
ಶಿಖರ್ ಧವನ್
ಶಿಖರ್ ಧವನ್ಗೆ ನಟನೆ ಬಗ್ಗೆ ಆಸಕ್ತಿ ಇದೆ. ಅವರು, ಸಾಖಷ್ಟು ಫನ್ನಿ ರೀಲ್ಸ್ಗಳನ್ನು ಮಾಡುತ್ತಿರುತ್ತಾರೆ. ಈಗ ಪ್ರಮುಖ ಪಾತ್ರ ಮಾಡುವ ಮೂಲಕ ಬಣ್ಣದ ಲೋಕದಲ್ಲಿ ಅವರು ಆ್ಯಕ್ಟೀವ್ ಆಗಲಿದ್ದಾರೆ ಎನ್ನಲಾಗುತ್ತಿದೆ.
ಶಿಖರ್ ಧವನ್ (Shikhar Dhawan) ಇತ್ತೀಚೆಗೆ ಕೌಟುಂಬಿಕ ವಿಚಾರದಲ್ಲಿ ಸಾಕಷ್ಟು ಸುದ್ದಿ ಆಗಿದ್ದರು. ಆಯೇಷಾ ಮುಖರ್ಜಿ ಅವರನ್ನು 2012ರಲ್ಲಿ ಮದುವೆ ಆದರು. 2021ರಲ್ಲಿ ಇಬ್ಬರೂ ಬೇರೆ ಆದರು. ಸದ್ಯ, ಐಪಿಎಲ್ನಲ್ಲಿ (IPL 2022) ಶಿಖರ್ ಧವನ್ ಬ್ಯುಸಿ ಆಗಿದ್ದಾರೆ. ಪಂಜಾಬ್ ಕಿಂಗ್ಸ್ ಪರ ಅವರು ಈ ಬಾರಿ ಬ್ಯಾಟ್ ಬೀಸುತ್ತಿದ್ದಾರೆ. ಐಪಿಎಲ್ ಪೂರ್ಣಗೊಳ್ಳುವುದಕ್ಕೆ ಕೆಲವೇ ದಿನಗಳು ಬಾಕಿ ಇವೆ. ಹೀಗಿರುವಾಗಲೇ ಶಿಖರ್ ಧವನ್ ಕುರಿತು ಹೊಸ ಅಪ್ಡೇಟ್ ಒಂದು ಕೇಳಿ ಬಂದಿದೆ. ಅವರು ಶೀಘ್ರವೇ ಬಾಲಿವುಡ್ಗೆ ಕಾಲಿಡಲಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಗಬ್ಬರ್ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.
ಕ್ರಿಕೆಟ್ ಲೋಕಕ್ಕೂ ಬಣ್ಣದ ಲೋಕಕ್ಕೂ ಒಳ್ಳೆಯ ನಂಟಿದೆ. ಅನೇಕ ಕ್ರಿಕೆಟಿಗರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಕ್ರಿಕೆಟರ್ ಶ್ರೀಶಾಂತ್ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಧವನ್ ಕೂಡ ಈಗ ಆ್ಯಕ್ಟಿಂಗ್ ಶುರು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಶೀಘ್ರವೇ ಮಾಹಿತಿ ಹೊರ ಬೀಳಲಿದೆ ಎಂದು ಪಿಂಕ್ವಿಲ್ಲಾ ವೆಬ್ಸೈಟ್ ವರದಿ ಮಾಡಿದೆ.
ಶಿಖರ್ ಧವನ್ಗೆ ನಟನೆ ಬಗ್ಗೆ ಆಸಕ್ತಿ ಇದೆ. ಅವರು, ಸಾಖಷ್ಟು ಫನ್ನಿ ರೀಲ್ಸ್ಗಳನ್ನು ಮಾಡುತ್ತಿರುತ್ತಾರೆ. ‘ಪುಷ್ಪ’ ಸಿನಿಮಾದ ಡೈಲಾಗ್ ಇಟ್ಟುಕೊಂಡು ಅವರು ಮಾಡಿದ್ದ ರೀಲ್ ಸಖತ್ ವೈರಲ್ ಆಗಿತ್ತು. ಈಗ ಪ್ರಮುಖ ಪಾತ್ರ ಮಾಡುವ ಮೂಲಕ ಬಣ್ಣದ ಲೋಕದಲ್ಲಿ ಅವರು ಆ್ಯಕ್ಟೀವ್ ಆಗಲಿದ್ದಾರೆ ಎನ್ನಲಾಗುತ್ತಿದೆ.
‘ಶಿಖರ್ ಧವನ್ಗೆ ಕಲಾವಿದರನ್ನು ಕಂಡರೆ ಎಲ್ಲಿಲ್ಲದ ಗೌರವ. ಅವರಿಗೆ ಸಿನಿಮಾ ಆಫರ್ ಮಾಡಿದಾಗ ಖುಷಿಯಿಂದ ಒಪ್ಪಿಕೊಂಡರು. ಶಿಖರ್ ಧವನ್ ಈ ಪಾತ್ರಕ್ಕೆ ಸೂಕ್ತ ಎಂದು ನಿರ್ದೇಶಕರಿಗೆ ಅನಿಸಿದೆ. ಹೀಗಾಗಿ, ಪಾತ್ರವನ್ನು ಆಫರ್ ಮಾಡಲಾಗಿದೆ. ಹಾಗಂತ ಇದು ಅತಿಥಿ ಪಾತ್ರವಲ್ಲ. ಅವರ ಕ್ಯಾರೆಕ್ಟರ್ ಸಿನಿಮಾ ಉದ್ದಕ್ಕೂ ಇರಲಿದೆ. ಈ ವರ್ಷವೇ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇದೆ’ ಎಂದು ಮೂಲಗಳು ಹೇಳಿರುವುದಾಗಿ ವರದಿ ಆಗಿದೆ.
ಶಿಖರ್ ಧವನ್ ಅವರು ಈಗಾಗಲೇ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಐಪಿಎಲ್ಗೂ ಮೊದಲೇ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಆದರೆ, ಇದು ಯಾವ ಸಿನಿಮಾ? ಯಾರೆಲ್ಲ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ? ಈ ಬಗ್ಗೆ ಅಧಿಕೃತ ಘೋಷಣೆ ಯಾವಾಗ? ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.
ಶಿಖರ್ ಧವನ್ಗೆ ಸಿನಿಮಾ ಮೇಲೆ ಸಾಕಷ್ಟು ಆಸಕ್ತಿ ಇದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ‘83’ ಚಿತ್ರ ತೆರೆಗೆ ಬಂದಿತ್ತು. ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಕಥೆಯನ್ನು ಸಿನಿಮಾದಲ್ಲಿ ಹೇಳಲಾಗಿತ್ತು. ಈ ಸಿನಿಮಾ ನೋಡಿ ರಣವೀರ್ ಸಿಂಗ್ ನಟನೆಯನ್ನು ಶಿಖರ್ ಧವನ್ ಪ್ರಶಂಸಿಸಿದ್ದರು. ಈ ಬಾರಿಯ ಐಪಿಎಲ್ನಲ್ಲಿ ಧವನ್ 421 ರನ್ ಬಾರಿಸಿದ್ದಾರೆ. ಒಂದು ಪಂದ್ಯದಲ್ಲಿ ಅವರು ಪೇರಿಸಿದ ಗರಿಷ್ಠ ರನ್ 88. ಮೇ 22ರಂದು ಪಂಜಾಬ್ ಈ ಸೀಸನ್ನ ಕೊನೆಯ ಪಂದ್ಯವನ್ನು ಆಡಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.