೂ. 51 ಕೋಟಿ ಧನಸಹಾಯ – Kiran Mazumdar Shaw, Rohini Nilekani, Kris Gopalakrishnan jointly contribute Rs 51 crore for Science Gallery Bengaluru


Bengaluru News: ಸೈನ್ಸ್​ ಗ್ಯಾಲರಿಯ ಕಟ್ಟಡ ನಿರ್ಮಾಣಕ್ಕೆ ಖ್ಯಾತ ಉದ್ಯಮಿಗಳಾದ ಕಿರಣ್ ಮಜುಂದಾರ್ ಶಾ, ರೋಹಿಣಿ ನಿಲೇಕಣಿ ಮತ್ತು ಕ್ರಿಸ್ ಗೋಪಾಲಕೃಷ್ಣನ್ ಅವರು ಜಂಟಿಯಾಗಿ 51 ಕೋಟಿ ರೂ. ಧನಸಹಾಯ ನೀಡಿದ್ದಾರೆ.

Science Gallery: ಬೆಂಗಳೂರಿನ ಸೈನ್ಸ್​ ಗ್ಯಾಲರಿಗೆ ಕಿರಣ್ ಮಜುಂದಾರ್, ರೋಹಿಣಿ ನಿಲೇಕಣಿ, ಕ್ರಿಸ್ ಗೋಪಾಲಕೃಷ್ಣನ್ ಜಂಟಿಯಾಗಿ ರೂ. 51 ಕೋಟಿ ಧನಸಹಾಯ

ಕಿರಣ್ ಮಜುಂದಾರ್ ಶಾ, ರೋಹಿಣಿ ನಿಲೇಕಣಿ ಮತ್ತು ಕ್ರಿಸ್ ಗೋಪಾಲಕೃಷ್ಣನ್

Image Credit source: Hindustan Times

ಬೆಂಗಳೂರು: ಬೆಂಗಳೂರಿನ ಸೈನ್ಸ್​ ಗ್ಯಾಲರಿಯ (Science Gallery) ಕಟ್ಟಡ ನಿರ್ಮಾಣಕ್ಕೆ ಖ್ಯಾತ ಉದ್ಯಮಿಗಳಾದ ಕಿರಣ್ ಮಜುಂದಾರ್ ಶಾ (Kiran Mazumdar Shaw), ರೋಹಿಣಿ ನಿಲೇಕಣಿ (Rohini Nilekani) ಮತ್ತು ಕ್ರಿಸ್ ಗೋಪಾಲಕೃಷ್ಣನ್ (Kris Gopalakrishnan) ಅವರು ಜಂಟಿಯಾಗಿ 51 ಕೋಟಿ ರೂ. ಧನಸಹಾಯ ನೀಡಿದ್ದಾರೆ. ಈ ಸೈನ್ಸ್​ ಗ್ಯಾಲರಿಯಲ್ಲಿ ಸಂಶೋಧನೆ ಆಧಾರಿತ ಕಾರ್ಯಗಳು ನಡೆಯಲಿವೆ. ಇದು ಮುಂದಿನ ವರ್ಷದಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ಸೈನ್ಸ್​ ಗ್ಯಾಲರಿಯ ಸಂಸ್ಥಾಪಕ ನಿರ್ದೇಶಕಿ ಡಾ. ಜಾಹ್ನವಿ ಫಾಲ್ಕೆ ಹೇಳಿದ್ದಾರೆ.

ಲಾಭರಹಿತ ಸಾರ್ವಜನಿಕ ಸಂಸ್ಥೆಯಾದ ಸೈನ್ಸ್ ಗ್ಯಾಲರಿ ಬೆಂಗಳೂರು (SGB)ಗೆ ಜಂಟಿಯಾಗಿ ಈ ಮೂವರು 51 ಕೋಟಿ ರೂ. ಕೊಡುಗೆ ನೀಡಿದ್ದಾರೆ. ಈ ನಿಧಿಯು ಕರ್ನಾಟಕ ಸರ್ಕಾರವು ಮಾಡಿದ ಬಂಡವಾಳ ಹೂಡಿಕೆಗೆ ಸೇರಿಕೊಳ್ಳುತ್ತದೆ. ಈ ಕಟ್ಟಡದಲ್ಲಿ ನೈಸರ್ಗಿಕ ವಿಜ್ಞಾನ ಪ್ರಯೋಗಾಲಯ, ಆಹಾರ ಪ್ರಯೋಗಾಲಯ, ವಸ್ತು ಪ್ರಯೋಗಾಲಯ, ನ್ಯೂ ಮೀಡಿಯಾ ಪ್ರಯೋಗಾಲಯ ಮುಂತಾದ ವ್ಯವಸ್ಥೆಗಳು ಇರುತ್ತವೆ.

TV9 Kannada


Leave a Reply

Your email address will not be published.