Shocking News: ಮಾತ್ರೆ ಎಂದು ತಪ್ಪಾಗಿ ತಿಳಿದು​ ಏರ್​-ಪಾಡ್​ ನುಂಗಿದ ಯುವತಿ! | Woman accidentally eat airpods viral news


Shocking News: ಮಾತ್ರೆ ಎಂದು ತಪ್ಪಾಗಿ ತಿಳಿದು​ ಏರ್​-ಪಾಡ್​ ನುಂಗಿದ ಯುವತಿ!

ಕೆಲವು ಬಾರಿ ಗಡಿಬಿಡಿಯಲ್ಲಿ ಏನೆಲ್ಲಾ ನಡೆದು ಬಿಡುತ್ತವೆ. ಇನ್ನು ಕೆಲವು ಬಾರಿ ಗೊತ್ತಿದ್ದೂ ತಪ್ಪು ಮಾಡುತ್ತೇವೆ. ಗೊಂದಲದಲ್ಲಿದ್ದಾಗ ಮಾಡುವ ಕೆಲವು ತಪ್ಪುಗಳು ಯಾವ ಮಟ್ಟಿಗೆ ಪರಿಣಾಮ ಬೀರಬಲ್ಲದು ಎಂಬುದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ವಿಡಿಯೊ ಹರಿದಾಡುತ್ತಿದೆ. ಮಾತ್ರೆಯೆಂದು ತಪ್ಪಾಗಿ ಭಾವಿಸಿದ ಯುವತಿ ಏರ್-ಪಾಡ್ಅನ್ನು ನುಂಗಿಯೇ ಬಿಟ್ಟಿದ್ದಾಳೆ. ಯುವತಿಯ ಹೆಸರು ಕಾರ್ಲಿ ಬೆಲ್ಲರ್. ಅವರಿಗೆ 27 ವರ್ಷ ವಯಸ್ಸು. ಗೊಂದಲದಲ್ಲಿದ್ದ ಯುವತಿ ಮಾತ್ರೆ ಅಂದಕೊಂಡು ಆಪಲ್ ಏರ್-ಪಾಡ್ಅನ್ನೇ ನುಂಗಿದ್ದಾಳೆ. ಈ ಕುರಿತಂತೆ ಟಿಕ್ ಟಾಕ್​ನಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ. 

ಕಾರ್ಲಿ ಅವರು ವಿಡಿಯೊದಲ್ಲಿ ಹೇಳಿರುವಂತೆ, ನಾನು ನೋವು ನಿವಾರಕ ಮಾತ್ರೆ ತಿನ್ನುವುದನ್ನು ಬಿಟ್ಟು ಏರ್-ಪಾಡ್ಅನ್ನು ತಿಂದಿದ್ದೆ. ತುಂಬಾ ಚಿಂತೆಯಾಗುತ್ತಿತ್ತು. ಅದನ್ನು ಹೊರ ಹಾಕಲು ಎಷ್ಟು ಪ್ರಯತ್ನಿಸಿದರೂ ಪ್ರಯತ್ನ ವ್ಯರ್ಥವಾಯಿತು ಎಂದು ಹೇಳಿಕೊಂಡಿದ್ದಾರೆ.

ಘಟನೆಯನ್ನು ವಿವರಿಸಿದ ಕಾರ್ಲಿ ಅವರು, ನನ್ನ ಒಂದು ಕೈಯಲ್ಲಿ ಮಾತ್ರೆಯಿತ್ತು. ಮತ್ತೊಂದು ಕೈಯಲ್ಲಿ ಏರ್-ಪಾಡ್ ಇತ್ತು. ನಾನು ಮಾತ್ರೆಯನ್ನು ನುಂಗಲು ಹೋದೆ ಆದರೆ ಏರ್-ಪಾಡ್ ನುಂಗಿದ್ದೇನೆ. ನನಗೆ ಎಲ್ಲವೂ ಮಸುಕಾಗಿ ಕಾಣಿಸುತ್ತಿತ್ತು. ಏಕೆಂದರೆ ನಾನು ಈ ಘಟನೆಯಿಂದ ಹುಚ್ಚನಾಗಿದ್ದೇನೆ ಅನ್ನುವಷ್ಟರ ಮಟ್ಟಿಗೆ ತಲೆಕೆಟ್ಟಿತು ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *