ಬಟ್ಟೆ ಅಂಗಡಿಯ ಒಳಗೆ ನುಗ್ಗಿದ ಬೈಕ್
ವಾಹನದಲ್ಲಿ ಸಂಚರಿಸುತ್ತಿರುವಾಗ ಎಷ್ಟು ಎಚ್ಚರದಲ್ಲಿದ್ದರೂ ಸಾಲದು. ಕೊಂಚ ನಿಯಂತ್ರಣ ತಪ್ಪಿದರೂ ಅವಘಡ ಸಂಭವಿಸುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇದೀಗ ವೈರಲ್ ಆದ ವಿಡಿಯೊದಲ್ಲಿ ಬೈಕ್ ಸವಾರ ರಸ್ತೆಯಲ್ಲಿ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿದ ಪರಿಣಾಮ ಬಟ್ಟೆ ಅಂಗಡಿಯ ಒಳಗೆ ನುಗ್ಗಿದ್ದಾನೆ. ತೆಲಂಗಾಣದಲ್ಲಿ ನಡೆದ ಈ ಘಟನೆಯ ದೃಶ್ಯ ಸಿಸಿಟಿಯಲ್ಲಿ ರೆಕಾರ್ಡ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಆಘಾತಕಾರಿ ವಿಡಿಯೊದಲ್ಲಿ ನೋಡುವಂತೆ ವೇಗವಾಗಿ ಬಂದ ಬೈಕ್ ಅಂಗಡಿಯ ಕೌಂಟರ್ಗೆ ಹೋಗಿ ಗುದ್ದಿದೆ.
ಬೈಕ್ ವೇಗವಾಗಿದ್ದರಿಂದ ಅಂಗಡಿಯಲ್ಲಿದ್ದ ಗ್ರಾಹಕರೂ ಸಹ ಕಂಗಾಲಾಗಿದ್ದಾರೆ. ಅಂಗಡಿಯೊಳಕ್ಕೆ ಸ್ಟೂಲ್ ಮೇಲೆ ಕುಳಿತಿದ್ದ ಓರ್ವ ಮಹಿಳೆ ಕಂಗಾಲಾಗಿ ಎದ್ದು ನಿಂತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಘಟನೆಯಲ್ಲಿ ಯಾರಿಗೂ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ. ಕಳೆದ ಸೋಮವಾರ ರಾತ್ರಿ ಘಟನೆ ನಡೆದಿದೆ. ಬ್ರೇಕ್ ಫೇಲ್ ಆಗಿದ್ದರ ಪರಿಣಾಮ ನಿಯಂತ್ರಣ ತಪ್ಪಿ ಬೈಕ್ ಅಂಗಡಿಯ ಒಳಗೆ ನುಗ್ಗಿದೆ ಎಂದು ಬೈಕ್ ಅವಾರ ಹೇಳಿದ್ದಾರೆ.
ಇಂಥದ್ದೇ ಘಟನೆ ಹಿಂದೊಮ್ಮೆ ನಡೆದಿತ್ತು. ಹಳಿಯಲ್ಲಿ ಸಾಗುತ್ತಿದ್ದ ರೈಲು ಬರುತ್ತಿರುವಾಗ ಬೈಕ್ ಸವಾರ ದಾಟಲು ಪ್ರಯತ್ನಿಸಿದ್ದರು. ದಾಟಲು ಕಷ್ಟವಾದ್ದರಿಂದ ಬೈಕ್ನಿಂದ ಜಿಗಿದು ಸವಾರ ಪ್ರಾಣಾಪಾಯದಿಂದ ತನ್ನನ್ನು ತಾನು ರಕ್ಷಿಸಿಕೊಂಡಿದ್ದನು. ಶಾಕಿಂಗ್ ವಿಡಿಯೊ ಆಗ ಫುಲ್ ವೈರಲ್ ಆಗಿತ್ತು. ಈ ಘಟನೆ ಈ ವರ್ಷದ ಪ್ರಾರಂಭದಲ್ಲಿ ನಡೆದಿತ್ತು.
ಇದನ್ನೂ ಓದಿ:
Shocking Video: ಕುದಿಯುತ್ತಿರುವ ಎಣ್ಣೆಯಲ್ಲಿ ಕೈ ಹಾಕಿ ಚಿಕನ್ ತೆಗೆಯುತ್ತಾನೆ ಈ ವ್ಯಕ್ತಿ; ಈತ ಬಳಸೋ ತಂತ್ರವೇನು?
Viral Video: ತಣ್ಣನೇಯ ಐಸ್ ಕ್ರೀಂ ತಿಂದ ಪುಟ್ಟ ಮಗುವಿನ ಕ್ಯೂಟ್ ರಿಯಾಕ್ಷನ್ ವಿಡಿಯೊ ವೈರಲ್!