ವಾಕಿಂಗ್ಗೆ ಹೋಗಲು ಶೂ ಹಾಕಿಕೊಳ್ಳಲು ಹೋದಾಗ ಶಾಕೊಂದು ಕಾದೀತು. ಹೌದು ಆ ವ್ಯಕ್ತಿಯ ಶೂ ಒಳಗೆ ನಾಗರ ಹಾವೊಂದು ಅಡಗಿ ಕೂತಿತ್ತು. ನಗರದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಕುಮಾರ್ ಎಂಬುವರ ಮನೆಯ ಶೂನಲ್ಲಿ ನಾಗರಹಾವು ಅಡಗಿ ಕುಳಿತ್ತಿತ್ತು.
ಶಿವಮೊಗ್ಗ : ನಾಗರ ಪಂಚಮಿಯಂದು ನಾಗ ದೇವರ ಕಲ್ಲಿಗೆ ಹಾಲೆರೆದು ಪೂಜೆ ಮಾಡಿ, ತಮ್ಮ ಸಂಕಷ್ಟಗಳನ್ನು ನಾಗನ ಮುಂದೆ ಹೇಳಿಕೊಂಡು ಕೈ ಮುಗಿದು ಬರುವ ದಿನ ಅದು. ಆದರೆ ಶಿವಮೊಗ್ಗದಲ್ಲಿ ಒಂದು ಘಟನೆ ನಡೆದಿದೆ. ಕೆಲವರಿಗೆ ಬೆಳಗ್ಗೆ ವಾಕಿಂಗ್ಗೆ ಹೋಗುವ ಅಭ್ಯಾಸ ಇರುತ್ತದೆ, ಹಾಗೆ ಇಲ್ಲೊಬ್ಬರು ವಾಕಿಂಗ್ಗೆ ಹೋಗಲು ಶೂ ಹಾಕಿಕೊಳ್ಳಲು ಹೋದಾಗ ಶಾಕೊಂದು ಕಾದೀತು. ಹೌದು ಆ ವ್ಯಕ್ತಿಯ ಶೂ ಒಳಗೆ ನಾಗರ ಹಾವೊಂದು ಅಡಗಿ ಕೂತಿತ್ತು. ನಗರದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಕುಮಾರ್ ಎಂಬುವರ ಮನೆಯ ಶೂನಲ್ಲಿ ನಾಗರ ಹಾವು ಅಡಗಿ ಕುಳಿತ್ತಿತ್ತು.
ಹಾವು ಎಂದಾಗ ಎಲ್ಲರಿಗೂ ಭಯವಾಗುವುದು ಖಂಡಿತ, ಆದರೆ ತನ್ನ ಶೂನಲ್ಲಿ ಹಾವು ಎಂದಾಗ ನಡುಕ ಉಂಟಾಗುವುದು ಖಂಡಿತ, ಹಾವು ಕಂಡ ಕ್ಷಣ ಕುಮಾರ್ ಗಾಬರಿಯಾಗಿದ್ದಾರೆ. ಪ್ರತಿ ಬಾರಿ ಹೂ ಹಾಕುವಾಗ ಶೂವಿನ ಒಳಗಡೆ ಒಮ್ಮೆ ನೋಡಬೇಕು, ಏಕೆಂದರೆ ಈಗ ಮಳೆಗಾಲ, ಹಾವುಗಳು ಬೆಚ್ಚಗಿನ ಪ್ರದೇಶವನ್ನು ಹುಡುಕುವುದು ಸಹಜ ಹಾಗಾಗಿ ಶೂ ಹಾಕುವ ಮುನ್ನ ಒಂದು ಬಾರಿ ಶೂವನ್ನು ನೋಡಿಕೊಂಡು ಹಾಕಿ ಎನ್ನುತ್ತಾರೆ ಉರಗ ತಜ್ಞರ.
ಕುಮಾರ್ ಅವರು ಶಿವಮೊಗ್ಗದ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ಈ ಬಗ್ಗೆ ತಿಳಿಸಿದ್ದಾರೆ, ಕಿರಣ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ನೇಕ್ ಕಿರಣ್ ನಾಗರ ಹಾವನ್ನು ಹಿಡಿದುಕೊಂಡು ಹೋಗಿದ್ದಾರೆ. ಅದನ್ನು ಸುರಕ್ಷತ ಜಾಗಕ್ಕೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ. ಜೊತೆಗೆ ಮುಂದೆ ಎಚ್ಚರಿಕೆ ವಹಿಸುವಂತೆ ಹೇಳಿದ್ದಾರೆ.
ಈ ಮಳೆಗಾಲದಲ್ಲಿ ಹಾವುಗಳ ಕಾಟ ಹೆಚ್ಚಾಗಿದೆ, ಹಾವಿನಿಂದ ಅನೇಕ ಈ ಮೊದಲು ಅಪಾಯವನ್ನು ಅನುಭವಿಸಿದ್ದಾರೆ ಈ ಬಗ್ಗೆ ಉರಗ ತಜ್ಞರ ಎಚ್ಚರಿಕೆಯನ್ನು ನೀಡಿದ್ದಾರೆ. ಬೆಂಗಳೂರಿನ ಅನೇಕ ಕಡೆ ಶೂ ಒಳಗೆ ಹಾವುಗಳು ಕಂಡು ಬಂದಿದೆ
ಬಾಲಕಿಯ ಶೂ ಒಳಗೆ ಹಾವು