Shocking News: ದೆಹಲಿಯಲ್ಲಿ 12 ವರ್ಷದ ಬಾಲಕನ ಮೇಲೆ ಸಾಮೂಹಿಕ ಅತ್ಯಾಚಾರ; ಗುಪ್ತಾಂಗಕ್ಕೆ ರಾಡ್ ಹಾಕಿದ ಗೆಳೆಯರು! | Shocking News: Rod inserted in private parts of 12 year old boy after Gang rape by His Friends Crime News


Crime News: ದೆಹಲಿಯಲ್ಲಿ ಹುಡುಗರಿಗೆ ಕೂಡ ಸುರಕ್ಷತೆಯಿಲ್ಲ. 12 ವರ್ಷದ ಬಾಲಕನ ಮೇಲೆ ನಾಲ್ವರು ಅಮಾನುಷವಾಗಿ ಅತ್ಯಾಚಾರ ಮಾಡಿದ್ದಾರೆ ಮತ್ತು ಕೋಲುಗಳಿಂದ ಹೊಡೆದಿದ್ದಾರೆ. ನಂತರ ಆತನ ಗುಪ್ತಾಂಗಗಳಿಗೆ ರಾಡ್ ಹಾಕಿ ಹಿಂಸೆ ನೀಡಲಾಗಿದೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ (Delhi) ಸೀಲಾಂಪುರ ಪ್ರದೇಶದಲ್ಲಿ 12 ವರ್ಷದ ಬಾಲಕನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ (Gang Rape) ವಿಚಿತ್ರವಾದ ಮತ್ತು ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. ಆ ಬಾಲಕನ ಮೇಲೆ ಅತ್ಯಾಚಾರವೆಸಗಿರುವುದು ಮಾತ್ರವಲ್ಲದೆ ಆತನ ಗೆಳೆಯರೇ ಆತನ ಖಾಸಗಿ ಅಂಗಗಳಿಗೆ ರಾಡ್‌ ಹಾಕಿ ಗಾಯಗೊಳಿಸಿದ್ದಾರೆ. ಆ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆಯ ಮಾಹಿತಿ ತಿಳಿದು ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್, “ದೆಹಲಿಯಲ್ಲಿ ಹುಡುಗರಿಗೆ ಕೂಡ ಸುರಕ್ಷತೆಯಿಲ್ಲ” ಎಂದು ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸ್ವಾತಿ ಮಲಿವಾಲ್, “12 ವರ್ಷದ ಬಾಲಕನ ಮೇಲೆ ನಾಲ್ವರು ಅಮಾನುಷವಾಗಿ ಅತ್ಯಾಚಾರ ಮಾಡಿದ್ದಾರೆ ಮತ್ತು ಕೋಲುಗಳಿಂದ ಹೊಡೆದಿದ್ದಾರೆ. ನಂತರ ಆತನ ಗುಪ್ತಾಂಗಗಳಿಗೆ ರಾಡ್ ಹಾಕಿ ಹಿಂಸೆ ನೀಡಲಾಗಿದೆ. ಇದರಿಂದ ಆ ಬಾಲಕ ಪ್ರಜ್ಞಾಹೀನನಾಗಿದ್ದಾನೆ” ಎಂದಿದ್ದಾರೆ.

TV9 Kannada


Leave a Reply

Your email address will not be published.