Shivamogga: ಶಿವಮೊಗ್ಗ ಜಿಲ್ಲೆಯಲ್ಲಿ ಅನಾರೋಗ್ಯ ಪೀಡಿತ ತಾಯಿಯನ್ನು ಜೋಲಿ ಕಟ್ಟಿ ಹೊತ್ತುಕೊಂಡು ಆಸ್ಪತ್ರೆಗೆ ಕರೆತಂದ ಮಗ | Son carries mother in cradle to reach hospital in jog in sagar taluk shivamogga district


Shivamogga: ಶಿವಮೊಗ್ಗ ಜಿಲ್ಲೆಯಲ್ಲಿ ಅನಾರೋಗ್ಯ ಪೀಡಿತ ತಾಯಿಯನ್ನು ಜೋಲಿ ಕಟ್ಟಿ ಹೊತ್ತುಕೊಂಡು ಆಸ್ಪತ್ರೆಗೆ ಕರೆತಂದ ಮಗ

ಶಿವಮೊಗ್ಗ ಜಿಲ್ಲೆಯಲ್ಲಿ ಅನಾರೋಗ್ಯ ಪೀಡಿತ ತಾಯಿಯನ್ನು ಜೋಲಿ ಕಟ್ಟಿ ಹೊತ್ತುಕೊಂಡು ಆಸ್ಪತ್ರೆಗೆ ಕರೆತಂದ ಮಗ

ನಗರ ಪ್ರದೇಶದಲ್ಲಿದ್ದರೂ ಇದುವರೆಗೆ ಸ್ಥಳೀಯ ಆಡಳಿತ ಚರ್ಚ್‌ ಮೌಂಟ್ ಏರಿಯಾಗೆ ರಸ್ತೆ ಸಂಪರ್ಕ ಕಲ್ಪಿಸಿಲ್ಲ. ಚರ್ಚ್ ಮೌಂಟ್ ಏರಿಯಾದಲ್ಲಿರುವ ಸುಮಾರು 20 ಮನೆಗಳಿಗೆ ಓಡಾಡಲು ರಸ್ತೆಯೇ ಇಲ್ಲ! ರಸ್ತೆ ಇಲ್ಲದಿದ್ದರಿಂದ ಯಾರಾದರೂ ಅನಾರೋಗ್ಯಕ್ಕೊಳಗಾದರೆ ಜೋಲಿ ಕಟ್ಟಿ ಹೊತ್ತುಕೊಂಡು ಬರಬೇಕಾದ ದುಃಸ್ಥಿತಿ ಇಲ್ಲಿನ ಜನರದ್ದು.

ಶಿವಮೊಗ್ಗ: ಅನಾರೋಗ್ಯ ಪೀಡಿತರನ್ನು ಜೋಲಿ ಕಟ್ಟಿ ಹೊತ್ತುಕೊಂಡು ಆಸ್ಪತ್ರೆಗೆ ಕರೆತಂದರು ಎಂಬಂತಹ ಸುದ್ದಿಗಳನ್ನು ಆಗಾಗ ಬೆರೆಲ್ಲೋ ನಡೆದಿರುವ ಸುದ್ದಿಗಳನ್ನು ನೀವು ಓದಿರುತ್ತೀರಿ. ಆದರೆ ಈಗ ಹೇಳುತ್ತಿರುವ ಪ್ರಕರಣ ನಮ್ಮ ರಾಜ್ಯದಲ್ಲೆ ಅದೂ ರಾಜಕೀಯವಾಗಿ ಬಲಾಢ್ಯವಾದ ಶಿವಮೊಗ್ಗ ಜಿಲ್ಲೆಯಲ್ಲಿ ಘಟಿಸಿದೆ. ಹೌದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗದಲ್ಲೊಂದು ಇಂತಹ ಮನಕಲಕುವ ದೃಶ್ಯ ಕಣ್ಣಿಗೆ ಬಿದ್ದಿದೆ. ಅನಾರೋಗ್ಯ ಪೀಡಿತ ತಾಯಿಯನ್ನು ಮಗ ಜೋಲಿ ಕಟ್ಟಿ ಹೊತ್ತುಕೊಂಡು ಆಸ್ಪತ್ರೆಗೆ ಕರೆತಂದಿದ್ದಾನೆ.

