Serial Surfers to Fancy Flippers: ಭಾರತದಲ್ಲಿ ವಿವಿಧ ರೀತಿಯ ಸ್ಮಾರ್ಟ್‌ಫೋನ್ ಬಳಕೆದಾರರಿದ್ದಾರೆ | Serial Surfers to Fancy Flippers: Meet the different kinds of smartphone users in India


Serial Surfers to Fancy Flippers: ಭಾರತದಲ್ಲಿ ವಿವಿಧ ರೀತಿಯ ಸ್ಮಾರ್ಟ್‌ಫೋನ್ ಬಳಕೆದಾರರಿದ್ದಾರೆ

ಸಾಂದರ್ಭಿಕ ಚಿತ್ರ

ಫೋನ್‌ಗಳು ಇಂದು ಜನರ ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿಹೋಗಿದ್ದು, ಅವುಗಳನ್ನು ಅವರು ಉಪಯೋಗಿಸುವ ವಿಧಾನವು ಅವರ ವ್ಯಕ್ತಿತ್ವವನ್ನೇ ಪ್ರತಿಬಿಂಬಿಸುತ್ತಿದೆ.

ಬಿಡುವಿಲ್ಲದೆ ಫೋನ್‌ ಬಳಸುವವರಿಂದ ಹಿಡಿದು ಅಲಂಕಾರಿಕ ಫ್ಲಿಪ್‌ ಫೋನ್‌ ಬಳಸುವವರವರೆಗೆ  ಭಾರತದ ವಿವಿಧ ಬಗೆಯ ಸ್ಮಾರ್ಟ್‌ಫೋನ್‌ ಬಳಕೆದಾರರು. ಕೇವಲ ಕರೆಗಳನ್ನು ಮಾಡಲು ಮಾತ್ರವೇ ಫೋನ್‌ ಉಪಯೋಗಿಸುತ್ತಿದ್ದ ಕಾಲ ಕಣ್ಮರೆಯಾಗಿ ಬಹಳ ಕಾಲವಾಯಿತು. ಫೋನ್‌ಗಳು ಇಂದು ಜನರ ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿಹೋಗಿದ್ದು, ಅವುಗಳನ್ನು ಅವರು ಉಪಯೋಗಿಸುವ ವಿಧಾನವು ಅವರ ವ್ಯಕ್ತಿತ್ವವನ್ನೇ ಪ್ರತಿಬಿಂಬಿಸುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಫೋನ್‌ಗಳು ತಮ್ಮನ್ನು ಉಪಯೋಗಿಸುತ್ತಿರುವ ವ್ಯಕ್ತಿಗಳ ಡಿಜಿಟಲ್‌ ರೂಪಾಂತರವೇ ಆಗಿಹೋಗಿವೆಯೆಂದರೆ ಅದು ಅತಿಶಯೋಕ್ತಿ ಇಲ್ಲ ಅನಿಸುತ್ತದೆ.  ನಮ್ಮಲ್ಲಿ ಬಹಳಷ್ಟು ಜನ ಬಹಳ ಎಚ್ಚರಿಕೆಯಿಂದ ಹಾಗೂ ಮುತುವರ್ಜಿಯಿಂದ ಪೋನ್‌ಗಳನ್ನು ಬಳಸುತ್ತಿದ್ದೇವಾದರೂ ಕೆಲವರಂತೂ ಇದಕ್ಕೆ ತದ್ವಿರುದ್ಧವಾಗಿದ್ದು ಹೇಗೆಂದರೆ ಹಾಗೆ ಬೇಕಾಬಿಟ್ಟಿಯಾಗಿ ಬಳಸುತ್ತಿದ್ದಾರೆ. ಇದು ಎಷ್ಟರ ಮಟ್ಟಿನ ಬೇಜವಾಬ್ದಾರಿ ಎಂದರೆ ಫೋನ್‌ಗಳು ದೀರ್ಘಕಾಲ ಬಾಳಿಕೆ ಬಂದರೆ ಅದು ನಿಜಕ್ಕೂ ಅವರ ಭಾಗ್ಯವೆಂದೇ ಹೇಳಬೇಕಿದೆ. ಫೋನ್‌ಗಳು ಹಾಗೂ ಅವುಗಳನ್ನು ಬಳಸುವವರು ಎಷ್ಟೇ ವೈವಿಧ್ಯತೆಗಳಿಂದ ಕೂಡಿದವರಾಗಿದ್ದರೂ, ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ-ನಮ್ಮ ಫೋನ್‌ಗಳೊಂದಿಗೆ ವಿಶೇಷವಾದ ಹಾಗೂ ಗಮನಾರ್ಹವಾದ ಬಾಂಧವ್ಯವನ್ನು ಹೊಂದಿರುತ್ತೇವೆ.

