Shocking News: ಬುರ್ಖಾ ಧರಿಸಲಿಲ್ಲ ಎಂದು ಹಿಂದೂ ಹೆಂಡತಿಯ ಕತ್ತು ಸೀಳಿ ಕೊಂದ ಗಂಡ! | Shocking News Mumbai man kills Hindu wife for refusing to wear burqa and follow Islamic tradition


ಮದುವೆಯ ನಂತರ ರೂಪಾಲಿ ಇಸ್ಲಾಮಿಕ್ ಸಂಪ್ರದಾಯವನ್ನು ಅನುಸರಿಸಬೇಕೆಂದು ಮತ್ತು ಬುರ್ಖಾವನ್ನು ಧರಿಸಬೇಕೆಂದು ಇಕ್ಬಾಲ್ ಮೊಹಮ್ಮದ್ ಶೇಖ್ ಅವರ ಕುಟುಂಬ ಒತ್ತಡ ಹೇರಿತ್ತು. ಆದರೆ, ಆಕೆ ಇಸ್ಲಾಂ ಧರ್ಮವನ್ನು ಅನುಸರಿಸಲು ಸಿದ್ಧಳಿರಲಿಲ್ಲ.

ಮುಂಬೈ: ಮಹಾರಾಷ್ಟ್ರದ ಮುಂಬೈ (Mumbai Crime News) ನಿವಾಸಿ ಇಕ್ಬಾಲ್ ಮೊಹಮ್ಮದ್ ಶೇಖ್ ಎಂಬಾತನ ಹಿಂದೂ ಪತ್ನಿ ಬುರ್ಖಾ ಧರಿಸಲು ನಿರಾಕರಿಸಿದ್ದರಿಂದ ಆತ ಆಕೆಯನ್ನು ಕೊಲೆ (Murder) ಮಾಡಿರುವ ಘಟನೆ ತಿಲಕ್ ನಗರ ಪ್ರದೇಶದಲ್ಲಿ ನಡೆದಿದೆ. ಬುರ್ಖಾ ಧರಿಸಲು ನಿರಾಕರಿಸಿದ್ದಕ್ಕೆ ಮತ್ತು ಇಸ್ಲಾಮಿಕ್ ಆಚರಣೆಗಳನ್ನು ಅನುಸರಿಸಲು ಒಪ್ಪದ ಹಿನ್ನೆಲೆಯಲ್ಲಿ ತನ್ನ ಹಿಂದೂ ಪತ್ನಿಯನ್ನು ಹತ್ಯೆಗೈದ ಆರೋಪದಲ್ಲಿ ಇಕ್ಬಾಲ್ ಮೊಹಮ್ಮದ್ ಶೇಖ್​ನನ್ನು ಬಂಧಿಸಲಾಗಿದೆ. ಮೃತ ಮಹಿಳೆಯ ಕುಟುಂಬದವರು ನೀಡಿದ ಮಾಹಿತಿಯ ಮೇರೆಗೆ ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೃತ ಮಹಿಳೆ ರೂಪಾಲಿ ಮತ್ತು ಆರೋಪಿ ಇಕ್ಬಾಲ್ ಮೊಹಮ್ಮದ್ ಶೇಖ್ ಮದುವೆಯಾಗಿ 3 ವರ್ಷವಾಗಿತ್ತು. ಅವರ ಮದುವೆಯ ನಂತರ ರೂಪಾಲಿ ಇಸ್ಲಾಮಿಕ್ ಸಂಪ್ರದಾಯವನ್ನು ಅನುಸರಿಸಬೇಕೆಂದು ಮತ್ತು ಬುರ್ಖಾವನ್ನು ಧರಿಸಬೇಕೆಂದು ಇಕ್ಬಾಲ್ ಮೊಹಮ್ಮದ್ ಶೇಖ್ ಅವರ ಕುಟುಂಬ ಒತ್ತಡ ಹೇರಿತ್ತು. ಆದರೆ, ಆಕೆ ಇಸ್ಲಾಂ ಧರ್ಮವನ್ನು ಅನುಸರಿಸಲು ಸಿದ್ಧಳಿರಲಿಲ್ಲ. ಹಿಂದೂ ಧರ್ಮದ ಆಚರಣೆಗಳನ್ನೇ ಮುಂದುವರಿಸಲು ಆಕೆ ನಿರ್ಧರಿಸಿದ್ದಳು. ಇದಕ್ಕೆ ಅವಳ ಗಂಡನ ಮನೆಯಲ್ಲಿ ಸದಾ ಜಗಳವಾಗುತ್ತಿತ್ತು.

TV9 Kannada


Leave a Reply

Your email address will not be published.