Shah Rukh Khan Starrer Pathan Movie to surpass KGF Chapter 2 advance booking | ರಿಲೀಸ್​​ಗೂ ಮೊದಲೇ ‘ಕೆಜಿಎಫ್ 2’ ದಾಖಲೆ ಮುರಿಯಲು ರೆಡಿ ಆದ ‘ಪಠಾಣ್’ ಸಿನಿಮಾ


‘ಶಾರುಖ್ ಖಾನ್ ನಟನೆಯ ‘ಪಠಾಣ್​’ ಚಿತ್ರಕ್ಕೆ ಅಡ್ವಾನ್ಸ್ ಬುಕಿಂಗ್ ಶುರುವಾಗಿದೆ. ಶಾರುಖ್ ಖಾನ್ ಅವರು ಈ ಚಿತ್ರದಿಂದ ದೊಡ್ಡ ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೆ ಅಡ್ವಾನ್ಸ್ ಬುಕಿಂಗ್ ಸಾಕ್ಷಿ.

ರಿಲೀಸ್​​ಗೂ ಮೊದಲೇ ‘ಕೆಜಿಎಫ್ 2’ ದಾಖಲೆ ಮುರಿಯಲು ರೆಡಿ ಆದ ‘ಪಠಾಣ್’ ಸಿನಿಮಾ

ಯಶ್​-ಶಾರುಖ್ ಖಾನ್

ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್​’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಬುಧವಾರ (ಜನವರಿ 25) ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಶಾರುಖ್ ಖಾನ್ ಅವರು ನಾಲ್ಕು ವರ್ಷಗಳ ಬಳಿಕ ದೊಡ್ಡ ಪರದೆಗೆ ಮರಳುತ್ತಿರುವುದರಿಂದ ಸಹಜವಾಗಿಯೇ ಅವರ ಅಭಿಮಾನಿಗಳ ವಲಯದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಈಗ ‘ಪಠಾಣ್’ ಚಿತ್ರ (Pathan Movie) ಹಲವು ದಾಖಲೆ ಬರೆಯಲು ರೆಡಿ ಆಗಿದೆ. ಅದೇ ರೀತಿ ಅಡ್ವಾನ್ಸ್ ಬುಕಿಂಗ್​ನಲ್ಲಿ ‘ಕೆಜಿಎಫ್ 2’ ಸಿನಿಮಾ ದಾಖಲೆಯನ್ನು ‘ಪಠಾಣ್​’ ಮುರಿಯಲಿದೆ ಎನ್ನಲಾಗುತ್ತಿದೆ.

‘ಶಾರುಖ್ ಖಾನ್ ನಟನೆಯ ‘ಪಠಾಣ್​’ ಚಿತ್ರಕ್ಕೆ ಅಡ್ವಾನ್ಸ್ ಬುಕಿಂಗ್ ಶುರುವಾಗಿದೆ. ಶಾರುಖ್ ಖಾನ್ ಅವರು ಈ ಚಿತ್ರದಿಂದ ದೊಡ್ಡ ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೆ ಅಡ್ವಾನ್ಸ್ ಬುಕಿಂಗ್ ಸಾಕ್ಷಿ. ಇಲ್ಲಿಯವರೆಗೆ ಬರೋಬ್ಬರಿ 4.10 ಲಕ್ಷ ಟಿಕೆಟ್​​ಗಳು ಮಲ್ಟಿಪ್ಲೆಕ್ಸ್​​ನಲ್ಲಿ ಮಾರಾಟ ಆಗಿವೆ. ಇಂದು ರಾತ್ರಿ ವೇಳೆಗೆ ಈ ಸಂಖ್ಯೆ 5.25 ಲಕ್ಷ ದಾಟುವ ಸೂಚನೆ ಇದೆ.

ತಾಜಾ ಸುದ್ದಿ

‘ಕೆಜಿಎಫ್ 2’ ಸಿನಿಮಾದ ಹಿಂದಿ ವರ್ಷನ್​​ನ ಅಡ್ವಾನ್ಸ್ ಬುಕಿಂಗ್​ನಲ್ಲಿ 5.15 ಲಕ್ಷ ಟಿಕೆಟ್​​ಗಳು ಮಾರಾಟ ಆಗಿದ್ದವು. ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕ ಕಾರಣ ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿತು. ಈಗ ಅಡ್ವಾನ್ಸ್ ಬುಕಿಂಗ್​​ನಲ್ಲಿ ‘ಕೆಜಿಎಫ್ 2’ ದಾಖಲೆಯನ್ನು ಮುರಿಯಲು ಶಾರುಖ್ ಖಾನ್ ಸಿನಿಮಾ ರೆಡಿ ಆಗಿದೆ. ‘ಬಾಹುಬಲಿ 2’ ಚಿತ್ರ ಈ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದೆ. ಈ ಚಿತ್ರದ ಹಿಂದಿ ವರ್ಷನ್​​ನಲ್ಲಿ 6.50 ಲಕ್ಷ ಟಿಕೆಟ್​ಗಳು ಮಾರಾಟ ಆಗಿದ್ದವು.

TV9 Kannada


Leave a Reply

Your email address will not be published. Required fields are marked *