ಇಲ್ಲಿ ವಿವಿಧ ಬಗೆಯ ಜನರು ತಮ್ಮ ಫೋನ್‌ಗಳನ್ನು ಬಳಸುವಾಗ ಹೇಗೆ ತಮ್ಮ ವೈವಿಧ್ಯಮಯ ವ್ಯಕ್ತಿತ್ವಗಳನ್ನು ವಿವಿಧ ವಿಧಾನಗಳಲ್ಲಿ ಪ್ರತಿಬಿಂಬಿಸುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಿ

ಪಾಕೆಟ್‌-ಸ್ನೇಹಿಯಲ್ಲದ ಬಳಕೆದಾರರು (The Pocket-unfriendly Users)

ಈ ವ್ಯವಸ್ಥೆಯಲ್ಲಿ ಜನರು ತಮ್ಮ ಫೋನ್‌ನ ಕವರ್‌ಗಳನ್ನು ತಮ್ಮ ಹೆಚ್ಚುವರಿ ಜೇಬುಗಳೆಂದೇ ತಿಳಿದಿರುವಂತೆ ಅನಿಸುತ್ತದೆ. ಚಿಲ್ಲರೆ ನಾಣ್ಯಗಳಿಂದ ಹಿಡಿದು, ರಸೀದಿಗಳು, ಆಧಾರ್‌ ಕಾರ್ಡ್‌ನಂತಹ ಗುರುತಿನ ಚೀಟಿಗಳು ಇನ್ನಿತರ ದಾಖಲೆಗಳನ್ನು ಫೋನ್‌ನ ಕವರ್‌ನಲ್ಲಿ ಸುರಕ್ಷಿತವಾಗಿ ಹಾಗೂ ಬೇಕೆಂದ ತಕ್ಷಣ ಸುಲಭವಾಗಿ ಕೈಗೆ ಸಿಗುವಂತೆ ಇಟ್ಟಿರುತ್ತಾರೆ. ಇದು ನಿಮ್ಮನ್ನು ಅಂತರ್ನಿರ್ಮಿತ ವಿಭಾಗಗಳನ್ನು ಹೊಂದಿರುವ ಫೋನ್‌ ಕವರ್‌ಗಳು ಏಕೆ ಲಭ್ಯವಿಲ್ಲ ಎಂದು ಅಚ್ಚರಿ ಪಡುವಂತೆ ಮಾಡುತ್ತದೆ.

ಹೆಚ್ಚಿನ ಎಚ್ಚರಿಕೆಯುಳ್ಳವರು (The Extra Cautious)

ಕೆಲ ಜನರು  ತಮ್ಮ ಫೋನ್‌ಗಳನ್ನು ಬೇಕೆಂದೇ ಕೆಳಗೆ ಬೀಳಿಸಿದರೂ ಅದಕ್ಕೆ ಏನೂ ತೊಂದರೆಯಾಗದಂತಹ ದಪ್ಪ ಹಾಗೂ ದೊಡ್ಡ ಕವರ್‌ಗಳನ್ನು ಬಳಸುತ್ತಾರೆ. ಅವರು ತಮ್ಮ ಫೋನ್‌ಗಳ ಬಗ್ಗೆ ಅತೀವ ಕಾಳಜಿಯನ್ನು ಹೊಂದಿ ಅದನ್ನು ತಮ್ಮ ಮಕ್ಕಳಂತೆ ಕಾಪಾಡಿಕೊಳ್ಳುತ್ತಿರುತ್ತಾರೆ. ಅಂಥವರು ತಮ್ಮ ಫೋನ್‌ಗೆ ಏನಾಗಿಬಿಡುವುದೋ ಎಂಬ ಆತಂಕದಿಂದ ಇರುತ್ತದೆ. ಅಂತರ್‌ನಿರ್ಮಿತ ಕೋರ್ನಿಂಗ್‌ ಗೊರಿಲ್ಲಾ ಗಾಜಿನ ಉತ್ತಮ ಗುಣಮಟ್ಟದ ಫೋನ್‌ ಆಯ್ಕೆ ಮಾಡಿಕೊಂಡರೆ ಅದರ ಹೆಚ್ಚುವರಿ ರಕ್ಷಣೆಯನ್ನು ಮಾಡುತ್ತಾರೆ.

