Pathaan Movie First Half Review: ಭಾರಿ ನಿರೀಕ್ಷೆ ಹುಟ್ಟುಹಾಕಿದ ‘ಪಠಾಣ್’ ಚಿತ್ರದಲ್ಲಿ ಶಾರುಖ್ ಖಾನ್ ಅಭಿಮಾನಿಗಳಿಗೆ ಇಷ್ಟ ಆಗುವಂತಹ ಯಾವೆಲ್ಲ ಅಂಶಗಳಿವೆ? ಫಸ್ಟ್ ಹಾಫ್ನಲ್ಲಿ ಏನೆಲ್ಲ ಹೈಲೈಟ್ ಆಗಿದೆ ಅಂತ ತಿಳಿಯಲು ಈ ವಿಮರ್ಶೆ ಓದಿ..

ಪಠಾಣ್ ಸಿನಿಮಾ ಪೋಸ್ಟರ್
ಸಾವಿರಾರು ಪರದೆಗಳಲ್ಲಿ ‘ಪಠಾಣ್’ ಸಿನಿಮಾ (Pathaan Movie) ಬಿಡುಗಡೆ ಆಗಿದೆ. ವಿಶ್ವಾದ್ಯಂತ ಈ ಚಿತ್ರಕ್ಕೆ ಅಭಿಮಾನಿಗಳು ಅದ್ದೂರಿ ಸ್ವಾಗತ ನೀಡಿದ್ದಾರೆ. ಮೊದಲ ದಿನ ಮೊದಲ ಶೋಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಎರಡು ದಿನ ಮೊದಲೇ ಟಿಕೆಟ್ಗಳು ಸೋಲ್ಡ್ ಔಟ್ ಆಗಿದ್ದರಿಂದ ಇಂದು (ಜ.25) ಎಲ್ಲ ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಶಾರುಖ್ ಖಾನ್ (Shah Rukh Khan) ಅಭಿಮಾನಿಗಳು ಈ ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಸಿದ್ದಾರ್ಥ್ ಆನಂದ್ ನಿರ್ದೇಶನದಲ್ಲಿ ‘ಪಠಾಣ್’ ಚಿತ್ರ ಮೂಡಿಬಂದಿದೆ. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ (Deepika Padukone) ಜೊತೆಯಾಗಿ ನಟಿಸಿದ 4ನೇ ಸಿನಿಮಾ ಎಂಬ ಕಾರಣದಿಂದಲೂ ಹೈಪ್ ಹೆಚ್ಚಾಗಿದೆ. ‘ಬೇಷರಂ ರಂಗ್..’ ಹಾಡು ಕೂಡ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಲು ಕಾರಣ ಆಗಿದೆ. ಇಷ್ಟೆಲ್ಲ ಕ್ರೇಜ್ ಸೃಷ್ಟಿ ಮಾಡಿದ ‘ಪಠಾಣ್’ ಚಿತ್ರದ ಮೊದಲಾರ್ಥ ಹೇಗಿದೆ? ಅಭಿಮಾನಿಗಳಿಗೆ ಇಷ್ಟ ಆಗುವಂತಹ ಯಾವೆಲ್ಲ ಅಂಶಗಳು ಈ ಸಿನಿಮಾದಲ್ಲಿವೆ? ಇಲ್ಲಿದೆ ಉತ್ತರ..