1/7
ಆಸ್ಟ್ರೇಲಿಯಾದ ಮಾಜಿ ಆಟಗಾರ, ಲೆಗ್ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅವರು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಹೆಚ್ಚಿನ ಅಪಾಯ ಉಂಟಾಗಿಲ್ಲ.
2/7
ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿಯ ಪ್ರಕಾರ, ಭಾನುವಾರ ಮೆಲ್ಬೊರ್ನ್ನಲ್ಲಿ ಮೋಟರ್ ಬೈಕ್ ಚಲಾಯಿಸುವಾಗ ಈ ಅವಘಡ ಸಂಭವಿಸಿದೆ. ತಮ್ಮ 300 ಕೆ.ಜಿ ತೂಕದ ಬೈಕ್ ಅನ್ನು ಶೆಡ್ಗೆ ನಿಲ್ಲಿಸಲು ವಾಪಸ್ ಆಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಈ ಅವಗಢ ಸಂಭವಿಸಿದೆ. ಬಿದ್ದ ರಭಸಕ್ಕೆ 15 ಮೀಟರ್ಗಳಷ್ಟು ಅವರು ಜಾರಿದ್ದಾರೆ.
3/7
ಅದೃಷ್ಟವಶಾತ್ ಶೇನ್ ವಾರ್ನ್ಗೆ ಗಂಭೀರ ಗಾಯಗಳಿಂದ ಪಾರಾಗುದ್ದು ಸಣ್ಣಪುಟ್ಟ ಗಾಯಗಳು ಉಂಟಾಗಿದೆ. ಆದರೆ ಸೋಮವಾರ ಬೆಳಗ್ಗೆ ಎದ್ದಾಗ ಸಾಕಷ್ಟು ನೋವು ಕಾಣಿಸಿಕೊಂಡಿದೆಯಂತೆ.
4/7
ಮುನ್ನೆಚ್ಚರಿಕಾ ಕ್ರಮವಾಗಿ ಶೇನ್ ವಾರ್ನ್ ಸೋಮವಾರ ಮುಂಜಾನೆ ಆಸ್ಪತ್ರೆಗೆ ತೆರಳಿದ್ದಾರೆ. ಕಾಲು ಅಥವಾ ಹಿಂಬಾಗದಲ್ಲಿ ಮೂಳೆ ಮುರಿತವಾಗಿರಬಹುತಾ ಎಂಬ ಆತಂಕ ಶೇನ್ ವಾರ್ನ್ ಅವರಿಗೆ ಇದೆ ಎನ್ನಲಾಗಿದೆ.
5/7
ಬೈಕ್ ಅಪಘಾತದಿಂದಾಗಿ ಲಘು ಗಾಯಕ್ಕೆ ತುತ್ತಾಗಿರುವ ಹೊರತಾಗಿಯೂ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಣ ಆಶಷ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಶೇನ್ ವಾರ್ನ್ ಕಾಮೆಂಟರಿ ಮಾಡಲಿದ್ದಾರೆ.
6/7
ಡಿಸೆಂಬರ್ 8 ರಿಂದ ಬ್ರಿಸ್ಬೇನ್ನಲ್ಲಿ ಆರಂಭವಾಗಲಿರುವ ಮೊದಲನೇ ಟೆಸ್ಟ್ ಪಂದ್ಯದ ವೇಳೆ ಸ್ಪಿನ್ ದಂತಕತೆ ಫಾಕ್ಸ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಕಾಮೆಂಟರಿ ಮಾಡಲಿದ್ದಾರೆ.
7/7
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲು ಒಟ್ಟು 5 ಸ್ಥಳಗಳಿಗೆ ಪ್ರಯಾಣ ಬೆಳೆಸಲಿವೆ. ಪರ್ತ್ನಲ್ಲಿ ಕೊನೆಯ ಪಂದ್ಯ ಆಡುವ ಮೂಲಕ ಟೆಸ್ಟ್ ಸರಣಿ ಅಂತ್ಯವಾಗಲಿದೆ.