Shocking Video: ದೆಹಲಿ ನಡುರಸ್ತೆಯಲ್ಲೇ ಕ್ಯಾಬ್ ಚಾಲಕನಿಗೆ ಥಳಿಸಿದ ಮಹಿಳೆ; ವಿಡಿಯೋ ವೈರಲ್ | Shocking Video: Woman slaps cab driver on road in Delhi watch viral video


Shocking Video: ದೆಹಲಿ ನಡುರಸ್ತೆಯಲ್ಲೇ ಕ್ಯಾಬ್ ಚಾಲಕನಿಗೆ ಥಳಿಸಿದ ಮಹಿಳೆ; ವಿಡಿಯೋ ವೈರಲ್

ರಸ್ತೆಯಲ್ಲಿ ಕ್ಯಾಬ್ ಚಾಲಕನಿಗೆ ಥಳಿಸಿದ ಮಹಿಳೆ

ನವದೆಹಲಿ: ನವದೆಹಲಿಯ ಹೆದ್ದಾರಿ ಮಧ್ಯೆ ಮಹಿಳೆಯೊಬ್ಬರು ಕ್ಯಾಬ್ ಚಾಲಕನಿಗೆ ಥಳಿಸಿದ ವಿಡಿಯೋ ವೈರಲ್ ಆಗಿದೆ. 2 ನಿಮಿಷಗಳ ಈ ವಿಡಿಯೋದಲ್ಲಿ ನೀಲಿ ಟೀ ಶರ್ಟ್ ಮತ್ತು ಮುಖಕ್ಕೆ ಮಾಸ್ಕ್ ಹಾಕಿದ್ದ ಮಹಿಳೆಯೊಬ್ಬರು ಕ್ಯಾಬ್ ಚಾಲಕನ ಕಾಲರ್ ಹಿಡಿದುಕೊಂಡು ಹೆದ್ದಾರಿಯ ಮಧ್ಯದಲ್ಲಿ ಆತನಿಗೆ ಥಳಿಸುತ್ತಿದ್ದಾರೆ. ಆ ಸ್ಥಳದಲ್ಲಿ ಸುತ್ತಲೂ ಜನರು ನಿಂತಿದ್ದಾರೆ. ಕ್ಯಾಬ್ ಚಾಲಕನಿಗೆ ಹೊಡೆದ ಮಹಿಳೆಯ ಜೊತೆಗೆ ಇನ್ನೋರ್ವ ಮಹಿಳೆಯೂ ನಿಂತಿರುವುದನ್ನು ಕಾಣಬಹುದು.

ಈ ವಿಡಿಯೋ ಪಶ್ಚಿಮ ಪಟೇಲ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ. ಆರೋಪಿ ಮಹಿಳೆ ಮತ್ತೊಬ್ಬ ಮಹಿಳೆಯೊಂದಿಗೆ ಸ್ಕೂಟಿಯಲ್ಲಿ ಹೋಗುತ್ತಿದ್ದಳು. ಹೈವೇಯಲ್ಲಿನ ಟ್ರಾಫಿಕ್​ನಿಂದಾಗಿ ಕ್ಯಾಬ್ ಚಾಲಕನ ಕಾರು ಮುಂದೆ ಚಲಿಸದೆ ನಿಂತಿತ್ತು. ತಾನು ಹೋಗುವಾಗ ಸೈಡ್ ಕೊಡಲಿಲ್ಲ ಎಂಬ ಕೋಪದಿಂದ ಆ ಮಹಿಳೆ ಕೆಳಗಿಳಿದು ಆ ಕ್ಯಾಬ್ ಚಾಲಕನಿಗೆ ಹೊಡೆದಿದ್ದಾಳೆ.

ಕ್ಯಾಬ್ ಚಾಲಕ ಮಹಿಳೆಗೆ ಸೈಡ್ ನೀಡದಿದ್ದಾಗ ಕೋಪಗೊಂಡ ಮಹಿಳೆ ತನ್ನ ಸ್ಕೂಟಿಯನ್ನು ಹೆದ್ದಾರಿಯಲ್ಲಿಯೇ ನಿಲ್ಲಿಸಿ ಕ್ಯಾಬ್ ಚಾಲಕನನ್ನು ನಿಂದಿಸಲು ಪ್ರಾರಂಭಿಸಿದಳು. ಅವಳು ಅವನನ್ನು ಕ್ಯಾಬ್‌ನಿಂದ ಹೊರಗೆಳೆದು ಹೊಡೆಯಲಾರಂಭಿಸಿದಳು. ಈ ಸಮಯದಲ್ಲಿ ಜನರು ಪ್ರತಿಭಟಿಸಿದಾಗ ಅಲ್ಲಿದ್ದವರಿಗೂ ಬೈಯಲು ಶುರು ಮಾಡಿದಳು. ಪ್ರಿಯದರ್ಶಿನಿ ನಾರಾಯಣ್ ಯಾದವ್ ಎಂಬ ಲಕ್ನೋ ಹುಡುಗಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಕ್ಯಾಬಿಯ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೊ ಕ್ಲಿಪ್‌ನಿಂದ ಸಾರ್ವಜನಿಕರಿಂದ ಅಸಮಾಧಾನವನ್ನು ಗಳಿಸಿದ ತಿಂಗಳುಗಳ ನಂತರ, ದೆಹಲಿಯಲ್ಲಿ ಮಹಿಳೆಯೊಬ್ಬರು ಕ್ಯಾಬ್ ಡ್ರೈವರ್‌ಗೆ ಕಪಾಳಮೋಕ್ಷ ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಘಟನೆಯ ವಿಡಿಯೋ ರಾಷ್ಟ್ರ ರಾಜಧಾನಿ ದೆಹಲಿಯ ಪಟೇಲ್ ನಗರ ಪ್ರದೇಶದಲ್ಲಿ ನಡೆದಿದೆ. ಮಹಿಳೆಯಿಂದ ಹಲ್ಲೆಗೊಳಗಾದ ಕ್ಯಾಬ್ ಡ್ರೈವರ್‌ನಿಂದ ಪೊಲೀಸರು ಇನ್ನೂ ದೂರು ಸ್ವೀಕರಿಸಿಲ್ಲ. ಆಕೆಯ ಸ್ಕೂಟಿಯ ನೋಂದಣಿ ಸಂಖ್ಯೆಯ ಸಹಾಯದಿಂದ ಮಹಿಳೆಯನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ. ಕ್ಯಾಬ್ ಚಾಲಕನ ದೂರು ಪಡೆದು ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Viral News: ಮದುವೆಯಾದ ಮರುದಿನವೇ ಗರ್ಲ್​ಫ್ರೆಂಡ್ ಜೊತೆ ವಧು ಪರಾರಿ; ಶಾಕ್ ಆದ ಗಂಡನಿಗೆ ಹೃದಯಾಘಾತ!

Viral News: ಜೈಲಿಗೆ ಹಾಕಿ ಪ್ಲೀಸ್!; ಮನೆಯಲ್ಲಿ ಹೆಂಡತಿಯ ಕಾಟ ತಾಳಲಾರದೆ ಪೊಲೀಸರ ಬಳಿ ಬೇಡಿಕೊಂಡ ಗಂಡ

TV9 Kannada


Leave a Reply

Your email address will not be published. Required fields are marked *