ತಮ್ಮ ಮನೆಗೆ ರಸ್ತೆ ಇಲ್ಲದಿರುವುದರಿಂದ ವಾಹನ ವ್ಯವಸ್ಥೆಯೂ ಇಲ್ಲದ ಕಾರಣ ತಾಯಿಯನ್ನು ಹೊತ್ತುಕೊಂಡು ಆಸ್ಪತ್ರೆಗೆ ಕರೆತಂದಿದ್ದಾಗಿ ಮಗ ಹೇಳಿದ್ದಾನೆ. ಜೋಗದ ಚರ್ಚ್ ಮೌಂಟ್ ಏರಿಯಾದ ಅಚ್ಚಮ್ಮ ಎಂಬುವರು ಪಾರ್ಶ್ವವಾಯುಗೆ ತುತ್ತಾದರು‌. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆತರಲು ಅವರ ಮನೆಗೆ ರಸ್ತೆಯೇ ಇಲ್ಲ‌. ಹೀಗಾಗಿ ತಾಯಿಯನ್ನು ಉಳಿಸಿಕೊಳ್ಳಲು ಜೋಲಿ ಕಟ್ಟಿ ಕಾಲುದಾರಿಯಲ್ಲಿ ತಾಯಿಯನ್ನು ಹೊತ್ತುಕೊಂಡು ಬಂದಿದ್ದಾನೆ ಅವರ ಮಗ ಅದ್ದಮ್.

ಸುಮಾರು ಒಂದು ಕಿಲೋ ಮೀಟರ್‌ ತಾಯಿ ಅಚ್ಚಮ್ಮಳನ್ನು ಹೊತ್ತುಕೊಂಡು ಬಂದ ಮಗ ಅದ್ದಮ್, ರಸ್ತೆ ಸಿಕ್ಕ ಬಳಿಕ ಅಲ್ಲಿಂದ ಆಸ್ಪತ್ರೆಗೆ ತಾಯಿಯನ್ನು ವಾಹನದಲ್ಲಿ ಕರೆತಂದಿದ್ದಾನೆ. ಜೋಗದ ಕಾರ್ಗಲ್ ಪಟ್ಟಣ ಪಂಚಾಯತಿಗೆ ಸೇರಿರುವ ಚರ್ಚ್ ಮೌಂಟ್ ಏರಿಯಾದಲ್ಲಿ ಅಚ್ಚಮ್ಮ ಕುಟುಂಬ ವಾಸವಾಗಿದೆ.

ನಗರ ಪ್ರದೇಶದಲ್ಲಿದ್ದರೂ ಇದುವರೆಗೆ ಸ್ಥಳೀಯ ಆಡಳಿತ ಚರ್ಚ್‌ ಮೌಂಟ್ ಏರಿಯಾಗೆ ರಸ್ತೆ ಸಂಪರ್ಕ ಕಲ್ಪಿಸಿಲ್ಲ. ಚರ್ಚ್ ಮೌಂಟ್ ಏರಿಯಾದಲ್ಲಿರುವ ಸುಮಾರು 20 ಮನೆಗಳಿಗೆ ಓಡಾಡಲು ರಸ್ತೆಯೇ ಇಲ್ಲ! ರಸ್ತೆ ಇಲ್ಲದಿದ್ದರಿಂದ ಯಾರಾದರೂ ಅನಾರೋಗ್ಯಕ್ಕೊಳಗಾದರೆ ಜೋಲಿ ಕಟ್ಟಿ ಹೊತ್ತುಕೊಂಡು ಬರಬೇಕಾದ ದುಃಸ್ಥಿತಿ ಇಲ್ಲಿನ ಜನರದ್ದು. ಯಾರು ಹೇಳಿದ್ದು ರಾಜಕೀಯ ಘಟಾನುಘಟಿಗಳನ್ನೆ ಹೊಂದಿರುವ ಶಿವಮೊಗ್ಗ ಜಿಲ್ಲೆ ರಾಜಕೀಯವಾಗಿ ಬಲಾಢ್ಯ ಎಂದು?

TV9 Kannada


Leave a Reply

Your email address will not be published. Required fields are marked *