Shocking News: ಇಲ್ಲಿ ಮೂತ್ರದಿಂದ ತಯಾರಾಗುತ್ತೆ ಬಿಯರ್; ಚಪ್ಪರಿಸಿ ಕುಡಿಯೋರೂ ಇದಾರೆ ಸ್ವಾಮಿ! | Shocking News: Beer Made From Urine At This Singapore Brewery do you want to try it?


ಸಿಂಗಾಪುರದಲ್ಲಿ ಚರಂಡಿ ನೀರು ಮತ್ತು ಮೂತ್ರದಿಂದ ಬಿಯರ್ ತಯಾರಿಸಲಾಗುತ್ತಿದೆಯಂತೆ. ಶುದ್ಧೀಕರಿಸಲಾದ ಕೊಳಚೆ ನೀರು ಮತ್ತು ಮೂತ್ರದಿಂದ ಬಿಯರ್ ಉತ್ಪಾದನೆ ಮಾಡುವುದಾಗಿ ಘೋಷಿಸಲಾಗಿದೆ.

ಖುಷಿಯಾದರೂ, ದುಃಖವಾದರೂ, ಏನೂ ಆಗದೇ ಇದ್ದರೂ ಎಣ್ಣೆ ಹೊಡೆಯುವ ಜನರು ನಮ್ಮ ದೇಶದಲ್ಲಿ ಸಾಕಷ್ಟಿದ್ದಾರೆ. ಕೆಲವರು ಬಿಯರ್, ಇನ್ನು ಕೆಲವರು ವಿಸ್ಕಿ, ಮತ್ತೆ ಕೆಲವರು ರಮ್ ಹೀಗೆ ನಾನಾ ರೀತಿಯ, ನಾನಾ ಬ್ರ್ಯಾಂಡ್​ಗಳ ಆಲ್ಕೋಹಾಲ್ ಸೇವನೆ ಮಾಡಲಾಗುತ್ತದೆ. ಆದರೆ, ಸಿಂಗಾಪುರದಲ್ಲಿ ಮನುಷ್ಯನ ಮೂತ್ರದಿಂದ (Urine) ತಯಾರಿಸಲಾಗುವ ಬಿಯರ್​ಗೆ ಭಾರೀ ಡಿಮ್ಯಾಂಡ್ ಇದೆಯಂತೆ! ಮೂತ್ರದಿಂದಲೂ ಬಿಯರ್ (Beer) ತಯಾರಿಸುತ್ತಾರಾ? ಎಂದು ಮೂಗು ಮುರಿಯಬೇಡಿ. ಈಗಾಗಲೇ ಈ ಬಿಯರ್ ರೆಡಿಯಾಗಿದ್ದು, ಹೊಸ ಬಗೆಯ ಬಿಯರ್ ಟ್ರೈ ಮಾಡಬೇಕು ಎಂದು ಬಯಸುವವರು ಈ ಬಿಯರ್ ಟೇಸ್ಟ್ ಮಾಡಬಹುದು! ಆದರೆ, ಅದಕ್ಕೆ ಸ್ವಲ್ಪ ಜಾಸ್ತಿಯೇ ಧೈರ್ಯ ಬೇಕಷ್ಟೆ.

ಸಿಂಗಾಪುರದಲ್ಲಿ ಚರಂಡಿ ನೀರು ಮತ್ತು ಮೂತ್ರದಿಂದ ಬಿಯರ್ ತಯಾರಿಸಲಾಗುತ್ತಿದೆಯಂತೆ. ಶುದ್ಧೀಕರಿಸಲಾದ ಕೊಳಚೆ ನೀರು ಮತ್ತು ಮೂತ್ರದಿಂದ ಬಿಯರ್ ಉತ್ಪಾದನೆ ಮಾಡುವುದಾಗಿ ಘೋಷಿಸಲಾಗಿದೆ. ಸಿಂಗಾಪುರದ ನೀರು ಸರಬರಾಜು ಸಂಸ್ಥೆಯು ಹೊಸ ಬಿಯರ್ ಬ್ರ್ಯಾಂಡ್ ನ್ಯೂಬ್ರೂ ಅನ್ನು ಪ್ರಾರಂಭಿಸಿದೆ. ಇದು ಪಾನೀಯವನ್ನು ತಯಾರಿಸಲು ಮರುಬಳಕೆಯ ಮತ್ತು ಫಿಲ್ಟರ್ ಮಾಡಿದ ನೀರನ್ನು ಬಳಸುತ್ತದೆ. ನ್ಯೂಬ್ರೂ ಸಂಸ್ಥೆಯ ಪ್ರಮುಖ ಘಟಕಾಂಶವೆಂದರೆ NEWater ಎಂದು ಕಂಪನಿಯು ಹೇಳಿಕೊಂಡಿದೆ. ಇದು ಸುಮಾರು 20 ವರ್ಷಗಳಿಂದ ಸುಮಾರು ಕೊಳಚೆನೀರಿನ ಶುದ್ಧೀಕರಿಸಿದ ದ್ರವವಾಗಿದೆ. ಇದು ಕುಡಿಯಲು ಸುರಕ್ಷಿತವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

TV9 Kannada


Leave a Reply

Your email address will not be published. Required fields are marked *