Shocking Video: ಕುದಿಯುತ್ತಿರುವ ಎಣ್ಣೆಯಲ್ಲಿ ಕೈ ಹಾಕಿ ಚಿಕನ್​ ತೆಗೆಯುತ್ತಾನೆ ಈ ವ್ಯಕ್ತಿ; ಈತ ಬಳಸೋ ತಂತ್ರವೇನು? | Man Dip His Hand In Boiling Oil People stunned after see This Video


Shocking Video: ಕುದಿಯುತ್ತಿರುವ ಎಣ್ಣೆಯಲ್ಲಿ ಕೈ ಹಾಕಿ ಚಿಕನ್​ ತೆಗೆಯುತ್ತಾನೆ ಈ ವ್ಯಕ್ತಿ; ಈತ ಬಳಸೋ ತಂತ್ರವೇನು?

ಬಿಸಿ ಬಾಣಲೆಗೆ ಕೈ ಹಾಕಿದ ವ್ಯಕ್ತಿ

ಸೋಶಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಅನೇಕ ವಿಡಿಯೋಗಳು ನೋಡುಗರ ಹುಬ್ಬೇರಿಸುವಂತೆ ಮಾಡುತ್ತದೆ. ನಾಲ್ಕೈದು ಇಟ್ಟಿಗೆಗಳನ್ನು ಒಟ್ಟಿಗೆ ಇಟ್ಟು ಒಡೆಯೋದು, ಎತ್ತರದ ಕಟ್ಟಡದಿಂದ ಧೈರ್ಯದಿಂದ ಜಿಗಿಯೋದು, ಗುಡ್ಡಗಾಡುಗಳಲ್ಲಿ ಸೈಕಲ್​ ಹೊಡೆಯೋದು ಹೀಗೆ ಅಚ್ಚರಿ ಮೂಡಿಸುವ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿದೆ. ಇದಕ್ಕೆ ಹೊಸದೊಂದು ಸೇರ್ಪಡೆ ಆಗಿದೆ. ವ್ಯಕ್ತಿಯೋರ್ವ ಬಿಸಿ ಬಾಣಲೆಯಲ್ಲಿ ಎಣ್ಣೆ ಕೊತಕೊತನೆ ಕುದಿಯುತ್ತಿರುವಾಗಲೇ ಅಲ್ಲಿಂದ ಚಿಕನ್​ ತೆಗೆಯುತ್ತಿದ್ದಾನೆ. ಈ ವಿಡಿಯೋ ನೋಡಿದ ಅನೇಕರು ಅಚ್ಚರಿ ಹೊರ ಹಾಕಿದ್ದಾರೆ.

@nonvegfoodie ಹೆಸರಿನ ಇನ್​ಸ್ಟಾಗ್ರಾಮ್​ ಪೇಜ್​ನಲ್ಲಿ ಈ ವಿಡಿಯೋ ಅಪ್​ಲೋಡ್​ ಆಗಿದೆ. ವ್ಯಕ್ತಿಯೋರ್ವ ಕುದಿಯುವ ಎಣ್ಣೆಯಲ್ಲಿ ಚಿಕನ್​ ಬೇಯಿಸುತ್ತಿರುತ್ತಾನೆ. ಏಕಾಏಕಿ ಆತ ಬಾಣಲೆ ಒಳಗೆ ಕೈ ಅದ್ದುತ್ತಾನೆ. ಅಷ್ಟೇ ಅಲ್ಲ, ಚಿಕನ್​ಅನ್ನು ತೆಗೆದು ಪಕ್ಕದಲ್ಲಿ ಇಟ್ಟ ಪಾತ್ರೆಗೆ ಹಾಕುತ್ತಾನೆ. ಅಲ್ಲಿ ನಾನಾ ರೀತಿಯ ಮಸಾಲೆಗಳನ್ನು ಆತ ಚಿಕನ್​ ಪೀಸ್​ಗೆ ಸವರುತ್ತಾನೆ. ಇದನ್ನು ನೋಡಿದ ನೆಟ್ಟಿಗರು ಶಾಕ್​ ಆಗಿದ್ದಾರೆ. ಬಿಸಿ ನೀರನ್ನು ಮುಟ್ಟಿದಾಗ ಕೈ ಚುರ್​ ಎನ್ನುತ್ತದೆ. ಹೀಗಿರುವಾಗ ಬಿಸಿ ಬಾಣಲೆಗೆ ಕೈ ಹಾಕುವುದು ಎಂದರೆ ಅದು ಸಾಮಾನ್ಯದ ಮಾತೇ ಅಲ್ಲ.

‘ಅವನ ಕೈ ಸುಡುವುದಿಲ್ಲವೇ? ಕೋಳಿಯನ್ನು ಹೊರತೆಗೆಯಲು ಕಾದ ಕಾದ ಎಣ್ಣೆಯಲ್ಲಿ ಕೈ ಅದ್ದಿದ’ ಎಂದು  ವಿಡಿಯೋಗೆ ಕ್ಯಾಪ್ಶನ್​ ನೀಡಲಾಗಿದೆ. ಈ ವಿಡಿಯೋ 13 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. 41 ಸಾವಿರ ಲೈಕ್ಸ್​ ಪಡೆದುಕೊಂಡಿದೆ. ಈ ವಿಡಿಯೋ ನೋಡಿ ಅನೇಕರಿಗೆ ನಿಜಕ್ಕೂ ಶಾಕ್​ ಆಗಿದೆ. ಇದನ್ನು ಆತ ಹೇಗೆ ಮಾಡಲು ಸಾಧ್ಯ ಎಂದು ಎಲ್ಲರೂ ಅಚ್ಚರಿ ಹೊರ ಹಾಕಿದ್ದಾರೆ. ಬಿಸಿ ಎಣ್ಣೆಗೆ ನಿಂಬೆ ರಸ ಬಿಟ್ಟುಕೊಂಡರೆ ಕೈ ಸುಡುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಇದೇ ಅಭಿಪ್ರಾಯವನ್ನು ಕೆಲವರು ಹೊರ ಹಾಕಿದ್ದಾರೆ. ಇನ್ನೂ ಕೆಲವರು ಆತ ಯಾವುದೋ ರಾಸಾಯನಿಕ ಬಳಕೆ ಮಾಡಿದ್ದಾನೆ ಎಂದಿದ್ದಾರೆ. ಒಂದು ವರ್ಗದ ಜನರು ಈ ಬಗ್ಗೆ ಟೀಕೆ ಮಾಡಿದ್ದಾರೆ. ‘ಚಿಕನ್​+ಅವನ ಸುಟ್ಟು ಹೋದ ಚರ್ಮ, ಆಹಾ ಎಂತಹ ಕಾಂಬಿನೇಷನ್​’ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ:

Shocking Video: ತನ್ನ ತೊಡೆಯ ಮೇಲೆ ಹರಿದು ಬಂದ ಹಾವು ನೋಡಿ ವ್ಯಕ್ತಿ ಕಂಗಾಲು! ಮುಂದೇನಾಯ್ತು? ವಿಡಿಯೊ ನೋಡಿ

TV9 Kannada


Leave a Reply

Your email address will not be published. Required fields are marked *