Shoaib Akhtar: ಶೋಯೆಬ್ ಅಖ್ತರ್ ಬಯೋಪಿಕ್​ಗೆ ಹೀರೋ ಫಿಕ್ಸ್; ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರದ ನಾಯಕ – Singer actor Umair Jaswal to play Shoaib Akhtar in biopic Rawalpindi Express

Shoaib Akhtar: ಪಾಕಿಸ್ತಾನದ ವೇಗದ ಬೌಲರ್ ಶೋಯೆಬ್ ಅಖ್ತರ್ ಜೀವನಾಧಾರಿತ ಸಿನಿಮಾವೊಂದು ತಯಾರಾಗಲಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಶೋಯೆಬ್ ಅಖ್ತರ್ ಪಾತ್ರವನ್ನು ಗಾಯಕ ಮತ್ತು ನಟ ಉಮರ್ ಜಸ್ವಾಲ್ ನಿರ್ವಹಿಸಲಿದ್ದಾರೆ.

Nov 16, 2022 | 7:00 PM

TV9kannada Web Team

| Edited By: pruthvi Shankar

Nov 16, 2022 | 7:00 PM

ಭಾರತದ ನಂತರ, ಪಾಕಿಸ್ತಾನದಲ್ಲಿ ಕ್ರೀಡಾ ಪಟುಗಳ ಜೀವನಾಧಾರಿತ ಬಯೋಪಿಕ್ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಮೊದಲನೆಯದಾಗಿ, ಪಾಕಿಸ್ತಾನದ ವೇಗದ ಬೌಲರ್ ಶೋಯೆಬ್ ಅಖ್ತರ್ ಜೀವನಾಧಾರಿತ ಸಿನಿಮಾವೊಂದು ತಯಾರಾಗಲಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಶೋಯೆಬ್ ಅಖ್ತರ್ ಪಾತ್ರವನ್ನು ಗಾಯಕ ಮತ್ತು ನಟ ಉಮರ್ ಜಸ್ವಾಲ್ ನಿರ್ವಹಿಸಲಿದ್ದಾರೆ.

ಬುಧವಾರ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಉಮರ್ ಈ ಮಾಹಿತಿ ನೀಡಿದ್ದಾರೆ. ಪೋಸ್ಟರ್‌ನಲ್ಲಿ, ಅವರು ಶೋಯೆಬ್ ಅವರ ಜರ್ಸಿ ಸಂಖ್ಯೆ 14 ಅನ್ನು ಧರಿಸಿದ್ದು, ಈ ಚಿತ್ರದಲ್ಲಿ ಶೋಯೆಬ್ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಚಿತ್ರಕ್ಕೆ 'ರಾವಲ್ಪಿಂಡಿ ಎಕ್ಸ್‌ಪ್ರೆಸ್' ಎಂದು ಹೆಸರಿಡಲಾಗಿದೆ.

ಬುಧವಾರ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಉಮರ್ ಈ ಮಾಹಿತಿ ನೀಡಿದ್ದಾರೆ. ಪೋಸ್ಟರ್‌ನಲ್ಲಿ, ಅವರು ಶೋಯೆಬ್ ಅವರ ಜರ್ಸಿ ಸಂಖ್ಯೆ 14 ಅನ್ನು ಧರಿಸಿದ್ದು, ಈ ಚಿತ್ರದಲ್ಲಿ ಶೋಯೆಬ್ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ‘ರಾವಲ್ಪಿಂಡಿ ಎಕ್ಸ್‌ಪ್ರೆಸ್’ ಎಂದು ಹೆಸರಿಡಲಾಗಿದೆ.

ಶೋಯೆಬ್ ಹುಟ್ಟಿನಿಂದ 2002ರವರೆಗಿನ ಪಯಣವನ್ನು ಈ ಚಿತ್ರದಲ್ಲಿ ತೋರಿಸಲಾಗುವುದು. ವಿವಿಧ ವಯೋಮಾನಗಳಲ್ಲಿ ಶೋಯೆಬ್ ಅವರಂತೆ ಕಾಣಲು ಉಮರ್ ತಯಾರಿ ನಡೆಸುತ್ತಿದ್ದಾರೆ. ಕ್ರಿಕೆಟ್ ತರಬೇತಿಯನ್ನೂ ತೆಗೆದುಕೊಳ್ಳುತ್ತಿದ್ದಾರೆ.

ಈ ಚಿತ್ರದ ಶೂಟಿಂಗ್ ಡಿಸೆಂಬರ್‌ನಲ್ಲಿ ಆರಂಭವಾಗಲಿದೆ. ಪಾಕಿಸ್ತಾನ, ದುಬೈ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಚಿತ್ರೀಕರಣ ನಡೆಯಲಿದೆ. ಈ ಪಾತ್ರವನ್ನು ನಿರ್ವಹಿಸಲು ತುಂಬಾ ಉತ್ಸುಕರಾಗಿದ್ದು, ಶೋಯೆಬ್ ಅವರ ಜೀವನ ಸ್ಫೂರ್ತಿದಾಯಕವಾಗಿದೆ. ಅವರು ಪಾಕಿಸ್ತಾನಕ್ಕೆ ಮಾತ್ರವಲ್ಲದೆ ವಿಶ್ವದ ದೊಡ್ಡ ಸ್ಟಾರ್ ಎಂದು ಉಮರ್ ಹೇಳಿದ್ದಾರೆ.

ಈ ಚಿತ್ರ ಮುಂದಿನ ವರ್ಷ ನವೆಂಬರ್ 16 ರಂದು ಬಿಡುಗಡೆಯಾಗಲಿದೆ. ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಶೋಯೆಬ್ ಅಖ್ತರ್ ಈಗ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶ್ವದಲ್ಲೇ ಅತಿ ವೇಗದ ಚೆಂಡನ್ನು ಎಸೆದ ದಾಖಲೆ ಈಗಲೂ ಶೋಯೆಬ್ ಹೆಸರಿನಲ್ಲಿದೆ.

Most Read StoriesTV9 Kannada

Leave a Reply

Your email address will not be published.