Shocking News: 500 ರೂ.ಗಾಗಿ ಗೆಳೆಯನ ತಲೆ ಕತ್ತರಿಸಿ, ಪೊಲೀಸ್ ಠಾಣೆಗೆ ರುಂಡ ಹಿಡಿದು ಬಂದ ಹಂತಕ! | Shocking News: Man Beheads Villager Over 500 Rs Reaches Police Station With Severed Head


Assam News: ತುನಿರಾಮ್ ಮದ್ರಿ 25 ಕಿ.ಮೀ ನಡೆದುಕೊಂಡು ಪೊಲೀಸ್ ಠಾಣೆಗೆ ಬಂದು ತುಂಡರಿಸಿದ ತನ್ನ ಗೆಳೆಯನ ತಲೆಯನ್ನು ಟೇಬಲ್ ಮೇಲಿಟ್ಟು ಶರಣಾಗಿದ್ದಾನೆ.

Shocking News: 500 ರೂ.ಗಾಗಿ ಗೆಳೆಯನ ತಲೆ ಕತ್ತರಿಸಿ, ಪೊಲೀಸ್ ಠಾಣೆಗೆ ರುಂಡ ಹಿಡಿದು ಬಂದ ಹಂತಕ!

ಕೊಲೆ ಮಾಡಿ ತಲೆ ಹೊತ್ತು ತಂದ ಆರೋಪಿ

ಗುವಾಹಟಿ: ಕೇವಲ 500 ರೂ.ಗಾಗಿ ವ್ಯಕ್ತಿಯೊಬ್ಬ ಶಿರಚ್ಛೇದ ಮಾಡಿ, ಆ ರುಂಡವನ್ನು ಪೊಲೀಸ್ ಠಾಣೆಗೆ ತಂದಿರುವ ಭಯಾನಕ ಘಟನೆ ಅಸ್ಸಾಂನಲ್ಲಿ (Assam) ನಡೆದಿದೆ. ಅಸ್ಸಾಂನಲ್ಲಿ ಸೋಮವಾರ ಫುಟ್‌ಬಾಲ್ ಪಂದ್ಯವೊಂದರಲ್ಲಿ (Football Match) 500 ರೂ.ಗಳ ಬೆಟ್ಟಿಂಗ್ ಸೋತ ಬಳಿಕ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಶಿರಚ್ಛೇದ ಮಾಡಿದ ಘಟನೆ ನಡೆದಿದೆ. ತುಂಡರಿಸಿದ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ ಆ ವ್ಯಕ್ತಿ 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ನಡೆದುಕೊಂಡು ಹೋಗಿ ಶರಣಾಗಿದ್ದಾನೆ.

ಉತ್ತರ ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಫುಟ್‌ಬಾಲ್ ಪಂದ್ಯ ಮುಗಿದ ಬೆನ್ನಲ್ಲೇ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೊಲೆಗಾರ ತುನಿರಾಮ್ ಮದ್ರಿ ಎಂಬಾತ ಬೆಟ್ಟಿಂಗ್ ಕಟ್ಟಿ ಸೋತಿದ್ದ. ಆದರೆ ಆತನಿಗೆ ಬೆಟ್ಟಿಂಗ್​​ನಲ್ಲಿ ಸೋತ 500 ರೂ. ಪಾವತಿಸಲು ತುನಿರಾಮ್ ನಿರಾಕರಿಸಿದ್ದ. ಇದೇ ವಿಚಾರಕ್ಕೆ ಕೊಲೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

TV9 Kannada


Leave a Reply

Your email address will not be published.