ಇಷ್ಟು ದಿನ ಕಾಮಗಾರಿ ಒಳಗೆ ನಡೆಯುವ ಸ್ಥಳಕ್ಕೆ ಯಾರನ್ನು ಬಿಡದ ಅಧಿಕಾರಿಗಳು ಪ್ರಚಾರದ ಗೀಳು ಬಯಸಿ ಒಳ ಬಿಟ್ಟುಕೊಂಡಿದ್ದರು. ಯಾವಾಗ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕಾರಿಗಳ ವಿರುದ್ಧ ಆಕ್ಷೇಪ ವ್ಯಕ್ತವಾಯಿತೋ, ಶಿವಮೊಗ್ಗ ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಪ್ರವೇಶ ನಿಷೇಧಗೊಳಿಸಿ ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣ
ಶಿವಮೊಗ್ಗದಿಂದ 20km ದೂರದಲ್ಲಿರುವ ಸೋಗಾನೆ ಎಂಬಲ್ಲಿ ನಿರ್ಮಾಣವಾಗಿರುವ, ಶಿವಮೊಗ್ಗ ವಿಮಾನ ನಿಲ್ದಾಣ ಮುಂದಿನ ತಿಂಗಳು 27ನೇ ತಾರೀಕಿನಂದು ಪ್ರಧಾನಿ ಮೋದಿ ಅವರಿಂದ ಉದ್ಘಾಟನೆ ಆಗಲಿದೆ. ಇದನ್ನ ಅಧಿಕೃತವಾಗಿ ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಈಗಾಗಲೇ ರಾಜಕಾರಣಿಗಳು ದಂಡು ಪದೇಪದೇ ಭೇಟಿ ನೀಡುತ್ತಾ ವಿಮಾನ ನಿಲ್ದಾಣಕ್ಕೆ ಹೆಚ್ಚು ಪ್ರಚಾರ ತಂದುಕೊಡುತ್ತಾ, ಫೊಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾ, ಅಭಿವೃದ್ಧಿ ಸಂಕೇತ ಎಂದು ಒಕ್ಕಣೆ ಬರೆದು ಪೋಸ್ಟ್ ಮಾಡುತ್ತಿದ್ದರು. ಇದು ಜನರ ಆಕರ್ಷಣೆಗೂ ಕಾರಣವಾಗುತ್ತಿತ್ತು. ಇವುಗಳಿಂದ ಆಕರ್ಷಿತರಾದ ಸಾಮಾನ್ಯ ಜನರು ತಮ್ಮೂರಿನ ವಿಮಾನ ನಿಲ್ದಾಣ ನೋಡಲು ಜಾತ್ರೆಯಂತೆ ಸೇರುತ್ತಿದ್ದರು. ಹೇಗೋ ಪ್ರಚಾರವನ್ನೇ ಬಯಸಿಕೊಂಡಿದ್ದ ಬಿಜೆಪಿ ನಾಯಕರು ಕೂಡ ಜನರನ್ನ ಪರೋಕ್ಷವಾಗಿ ಒಳ ಬಿಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂಬ ಅನುಮಾನಗಳು ಮೂಡತೊಡಗಿದವು. ಪ್ರತಿದಿನ ನೂರಾರು ಕುಟುಂಬಗಳು ವಾಹನಗಳು ಬೈಕ್ ಗಳು ಯೂಟ್ಯೂಬರ್ ಗಳು ಉದ್ಘಾಟನೆಯಾಗದ ವಿಮಾನ ನಿಲ್ದಾಣದ ಒಳಗೆ, ರನ್ ವೇ ಮೇಲೆ ಫೋಟೋಶೂಟ್ ನಡೆಸುತ್ತಿದ್ದರು.
ತಾಜಾ ಸುದ್ದಿ