Shocking News: ಆಸ್ಪತ್ರೆಯಲ್ಲಿ ಅತ್ತಿದ್ದಕ್ಕೆ 3,100 ರೂ. ಶುಲ್ಕ ವಿಧಿಸಿದ ವೈದ್ಯರು; ಬಿಲ್ ನೋಡಿ ಮಹಿಳೆ ಶಾಕ್ | Shocking News: US Woman Shocked After Being Charged 3100 Rs For Crying During Doctor Visit


Shocking News: ಆಸ್ಪತ್ರೆಯಲ್ಲಿ ಅತ್ತಿದ್ದಕ್ಕೆ 3,100 ರೂ. ಶುಲ್ಕ ವಿಧಿಸಿದ ವೈದ್ಯರು; ಬಿಲ್ ನೋಡಿ ಮಹಿಳೆ ಶಾಕ್

ಬಿಲ್​

Image Credit source: NDTV

ಅಮೆರಿಕಾದ ವೈದ್ಯರ ಅಪಾಯಿಂಟ್‌ಮೆಂಟ್‌ನಲ್ಲಿ “ಅತ್ತಿದ್ದಕ್ಕಾಗಿ” ತನ್ನ ಸಹೋದರಿಗೆ ಸುಮಾರು 3,100 ರೂ. ವಿಧಿಸಲಾಗಿದೆ ಎಂದು ಅಮೆರಿಕಾದ ಮಹಿಳೆಯೊಬ್ಬರು ಇತ್ತೀಚೆಗೆ ಬಿಲ್​ನ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ಒಮ್ಮೆ ಆಸ್ಪತ್ರೆಯ ಮೆಟ್ಟಿಲು ಹತ್ತಬೇಕೆಂದು ನಾಲ್ಕೈದು ಬಾರಿ ಪರ್ಸ್​ ಚೆಕ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಈಗ ಬಂದಿದೆ. ಆಸ್ಪತ್ರೆಗಳಲ್ಲಿ ಸಣ್ಣ ಪುಟ್ಟ ಟೆಸ್ಟ್​ಗೂ ಸಾವಿರಾರು ರೂ. ಬಿಲ್ ಮಾಡುವವರಿದ್ದಾರೆ. ಇಲ್ಲೊಬ್ಬರು ಅಮೆರಿಕದ ವೈದ್ಯರು ತನ್ನ ರೋಗಿ ತನ್ನ ಬಳಿ ಬಂದಾಗ ಅತ್ತಿದ್ದಕ್ಕೂ ಬಿಲ್ (Hospital Bill) ಮಾಡಿದ್ದಾರೆ. ರೋಗಿ ಅತ್ತಿದ್ದಾಳೆ ಎಂಬ ಕಾರಣಕ್ಕೆ ಸುಮಾರು 3,100 ರೂ. ಬಿಲ್ ಮಾಡಿದ್ದಾರೆ. ಈ ಬಿಲ್​ನ ರಶೀದಿ ಇದೀಗ ಭಾರೀ ವೈರಲ್ ಆಗಿದೆ.

ಅಮೆರಿಕಾದ ವೈದ್ಯರ ಅಪಾಯಿಂಟ್‌ಮೆಂಟ್‌ನಲ್ಲಿ “ಅತ್ತಿದ್ದಕ್ಕಾಗಿ” ತನ್ನ ಸಹೋದರಿಗೆ ಸುಮಾರು 3,100 ರೂ. ವಿಧಿಸಲಾಗಿದೆ ಎಂದು ಅಮೆರಿಕಾದ ಮಹಿಳೆಯೊಬ್ಬರು ಇತ್ತೀಚೆಗೆ ಬಿಲ್​ನ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ನನ್ನ ಸಹೋದರಿಗೆ “ಅಪರೂಪದ ಕಾಯಿಲೆ” ಇತ್ತು. ಆಕೆಯನ್ನು ನಾವು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದೆವು. ಅಲ್ಲಿ ಆಕೆ ಭಾವುಕಳಾಗಿ ಕಣ್ಣೀರು ಹಾಕಿದಳು. ವೈದ್ಯರು ನೀಡಿರುವ ಬಿಲ್​ನಲ್ಲಿ ಬ್ರೀಫ್ ಎಮೋಷನ್/ ಬಿಹೇವಿಯರಲ್ ಅಸೆಸ್​ಮೆಂಟ್ ಎಂದು ನಮೂದಿಸಿ ಅದಕ್ಕೂ ಚಾರ್ಜ್ ಮಾಡಲಾಗಿದೆ.

ಬಿಲ್​ನಲ್ಲಿ ವೈದ್ಯರ ಭೇಟಿಯ ವಿವಿಧ ವೆಚ್ಚವು ಹೀಗಿದೆ. ದೃಷ್ಟಿ ಮೌಲ್ಯಮಾಪನ ಪರೀಕ್ಷೆ- 20 ಡಾಲರ್, ಹಿಮೋಗ್ಲೋಬಿನ್ ಪರೀಕ್ಷೆ- 15 ಡಾಲರ್, ಕ್ಯಾಪಿಲ್ಲರಿ ರಕ್ತ ಡ್ರಾ – 30 ಡಾಲರ್, ಆರೋಗ್ಯ ತಪಾಸಣೆ- 350 ಡಾಲರ್ ಮತ್ತು ಬ್ರೀಫ್ ಎಮೋಷನಲ್/ ಬಿಹೇವಿಯರಲ್ ಅಸೆಸ್​ಮೆಂಟ್​- 40 ಡಾಲರ್ ಶುಲ್ಕ ವಿಧಿಸಲಾಗಿದೆ.

TV9 Kannada


Leave a Reply

Your email address will not be published. Required fields are marked *