Shocking News: ತನ್ನ ಪ್ರೇಮಿಯ ಜೊತೆಗೇ 15 ವರ್ಷದ ಮಗಳ ಮದುವೆ ಮಾಡಿದ ತಾಯಿ! – Shocking News: Pune Woman gets her 28 year old lover married to her 15 year old daughter Kannada News


ಮಹಾರಾಷ್ಟ್ರದ ಪುಣೆಯಲ್ಲಿ 15 ವರ್ಷದ ಬಾಲಕಿಯನ್ನು ಆಕೆಯ ತಾಯಿ ತನ್ನ 28 ವರ್ಷದ ಪ್ರೇಮಿಯೊಂದಿಗೆ ಬಲವಂತವಾಗಿ ವಿವಾಹ ಮಾಡಿದ್ದಾಳೆ. ಅಲ್ಲದೆ, ತನ್ನ ಪ್ರಿಯಕರನೊಂದಿಗೆ ಲೈಂಗಿಕ ಸಂಬಂಧವಿಟ್ಟುಕೊಳ್ಳಲು ತಾಯಿಯೇ ಮಗಳನ್ನು ಒತ್ತಾಯಿಸಿದ್ದಾಳೆ.

ಪುಣೆ: ಮದುವೆಯಾಗಿ 15 ವರ್ಷದ ಮಗಳಿದ್ದರೂ ಬೇರೊಬ್ಬ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ತನ್ನ ಅನೈತಿಕ ಸಂಬಂಧಕ್ಕೆ (Illegal Relationship) ಅನುಕೂಲವಾಗಲೆಂದು ಮಗಳ ಜೀವನವನ್ನೇ ಹಾಳು ಮಾಡಿದ್ದಾಳೆ. 28 ವರ್ಷದ ಯುವಕನೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಮಹಿಳೆ ಆತನಿಗೆ ತನ್ನ 15 ವರ್ಷದ ಮಗಳನ್ನೇ ಕೊಟ್ಟು ಮದುವೆ ಮಾಡಿರುವ ಆಘಾತಕಾರಿ ಘಟನೆ (Shocking News) ಮಹಾರಾಷ್ಟ್ರದ ಪುಣೆಯಲ್ಲಿ (Pune Crime) ನಡೆದಿದೆ.

ಮಹಾರಾಷ್ಟ್ರದ ಪುಣೆಯಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಆಕೆಯ ತಾಯಿ ತನ್ನ 28 ವರ್ಷದ ಪ್ರೇಮಿಯೊಂದಿಗೆ ಬಲವಂತವಾಗಿ ವಿವಾಹ ಮಾಡಿದ್ದಾಳೆ. ಅಲ್ಲದೆ, ತನ್ನ ಪ್ರಿಯಕರನೊಂದಿಗೆ ಲೈಂಗಿಕ ಸಂಬಂಧವಿಟ್ಟುಕೊಳ್ಳಲು ತಾಯಿಯೇ ಮಗಳನ್ನು ಒತ್ತಾಯಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

36 ವರ್ಷದ ಮಹಿಳೆ ಮತ್ತು ಆಕೆಯ 28 ವರ್ಷದ ಪ್ರೇಮಿಯನ್ನು ಪೋಕ್ಸೊ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

TV9 Kannada


Leave a Reply

Your email address will not be published.