Love Story: ಒಳ್ಳೆ ಗೆಳತಿಯರಾದ ಸೋನಾಲ್ ಮತ್ತು ಸನಾ ನಡುವೆ 4 ತಿಂಗಳೊಳಗೆ ಒಬ್ಬರನ್ನೊಬ್ಬರು ಬಿಟ್ಟು ಇರಲಾರದಂತಹ ಸಂಬಂಧ ಬೆಳೆಯಿತು. ಇಬ್ಬರೂ ಜೀವನಪೂರ್ತಿ ಒಟ್ಟಿಗೇ ಇರಲು ನಿರ್ಧರಿಸಿದರು.

Image Credit source: India Today
ಝಾನ್ಸಿ: ಈ ಕತೆ ಯಾವ ಸಿನಿಮಾ ಸ್ಟೋರಿಗೂ ಕಡಿಮೆಯಿಲ್ಲ. ಆಪ್ತ ಗೆಳತಿಯರಾಗಿದ್ದ ಇಬ್ಬರು ಯುವತಿಯರ ನಡುವೆ ಬಹಳ ಆತ್ಮೀಯತೆ ಬೆಳೆದಿತ್ತು. ಕೊನೆಕೊನೆಗೆ ಅವರಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಇರಲಾರದ ಸ್ಥಿತಿಗೆ ತಲುಪಿದ್ದರು. ಕೊನೆಗೆ ಅವರಲ್ಲಿ ಒಬ್ಬಳು ಯುವತಿ ತನ್ನ ಗೆಳತಿಗಾಗಿ ಲಿಂಗವನ್ನೇ ಬದಲಾಯಿಸಿಕೊಂಡಳು. ಆದರೂ ಆಕೆಗೆ ಅದೃಷ್ಟ ಕೈಕೊಟ್ಟಿತ್ತು. ಒಂದು ವಿಚಿತ್ರವಾದ ಪ್ರೇಮಕತೆ (Love Story) ಇಲ್ಲಿದೆ ಓದಿ.
ಉತ್ತರ ಪ್ರದೇಶದ ಝಾನ್ಸಿಯ ಕುಟುಂಬವೊಂದರಲ್ಲಿ ಯುವತಿಯೊಬ್ಬಳು ಪೇಯಿಂಗ್ ಗೆಸ್ಟ್ ಆಗಿ ಸೇರಿಕೊಂಡಿದ್ದಳು. ತನ್ನ ತಂದೆ-ತಾಯಿಯೊಂದಿಗೆ ವಾಸವಾಗಿದ್ದ ಸೋನಾಲ್ ಮನೆಗೆ ಸನಾ ಪೇಯಿಂಗ್ ಗೆಸ್ಟ್ ಆಗಿ ಬಂದಳು. ಅದೇ ಮನೆಯ ಮೇಲಿನ ಮಹಡಿಯಲ್ಲಿ ಆಕೆ ಉಳಿದುಕೊಂಡಿದ್ದಳು. ಇಬ್ಬರೂ ಒಂದೇ ವಯಸ್ಸಿನವರಾದ್ದರಿಂದ ಸಹಜವಾಗಿಯೇ ಬಹಳ ಬೇಗ ಗೆಳತಿಯರಾದರು.
ತಾಜಾ ಸುದ್ದಿ
ಒಳ್ಳೆ ಗೆಳತಿಯರಾದ ಸೋನಾಲ್ ಮತ್ತು ಸನಾ ನಡುವೆ 4 ತಿಂಗಳೊಳಗೆ ಒಬ್ಬರನ್ನೊಬ್ಬರು ಬಿಟ್ಟು ಇರಲಾರದಂತಹ ಸಂಬಂಧ ಬೆಳೆಯಿತು. ಇಬ್ಬರೂ ಜೀವನಪೂರ್ತಿ ಒಟ್ಟಿಗೇ ಇರಲು ನಿರ್ಧರಿಸಿದರು. ಆದರೆ, ಸೋನಾಲ್ ಕುಟುಂಬವು ಅವರಿಬ್ಬರ ವಿಚಿತ್ರವಾದ ಪ್ರೀತಿಯನ್ನು ಒಪ್ಪದೆ ಸನಾಳನ್ನು ಮನೆಯಿಂದ ಆಚೆ ಕಳುಹಿಸಿದರು.
ಸರ್ಕಾರಿ ಕೆಲಸ ಮಾಡುತ್ತಿದ್ದ ಸನಾ ಅವರನ್ನು 2016ರಲ್ಲಿ ಝಾನ್ಸಿಗೆ ನೇಮಿಸಲಾಯಿತು. 1 ವರ್ಷದ ನಂತರ ಆಕೆಗೆ ಸರ್ಕಾರಿ ಕ್ವಾರ್ಟರ್ ಅನ್ನು ಮಂಜೂರು ಮಾಡಲಾಯಿತು. ಬಳಿಕ ಅವಳು ಅಲ್ಲಿ ಉಳಿದುಕೊಳ್ಳಲು ನಿರ್ಧರಿಸಿದಳು. 2017ರ ಆಗಸ್ಟ್ 10ರಂದು ಸನಾ ತಮ್ಮ ಸರ್ಕಾರಿ ಕ್ವಾರ್ಟರ್ಗೆ ತೆರಳಿದಳು. ಆದರೆ, ಆಕೆಗೆ ಸೋನಾಲ್ಳನ್ನು ಮರೆಯಲು ಸಾಧ್ಯವಾಗಲಿಲ್ಲ.