Shocking News: ಮೇಕಪ್ ಇಲ್ಲದೆ ಎದುರು ಬಂದ ಹೆಂಡತಿಗೆ ಡೈವೋರ್ಸ್ ನೀಡಿದ ಪತಿರಾಯ! | I was shocked; Egyptian man divorced wife after seeing her without makeup after Wedding


Shocking News: ಮೇಕಪ್ ಇಲ್ಲದೆ ಎದುರು ಬಂದ ಹೆಂಡತಿಗೆ ಡೈವೋರ್ಸ್ ನೀಡಿದ ಪತಿರಾಯ!

ಮೇಕಪ್

ಕೌಲಾಲಂಪುರ: ಎಷ್ಟೋ ಯುವತಿಯರು ಮತ್ತು ಮಹಿಳೆಯರು ಮೇಕಪ್ ಇಲ್ಲದೆ ಮನೆಯಿಂದ ಹೊರಗೇ ಬರುವುದಿಲ್ಲ. ಕೆಲವರನ್ನು ಮೇಕಪ್ ಇಲ್ಲದೆ ಗುರುತು ಹಿಡಿಯುವುದು ಕೂಡ ಕಷ್ಟ. ಹಾಗಾಗಿಯೇ ಸೆಲೆಬ್ರಿಟಿಗಳು ಮೇಕಪ್ ತೆಗೆದು ನಮ್ಮ ನಡುವೆಯೇ ಓಡಾಡಿದರೂ ಕೆಲವು ಬಾರಿ ಅದು ನಮ್ಮ ಗಮನಕ್ಕೆ ಬರುವುದಿಲ್ಲ. ಆದರೆ, ಇದೇ ಮೇಕಪ್ ಒಂದು ಸಂಸಾರ ಮುರಿದುಬೀಳಲು ಕಾರಣವಾಗಿದೆ ಎಂದರೆ ನೀವು ನಂಬುತ್ತೀರಾ? ಅಚ್ಚರಿಯಾದರೂ ನೀವು ನಂಬಲೇಬೇಕು.

ಈಜಿಪ್ಟ್‌ನ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಮೇಕ್ಅಪ್ ಇಲ್ಲದೆ ನೋಡಿ ಆಘಾತಗೊಂಡಿದ್ದು, ಮದುವೆಯಾದ ಒಂದೇ ತಿಂಗಳಿಗೆ ಆಕೆಗೆ ವಿಚ್ಛೇದನ ನೀಡಿದ್ದಾನೆ. ಯುಎಇಯಲ್ಲಿ ಈ ವಿಚಿತ್ರವಾದ ಘಟನೆ ನಡೆದಿದ್ದು, 34 ವರ್ಷದ ವ್ಯಕ್ತಿಯೊಬ್ಬರು 1 ತಿಂಗಳ ಹಿಂದೆ 28 ವರ್ಷದ ಮಹಿಳೆಯನ್ನು ಮದುವೆಯಾಗಿದ್ದ. ಮದುವೆಗೂ ಮೊದಲು ವಿಪರೀತ ಮೇಕಪ್ ಮಾಡಿಕೊಳ್ಳುತ್ತಿದ್ದ ಆ ಮಹಿಳೆಯ ಸೌಂದರ್ಯವನ್ನು ನೋಡಿ ಇಷ್ಟಪಟ್ಟಿದ್ದ ಆಕೆಯ ಗಂಡನಿಗೆ ಆಕೆಯನ್ನು ಮೇಕಪ್ ಇಲ್ಲದೆ ನೋಡಿದಾಗ ಆಘಾತವಾಗಿದೆ.

ತಮ್ಮ ಮದುವೆಯ ನಂತರ ಬೆಳಿಗ್ಗೆ ನನ್ನ ಹೆಂಡತಿಯನ್ನು ಮೇಕಪ್ ಇಲ್ಲದೆ ನೋಡಿ ನಾನು ಆಘಾತಕ್ಕೊಳಗಾಗಿದ್ದೇನೆ ಎಂದು ವ್ಯಕ್ತಿ ಹೇಳಿದ್ದಾನೆ ಎಂದು ಗಲ್ಫ್ ಟೈಮ್ಸ್ ಸ್ಥಳೀಯ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಹೇಳಿದೆ. ನಾನು ಮದುವೆಗೂ ಮೊದಲು ಸಮಯ ಕಳೆದಿದ್ದ, ಇಷ್ಟಪಟ್ಟಿದ್ದ ಮಹಿಳೆ ಇವಳಲ್ಲ ಎಂದು ಆತ ಬೇಸರಗೊಂಡು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ.

ತನ್ನ ಗಂಡನ ಈ ನಿರ್ಧಾರದಿಂದ ಆ ಮಹಿಳೆ ಮಾನಸಿಕ ಖಿನ್ನತೆಗೊಳಗಾಗಿದ್ದು, ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಚ್ಛೇದನ ಬೇಕೆಂದು ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿರುವ ಆ ವ್ಯಕ್ತಿ, ಮದುವೆಗೂ ಮುನ್ನ ವಿಪರೀತ ಮೇಕಪ್ ಮಾಡಿಕೊಳ್ಳುತ್ತಿದ್ದ ನನ್ನ ಹೆಂಡತಿಯಿಂದ ನಾನು ಮೋಸ ಹೋಗಿದ್ದೇನೆ. “ಅವಳು ಮೇಕಪ್ ಇಲ್ಲದೆ ಗಲೀಜಾಗಿ ಕಾಣುತ್ತಾಳೆ” ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಆ ವ್ಯಕ್ತಿ ಆ ಮಹಿಳೆಯನ್ನು ಫೇಸ್‌ಬುಕ್ ಮೂಲಕ ಭೇಟಿಯಾಗಿದ್ದರು. ಅಲ್ಲಿ ಅವಳು ಪೂರ್ಣ ಮೇಕ್ಅಪ್ ಧರಿಸಿರುವ ಸುಂದರವಾದ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದಳು. ಅವರು ಹಲವಾರು ಬಾರಿ ಭೇಟಿಯಾದ ನಂತರ ಅವಳನ್ನು ಮದುವೆಯಾಗಲು ನಿರ್ಧರಿಸಿದರು. ಆದರೆ ಮೇಕಪ್ ಇಲ್ಲದಿದ್ದಾಗ ಆಕೆ ಹೇಗೆ ಕಾಣುತ್ತಾಳೆಂಬುದು ಅವರಿಬ್ಬರ ಮದುವೆಯಾದ ನಂತರ ಆತನಿಗೆ ತಿಳಿಯಿತು. ಮೇಕಪ್ ಇಲ್ಲದೆ ನನ್ನ ಹೆಂಡತಿಯನ್ನು ನೋಡಲು ಆಗುತ್ತಿಲ್ಲ. ಅವಳೊಂದಿಗೆ ಸಂಸಾರ ನಡೆಸಲು ನನಗೆ ಇಷ್ಟವಿಲ್ಲ ಎಂದು ಆತ ಹೇಳಿದ್ದಾನೆ.

ಇದನ್ನೂ ಓದಿ: Shocking Video: ಪಟಾಕಿಯಿದ್ದ ಸ್ಕೂಟರ್ ಸ್ಫೋಟಗೊಂಡು ಅಪ್ಪ-ಮಗನ ದೇಹ ಛಿದ್ರ; ಶಾಕಿಂಗ್ ವಿಡಿಯೋ ವೈರಲ್

TV9 Kannada


Leave a Reply

Your email address will not be published. Required fields are marked *