Shocking Video: ಆಕಸ್ಮಿಕವಾಗಿ ಜಾರಿ ಬಿದ್ದು 19ನೇ ಮಹಡಿಯ ಬಾಲ್ಕನಿಯಲ್ಲಿ ತಲೆ ಕೆಳಗಾಗಿ ತೂಗಾಡುತ್ತಿದ್ದ ಹಿರಿಯ ಮಹಿಳೆ! | 82 years old women falling down 19th floor after she dangles upside down in balcony watch shocking video


Shocking Video: ಆಕಸ್ಮಿಕವಾಗಿ ಜಾರಿ ಬಿದ್ದು 19ನೇ ಮಹಡಿಯ ಬಾಲ್ಕನಿಯಲ್ಲಿ ತಲೆ ಕೆಳಗಾಗಿ ತೂಗಾಡುತ್ತಿದ್ದ ಹಿರಿಯ ಮಹಿಳೆ!

ಬಾಲ್ಕನಿಯಲ್ಲಿ ಜಾರಿ ಬಿದ್ದು ತಲೆ ಕೆಳಗಾಗಿ ತೂಗಾಡುತ್ತಿದ್ದ ಹಿರಿಯ ಮಹಿಳೆ

ಬಟ್ಟೆ ಒಣಗಿ ಹಾಕಲು ಬಾಲ್ಕನಿಗೆ ಹೋಗಿದ್ದ ಹಿರಿಯ ಮಹಿಳೆಯೋರ್ವರು ಜಾರಿ ಬಿದ್ದು ತಲೆಕೆಳಗಾಗಿ ತೂಗಾಡುತ್ತಿದ್ದ ಭಯಾನಕ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಿಳೆ ಚೀನಾದಲ್ಲಿನ ಅಪಾರ್ಟ್​ಮೆಂಟ್​ನ 19ನೇ ಮಹಡಿಯಲ್ಲಿ ವಾಸವಿದ್ದರು. ಬಾಲ್ಕನಿಯಲ್ಲಿ ಬಟ್ಟೆ ಒಣಗಿ ಹಾಕಲು ಹೋದಾಗ ಘಟನೆ ಸಂಭವಿಸಿದೆ. ರಕ್ಷಣಾ ಸಿಬ್ಬಂದಿ ಮಹಿಳೆಯನ್ನು ರಕ್ಷಿಸಿದ್ದಾರೆ. ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ವಿಡಿಯೊದಲ್ಲಿ ಗಮನಿಸುವಂತೆ ಮಹಿಳೆ ಬಾಲ್ಕನಿಯಲ್ಲಿ ತಲೆಕೆಳಗಾಗಿ ತೂಗು ನೇತಾಡುತ್ತಿದ್ದರು. 19 ನೇ ಮಹಡಿಯ ಬಾಲ್ಕನಿಯಲ್ಲಿ ತೂಗಾಡುತ್ತಿದ್ದ ಮಹಿಳೆಯನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ. ಮಹಿಳೆಯು ಸುರಕ್ಷಿತರಾಗಿದ್ದಾರೆ, ಯಾವುದೇ ಗಾಯಗಳಾಗಿಲ್ಲ ಎಂಬುದು ವರದಿಗಳಿಂದ ತಿಳಿದು ಬಂದಿದೆ. ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಹಿಳೆಯನ್ನು ರಕ್ಷಿಸಿದ ರಕ್ಷಣಾ ಸಿಬ್ಬಂದಿಗೆ ನೆಟ್ಟಿಗರು ಧನ್ಯವಾದ ತಿಳಿಸಿದ್ದಾರೆ. ಕೆಲವರು ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.

18ನೇ ಮಹಡಿಯ ಬಾಲ್ಕಯಿಂದ ಮಹಿಳೆಯನ್ನು ಅಪಾಯದಿಂದ ರಕ್ಷಿಸಲಾಗಿದೆ. ತಲೆಕೆಳಗಾಗಿ ನೇತಾಡುತ್ತಿದ್ದ ದೃಶ್ಯ ಭಯಾನಕವಾಗಿದೆ ಎಂದು ಕೆಲವರು ಪ್ರತಿಕ್ರಿಯಿಸಿದ್ದರೆ, ಇನ್ನು ಕೆಲವರು ಜಾಗರೂಕರಾಗಿರಿ ಎಂದು ಹೇಳಿದ್ದಾರೆ. ವಿಡಿಯೊ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಾಗಿನಿಂದ ನೆಟ್ಟಿಗರು ನಾನಾ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಾ ಜನರನ್ನು ಎಚ್ಚರಿಕೆಯಿಂದಿರಲು ಸೂಚಿಸಿದ್ದಾರೆ.

ಇದನ್ನೂ ಓದಿ:

Shocking Video: ರೆಸ್ಟೋರೆಂಟ್​ನಲ್ಲಿ ಕೋಪ ಬಂದಿಂದ್ದಕ್ಕೆ ಮ್ಯಾನೇಜರ್ ಮುಖದ ಮೇಲೆ ಬಿಸಿಬಿಸಿ ಸೂಪ್ ಎರಚಿದ ಯುವತಿ!

Shocking News: ಮೂರು ತಿಂಗಳಿಂದ ತಂದೆಯ ಶವದೊಟ್ಟಿಗೇ ವಾಸ ಮಾಡುತ್ತಿದ್ದ ಪುತ್ರ !

TV9 Kannada


Leave a Reply

Your email address will not be published. Required fields are marked *