Shocking Video: ತನ್ನ ತೊಡೆಯ ಮೇಲೆ ಹರಿದು ಬಂದ ಹಾವು ನೋಡಿ ವ್ಯಕ್ತಿ ಕಂಗಾಲು! ಮುಂದೇನಾಯ್ತು? ವಿಡಿಯೊ ನೋಡಿ | Shocking video snake was sitting in the man lap video goes viral in social media


Shocking Video: ತನ್ನ ತೊಡೆಯ ಮೇಲೆ ಹರಿದು ಬಂದ ಹಾವು ನೋಡಿ ವ್ಯಕ್ತಿ ಕಂಗಾಲು! ಮುಂದೇನಾಯ್ತು? ವಿಡಿಯೊ ನೋಡಿ

ಹಾವು

ಪ್ರಾಣಿಗಳಿಗೆ ಸಂಬಂಧಿಸಿದ ಅನೇಕ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ. ಅವುಗಳಲ್ಲಿ ಕೆಲವು ತಮಾಷೆಯಾಗಿದ್ದರೆ ಇನ್ನು ಕೆಲವು ವಿಡಿಯೊಗಳು ಭಯಾನಕವಾಗಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೊ ನೋಡಿದಾಕ್ಷಣ ಒಮ್ಮೆಲೆ ಕೆದರಿಕೆ ಆಗುವುದಂತೂ ಸತ್ಯ. ನೆಲದ ಮೇಲೆ ಕುಳಿತಿದ್ದ ವ್ಯಕ್ತಿಯ ತೊಡೆಯ ಮೇಲೆ ಹಾವು ಹರಿದು ಬಂದಿದೆ. ಆತನನ್ನೇ ದಿಟ್ಟಿಸಿ ನೋಡುತ್ತಿದೆ. ಈ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಕೆಲವು ಬಾರಿ ಭಯದ ಜೊತೆಗೆ ಇನ್ನಷ್ಟು ಅಪಾಯವನ್ನು ಎದುರಿಸಬೇಕಾಗುವ ಸಂದರ್ಭ ಎದುರಾಗುತ್ತದೆ. ಆದರೆ ಈ ವ್ಯಕ್ತಿ ಚಾಣಾಕ್ಷತನದಿಂದ ಅಪಾಯದಿಂದ ಪಾರಾಗಿದ್ದಾನೆ. ಈತನ ಬುದ್ಧಿವಂತಿಕೆಯನ್ನು ಕೆಲವರು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು ಭಯಾನಕವಾಗಿದೆ ವಿಡಿಯೊ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಈ ದೃಶ್ಯವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಹಾವು ವ್ಯಕ್ತಿಯ ಮಡಿಲಿನಲ್ಲಿ ಕುಳಿತಿರುವುದನ್ನು ನೋಡಿ ಕೆಲವರು ಭಯಗೊಂಡಿದ್ದಾರೆ. ವ್ಯಕ್ತಿಗೆ ಭಯವಾಗುತ್ತಿದ್ದರೂ ಉಪಾಯ ಮಾಡಿ ಚಾಣಾಕ್ಷತನದಿಂದ ಎದ್ದು ಬಂದಿರುವುದನ್ನು ನೋಡಿ ಆತನ ಬುದ್ಧಿವಂತಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಕೊಂಚ ಮಿಸ್​ ಆಗಿದ್ದರೂ ಅಪಾಯ ಗ್ಯಾರೆಂಟಿ! ಎಂದು ಹೇಳಿದ್ದಾರೆ. ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ:

Viral Video: ಮನೆಯ ಬಾಗಿಲ ಬಳಿ ಕುಳಿತಿದ್ದ ದೈತ್ಯಾಕಾರದ ನಾಗರಹಾವು ನೋಡಿ ಮನೆಯವರು ಕಂಗಾಲು; ದೃಶ್ಯ ಕ್ಯಾಮೆರಾದಲ್ಲಿ ಸೆರೆ​

Viral Video: ಹಾವು ನೋಡಿ ಕಂಗಾಲಾಗಿ ಕಿರುಚುತ್ತಾ ಓಡಿದ ಯುವತಿ ವಿಡಿಯೋ ವೈರಲ್

TV9 Kannada


Leave a Reply

Your email address will not be published. Required fields are marked *