Shimoga: ಹೆಂಡತಿಯೊಂದಿಗೆ ವಿಡಿಯೋ ಕಾಲ್​ನಲ್ಲಿ ಮಾತನಾಡುವಾಗಲೇ ನೇಣಿಗೆ ಶರಣಾದ ಶಿವಮೊಗ್ಗ ಜೈಲಿನ ವಾರ್ಡರ್ | Shimoga 24 year old Shivamogga jail warder Dies by Suicide during WhatsApp video call to wife


Shimoga: ಹೆಂಡತಿಯೊಂದಿಗೆ ವಿಡಿಯೋ ಕಾಲ್​ನಲ್ಲಿ ಮಾತನಾಡುವಾಗಲೇ ನೇಣಿಗೆ ಶರಣಾದ ಶಿವಮೊಗ್ಗ ಜೈಲಿನ ವಾರ್ಡರ್

ಅಶ್ಫಾಕ್ ತಗಡಿ

ಶಿವಮೊಗ್ಗ: ಶಿವಮೊಗ್ಗದ ಜೈಲಿನಲ್ಲಿ ವಾರ್ಡರ್ ಆಗಿ ಕೆಲಸ ಮಾಡುತ್ತಿದ್ದ 24 ವರ್ಷದ ಯುವಕರೊಬ್ಬರು ತನ್ನ ಪತ್ನಿಗೆ ವಾಟ್ಸಾಪ್ ವಿಡಿಯೋ ಕಾಲ್ ಮಾಡುವಾಗಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಬೆಳಗಾವಿಯ ಯರ್ನಾಡ ಗ್ರಾಮದ ಅಶ್ಫಾಕ್ ತಗಡಿ ಎಂಬ ವ್ಯಕ್ತಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಾರ್ಡರ್ ಆಗಿದ್ದರು. ಅವರು ತಮ್ಮ ಹೆಂಡತಿಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದಾಗಲೇ ರೂಮಿನ ಫ್ಯಾನ್​ಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ.

ತಕ್ಷಣ ಅಶ್ಫಾಕ್ ಅವರ ಹೆಂಡತಿಯ ಜೈಲಿನ ಇತರೆ ಅಧಿಕಾರಿಗಳಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ, ಅವರು ಅಲ್ಲಿಗೆ ತೆರಳಿ ಮನೆಯ ಬಾಗಿಲು ಒಡೆದು ಒಳಗೆ ಹೋಗುವಷ್ಟರಲ್ಲಿ ಅಶ್ಫಾಕ್ ಉಸಿರು ನಿಲ್ಲಿಸಿದ್ದರು. ಕಳೆದ ವರ್ಷ ಪೊಲೀಸ್ ಇಲಾಖೆಗೆ ಸೇರಿದ್ದ ಅಶ್ಫಾಕ್ ಇದೇ ಮೊದಲ ಬಾರಿಗೆ ಜೈಲಿನಲ್ಲಿ ಅವರ ಮೊದಲ ಪೋಸ್ಟಿಂಗ್ ಆಗಿತ್ತು. ಆತ್ಮಹತ್ಯೆಗೆ ಕಾರಣವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಸದ್ಯದ ಮಾಹಿತಿ ಪ್ರಕಾರ, ಕೌಟುಂಬಿಕ ಕಲಹದ ಕಾರಣದಿಂದ ಅಶ್ಫಾಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಡಿಸೆಂಬರ್​​ನಲ್ಲಿ ಅಶ್ಫಾಕ್​​​ ತಮ್ಮ ಪಕ್ಕದೂರಿನ ಯರನಾಳು ಗ್ರಾಮದ ರಾಜೇಸಾಬ್​ ಎಂಬುವವರ ಮಗಳನ್ನು ಮದುವೆಯಾಗಿದ್ದರು. ಅವರಿಗೆ ಹೆಣ್ಣು ಮಗು ಕೂಡ ಇದೆ. ಅಶ್ಫಾಕ್​ ಅವರ ಹೆಂಡತಿ 20 ದಿನಗಳ ಹಿಂದಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗು ಹುಟ್ಟಿದ 40 ದಿನಕ್ಕೆ ಗಂಡನ ಮನೆಗೆ ಬರುವ ಶಾಸ್ತ್ರ ಮಾಡುವ ಸಲುವಾಗಿ ಅಶ್ಫಾಕ್ ಹೆಂಡತಿಯೊಂದಿಗೆ ಮಾತನಾಡುವಾಗ ಇಬ್ಬರ ನಡುವೆ ಸಣ್ಣ ಜಗಳವಾಗಿದೆ ಎನ್ನಲಾಗಿದೆ.

ವಿಡಿಯೋ ಕಾಲ್​ನಲ್ಲಿ ಹೆಂಡತಿಯೊಂದಿಗೆ ಜಗಳವಾಡಿ, ಮಗುವಿನ ಮುಖ ನೋಡುತ್ತಿರುವಾಗಲೇ ಅವರು ನೇಣಿಗೆ ಶರಣಾಗಿದ್ದಾರೆ. ಅಶ್ಫಾಕ್ ನೇಣಿಗೆ ಶರಣಾಗುತ್ತಿರುವ ವಿಡಿಯೋ ನೋಡುತ್ತಿದ್ದಂತೆಯೇ ಹೆಂಡತಿ ಅದನ್ನು ತನ್ನ ತಂದೆಗೆ ತೋರಿಸಿದ್ದಾರೆ. ತಕ್ಷಣ ಅವರು ಶಿವಮೊಗ್ಗದಲ್ಲಿನ ಅಶ್ಫಾಕ್ ಅವರ ಸ್ನೇಹಿತನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಜೈಲು ಸಿಬ್ಬಂದಿ ಬಂದು ಮನೆ ಬಾಗಿಲು ಒಡೆದು ಒಳಗೆ ಹೋಗುವಷ್ಟರಲ್ಲಿ ಅಶ್ಫಾಕ್ ಸಾವನ್ನಪ್ಪಿದ್ದರು.

ಇದನ್ನೂ ಓದಿ: ಶಿವಮೊಗ್ಗದ ಸಾಗರದಲ್ಲಿ ಭಾರೀ ಸ್ಫೋಟ! ಧಗ ಧಗನೇ ಉರಿದ ಬೆಂಕಿ

Karnataka Dam Water Level: ಕರಾವಳಿ, ಮಲೆನಾಡಿನಲ್ಲಿ ಇನ್ನೆರಡು ದಿನ ಮಳೆ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

TV9 Kannada


Leave a Reply

Your email address will not be published. Required fields are marked *