ಬಿಡುವಿಲ್ಲದೆ  ಫೋನನ್ನು ಬಳಸುವವರು (The Serial Surfers)

ನಮ್ಮಲ್ಲಿ ಅನೇಕರು ಸತತವಾಗಿ ವಿರಾಮವಿಲ್ಲದೇ ಫೋನ್‌ ಬಳಸುವವರು ಇದ್ದರೆ, ಅಂಥವರಿಗೆ ಫೋನ್‌ನಿಂದ ಕೆಲ ಕ್ಷಣವು ದೂರ ಇರುವುದಿಲ್ಲ. ಇನ್ನೂ ಕೆಲವರಿಗೆ ಶೌಚಾಲಯಗಳಿಗೆ ಹೋಗುವಾಗಲೂ ಸಹ ಫೋನ್‌ ತಮ್ಮೊಂದಿಗೆ ಇರಲೇಬೇಕು. ಇವರುಗಳು  ಸ್ನಾನ ಮಾಡುವಾಗ ಕೂಡ ಫೋನ್ ಬಳಸುತ್ತರೆ ಎಂಬ ಆಶ್ಚರ್ಯ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ.  ಇದಂತೂ ನಿಜಕ್ಕೂ ಒಂದು ಕೌಶಲವೇ ಆಗಿದೆ!!!

ಫೋನನ್ನು ಬೇಕಾಬಿಟ್ಟಿಯಾಗಿ ಬಳಸುವವರು (The Casual Keepers)

ಕೆಲವರಿಗೆ ತಮ್ಮ ಯಾವುದರಲ್ಲೂ ಆಸಕ್ತಿ ಇಲ್ಲದವರು ಇರುತ್ತರೆ, ಅದರಲ್ಲೂ ಫೋನ್ ನಲ್ಲಿ ಯಾವುದೇ ಆಸಕ್ತಿ ಇಲ್ಲದೆ ಅದನ್ನು ಬೇಕಾಬಿಟ್ಟು ಇಟ್ಟುಕೊಂಡುವವರು ಇರುತ್ತಾರೆ. ಇಂತಹ ವ್ಯಕ್ತಿಗಳು ತಮ್ಮ ಫೋನ್‌ಗಳಿಗೆ ಕವರ್‌ ಅಥವಾ ಸ್ಕ್ರೀನ್‌ಗಾರ್ಡ್‌ಗಳನ್ನೂ ಕೂಡ ಹಾಕಿಸಿಕೊಂಡಿರುವುದಿಲ್ಲ. ಕೋರ್ನಿಂಗ್‌ ಗೊರಿಲ್ಲಾ ಗಾಜನ್ನು ಹಾಕಿಕೊಂಡರೆ ಮಾತ್ರ  ಅವರ ಫೋನ್ ಸುರಕ್ಷಿತ ಎನ್ನಬಹುದು.

ಈ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಜೂ. 27ರಂದು ಭಾರತಕ್ಕೆ ಅಪ್ಪಳಿಸಲಿದೆ ಒನ್‌ಪ್ಲಸ್‌ ನಾರ್ಡ್ 2T: ಇದರ ಫೀಚರ್ಸ್​ ಕೇಳಿದ್ರೆ ದಂದಾಗ್ತೀರ

ಅಲಂಕಾರಿಕ ಫ್ಲಿಪ್‌

ಅಲಂಕಾರಿಕವಾಗಿ ಫ್ಲಿಪ್‌ ಫೋನ್‌ಗಳನ್ನು ಬಳಸುವವರು ತಮ್ಮ ಫೋನನ್ನು ಬಳಸುವಾಗಲೆಲ್ಲಾ ಅದಕ್ಕೊಂದು ಶಾಸ್ತ್ರೀಯ ಸ್ಪರ್ಶವನ್ನು ನೀಡುತ್ತಾರೆ ಹಾಗೂ  ತಮ್ಮ ಫೋನ್‌ಗಳಲ್ಲಿ ಅಳವಡಿಸಿಕೊಂಡಿರುವ ಆಕರ್ಷಕ ಫ್ಲಿಪ್‌ ಕವರ್‌ಗಳೇ ಇದರ ಮೂಲ ಆಧಾರ. ಜೊತೆಗೆ  ಫೋನ್‌ ನಲ್ಲಿ ಮಾತನಾಡಿದ ನಂತರ ತಮ್ಮ  ಫೋನಿನ ಫ್ಲಿಪ್‌ ಕವರನ್ನು ಮುಚ್ಚುವಾಗ ಒಂದು ವಿಶೇಷವಾದ ಆಕರ್ಷಕ ಫ್ಲಿಪ್‌ ಗಳು ಕಾಣುವುದು.

TV9 Kannada


Leave a Reply

Your email address will not be published.