SDPI ಸೇರೋರು ಜೈಲಿಗೆ ಹೋಗೋಕು, ಖಬರಿಸ್ತಾನ ಸೇರೋಕೂ ಸಿದ್ಧರಿರಬೇಕು-ಅಬೂಬಕ್ಕರ್​ ಕುಳಾಯಿ


ಮಂಗಳೂರು: ನಗರದ SDPI ಮುಖಂಡ ಅಬೂಬಕ್ಕರ್​ ಕುಳಾಯಿ ಕಾಂಗ್ರೆಸ್​ ನಾಯಕರ ವಿರುದ್ಧ ತೀವ್ರತರವಾದ ವಾಗ್ದಾಳಿ ನಡೆಸಿದ್ದು ನಾವು ಮಸಲ್​ ಪವರ್​ ಯೂಸ್​ ಮಾಡೋಕು ರೆಡಿ ಇದ್ದೇವೆ ಎಂದು ಪ್ರಚೋದನಾಕಾರಿ ಹೇಳಿಕೆ ಕೊಟ್ಟಿದ್ದಾರೆ.

ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಎಸ್​ಡಿಪಿಐಗೆ ಸೇರೋದಾದ್ರೆ ಆಸ್ಪತ್ರೆಯಲ್ಲಿ ಮಲಗೋಕು, ಜೈಲಿಗೆ ಹೋಗೋಕು, ಖಬರಿಸ್ತಾನ ಸೇರೋಕೂ ಸಿದ್ಧರಿರಬೇಕು ಎಂದು ನಮ್ಮ ಮುಂಖಂಡರು ಬಹಿರಂಗವಾಗಿ ಹೇಳಿದ್ದಾರೆ.

ಇದನ್ನೂ ಓದಿ:‘ಕಾಂಗ್ರೆಸ್ಸಿಗರನ್ನು ಸ್ಮಶಾನಕ್ಕೆ ಕಳಿಸೋಕೂ ಗೊತ್ತಿದೆ’ ಕೈ ನಾಯಕರಿಗೆ ಎಚ್ಚರಿಕೆ ನೀಡಿದ SDPI ಮುಖಂಡ

ನಮ್ಮ ಪಕ್ಷದ ಬೆಳವಣಿಗೆಯನ್ನು ಕಾಂಗ್ರೆಸ್​ಗೆ ನೋಡಲಾಗುತ್ತಿಲ್ಲ. ಅದನ್ನು ಕಂಡು ಅವರಿಗೆ ಸಹಿಸಲಿಕ್ಕಾಗುತ್ತಿಲ್ಲ ಹೀಗಾಗಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಇಷ್ಟರವರೆಗೆ ನಾವು ತಲೆ ತಗ್ಗಿಸಿದ್ದೇವೆ, ಆದರೆ ನಮಗೆ 2 M ಇದೆ. ಒಂದು ಮ್ಯಾನ್ ಪವರ್, ಇನ್ನೊಂದು ಮಸಲ್ ಪವರ್. ಇನ್ನೆಲ್ಲಿಯಾದರೂ ನಮ್ಮ ‌ಪಕ್ಷದ ಕಾರ್ಯಕರ್ತರನ್ನ ಮುಟ್ಟಿದರೆ ಒಂದು M ಯೂಸ್ ಮಾಡ್ತೇವೆ. ಎಸ್​ಡಿಪಿಐಗೆ ಸೇರೋದಾದ್ರೆ ಆಸ್ಪತ್ರೆ ಮಲಗೋಕೆ, ಜೈಲಿಗೆ ಹೋಗೋಕೆ, ಖಬರಿಸ್ತಾನ ಸೇರೋಕೂ ಸಿದ್ಧರಿರಬೇಕು. ಹಾಗಂತ ನಿಮ್ಮ ದಬ್ಬಾಳಿಕೆ, ದೌರ್ಜನ್ಯಕ್ಕೆ ನಾವು ಬಗ್ಗುವವರಲ್ಲ ಎಂದು ಅಬೂಬಕರ್​ ಹೇಳಿದ್ದಾರೆ. ಸದ್ಯ ಎಸ್​ಡಿಪಿಐ ಮುಖಂಡನ ಈ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್​ ಆಗಿದೆ.

ಇದನ್ನೂ ಓದಿ:ಮಂಗಳೂರಿನಲ್ಲಿ ಮತ್ತೆ ಆ್ಯಕ್ಟಿವ್​​ ಆಯ್ತಾ ಡ್ರಗ್ಸ್​ ಜಾಲ..? ಪ್ರತಿಷ್ಠಿತ ಕಾಲೇಜಿನ 5 ವಿದ್ಯಾರ್ಥಿಗಳು ಅರೆಸ್ಟ್

News First Live Kannada


Leave a Reply

Your email address will not be published. Required fields are marked *