SECR Recruitment 2022: ಎಸ್​ಎಸ್​ಎಲ್​ಸಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿದೆ ಉದ್ಯೋಗ | SECR Recruitment 2022 for 1044 Apprentice vacancies, apply online


SECR Recruitment 2022: ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳು ಈ ಕೆಳಗಿನಂತಿವೆ.

SECR Recruitment 2022: ಭಾರತ ಸರ್ಕಾರದ ರೈಲ್ವೆ ಇಲಾಖೆಯ ಸೌತ್ ಈಸ್ಟ್ ಸೆಂಟ್ರಲ್ ರೈಲ್ವೇ (SECR) ನಾಗಪುರ ವಿಭಾಗದ ವಿವಿಧ ವಿಭಾಗಗಳಲ್ಲಿ ಅಪ್ರೆಂಟಿಸ್ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಧಿಸೂಚನೆಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳು ಈ ಕೆಳಗಿನಂತಿವೆ.

ವಿವರಗಳು:

ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ: 1044

ಪೋಸ್ಟ್ ವಿವರಗಳು: ಅಪ್ರೆಂಟಿಸ್ ಹುದ್ದೆಗಳು

ಹುದ್ದೆಯ ವಿವರಗಳು:
ನಾಗ್ಪುರ ವಿಭಾಗದಲ್ಲಿ- 980 ಹುದ್ದೆಗಳು
ಮೋತಿಬಾಗ್ ವಿಭಾಗದಲ್ಲಿ- 64 ಹುದ್ದೆಗಳು

ಹುದ್ದೆಗಳ ಹೆಸರು:
ಫಿಟ್ಟರ್, ಕಾರ್ಪೆಂಟರ್, ವೆಲ್ಡರ್, ಎಲೆಕ್ಟ್ರಿಷಿಯನ್, ವೈರ್‌ಮ್ಯಾನ್, ಮೆಷಿನಿಸ್ಟ್, ಟರ್ನರ್, ಡಿಜಿಟಲ್ ಫೋಟೋಗ್ರಾಫರ್, ಹೆಲ್ತ್ ಸ್ಯಾನಿಟರಿ ಇನ್‌ಸ್ಪೆಕ್ಟರ್, ಗ್ಯಾಸ್ ಕಟ್ಟರ್, ಸ್ಟೆನೋಗ್ರಾಫರ್, ಕೇಬಲ್ ಜೊಯಿಂಟರ್ ಇತ್ಯಾದಿ.

ವಯೋಮಿತಿ: ಅಭ್ಯರ್ಥಿಗಳು ಮೇ 1, 2022 ರೊಳಗೆ 15 ರಿಂದ 24 ವರ್ಷ ವಯಸ್ಸಿನವರಾಗಿರಬೇಕು.

ವಿದ್ಯಾರ್ಹತೆ: ಹತ್ತನೇ ತರಗತಿ ಪಾಸಾಗಿರಬೇಕು. ಜೊತೆಗೆ ಸಂಬಂಧಪಟ್ಟ ವಿಭಾಗದಲ್ಲಿ ಐಟಿಐ ಉತ್ತೀರ್ಣರಾಗಿರಬೇಕು.

ಆಯ್ಕೆ ವಿಧಾನ : ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 3, 2022.

ಈ ನೇಮಕಾತಿ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ .

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

TV9 Kannada


Leave a Reply

Your email address will not be published. Required fields are marked *