Shocking Video: ಪ್ಯಾರಾಸೈಲಿಂಗ್ ಮಾಡುವ ವೇಳೆ ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ದಂಪತಿ; ಶಾಕಿಂಗ್ ವಿಡಿಯೊ ವೈರಲ್ | Couple enjoying parasailing in diu suddenly rope snaps shocking video viral in social media


Shocking Video: ಪ್ಯಾರಾಸೈಲಿಂಗ್ ಮಾಡುವ ವೇಳೆ ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ದಂಪತಿ; ಶಾಕಿಂಗ್ ವಿಡಿಯೊ ವೈರಲ್

ಪ್ಯಾರಾಸೈಲಿಂಗ್ ಮಾಡುವ ವೇಳೆ ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ದಂಪತಿ

ಪ್ಯಾರಾಸೈಲಿಂಗ್ (Parasailing) ಮಾಡುವ ವೇಳೆ ಪ್ಯಾರಾಚೂಟ್​ನ ಹಗ್ಗ ತುಂಡಾಗಿ ದಂಪತಿ ಸಮುದ್ರಕ್ಕೆ ಬಿದ್ದ ಘಟನೆ ನಡೆದಿದೆ. ಘಟನೆ ದಿಯುನಲ್ಲಿ ನಡೆದಿದ್ದು, ಆಕಾಶದಲ್ಲಿ ಹಾರಾಡುತ್ತಿದ್ದಂತೆಯೇ ದಂಪತಿ (Couple) ಸಂತೋಷದಿಂದ ಕೂಗುತ್ತಿದ್ದರು. ಇನ್ನೂ ಮೇಲಕ್ಕೆ ಹಾರುತ್ತಿದ್ದಂತೆಯೇ ಹಗ್ಗ ತುಂಡಾಗಿದೆ. ದಂಪತಿ ಹೆದರಿ ಕಿರುಚಾಡುತ್ತಿರುವುದು ಕೇಳಿಸುತ್ತದೆ. ಬೋಟ್​ನಲ್ಲಿದ್ದವರೂ (Boat) ಸಹ ಕೂಗಾಡುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದು. ತಡಮಾಡದೇ ಜೀವರಕ್ಷಕ ದಳದ ಸಿಬ್ಬಂದಿ ದಂಪತಿಯನ್ನು ರಕ್ಷಿಸಿದ್ದಾರೆ. ಶಾಕಿಂಗ್ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಫುಲ್​ ವೈರಲ್​ ಆಗಿದೆ. 

ದಂಪತಿಯಾದ ಅಜಿತ್ ಕಥಾಡ್ ಮತ್ತು ಸರಳಾ ಅವರು ಪ್ಯಾರಾಸೈಲಿಂಗ್ ಮಾಡುವಾಗ ಹೆಚ್ಚು ಕುತೂಹಲರಾಗಿದ್ದರು. ಕಿರುಚಾಡುತ್ತಾ ಮಜಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆಯೇ ರೋಪ್ ಕಟ್ಟಾಗಿದೆ. ಇದರ ಪರಿಣಾಮ ಸಮುದ್ರಕ್ಕೆ ಬಿದ್ದಿದ್ದಾರೆ. ದಂಪತಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿದ್ದರಿಂದ ಜೊತೆಗೆ ಲೈಫ್​ ಜಾಕೆಟ್ ಧರಿಸಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.

ಬೋಟ್​ನಲ್ಲಿದ್ದ ದಂಪತಿ ಸಹೋದರ ವಿಡಿಯೊ ಮಾಡುತ್ತಿದ್ದರು. ಹಾಗಾಗಿ ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ನಾನು ವಿಡಿಯೊ ರೆಕಾರ್ಡ್ ಮಾಡುತ್ತಿದ್ದೆ. ಹಗ್ಗ ತುಂಡಾದ ತಕ್ಷಣ ಏನು ಮಾಡಬೇಕು ಎಂದು ತೋಚುತ್ತಿರಲಿಲ್ಲ. ನನ್ನ ಅತ್ತಿಗೆ ಮತ್ತು ಅಣ್ಣ ಬಹಳ ಎತ್ತರದಿಂದ ಕೆಳಕ್ಕೆ ಬೀಳುವುದನ್ನು ನೋಡಿ ತುಂಬಾ ಗಾಬರಿಯಾಯಿತು ಎಂದು ರಾಕೇಶ್ ಮಾತನಾಡಿದ್ದಾರೆ.

ರಾಕೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ಪ್ಯಾರಾಚೂಟ್ ಹಗ್ಗವು ಸವೆದಿದೆ ಎಂದು ನಿರ್ವಾಹಕರೊಂದಿಗೆ ಮಾತನಾಡಿದ್ದೆ, ಆದರೆ ಏನೂ ಆಗುವುದಿಲ್ಲ ಎಂದು ಅವರು ನನಗೆ ಭರವಸೆ ನೀಡಿದ್ದರು ಎಂದರು. ದಂಪತಿ ಕುಟುಂಬದವರು ಮಾತನಾಡಿ, ಪ್ಯಾರಾಸೈಲಿಂಗ್ ಸೇವೆಯನ್ನು ತುಂಬಾ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಏತನ್ಮಧ್ಯೆ, ಭಾರೀ ಗಾಳಿ ಬೀಸುತ್ತಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಪಾಮ್ಸ್ ಅಡ್ವೆಂಚರ್ ಮತ್ತು ಮೋಟಾರ್ಸ್ಪೋರ್ಟ್ಸ್ ಮಾಲೀಕರು ಹೇಳಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಈ ರೀತಿಯ ಘಟನೆ ಸಂಭವಿಸಿದ್ದು ಇದೇ ಮೊದಲು. ಏಕೆಂದರೆ ಆ ದಿನ ಗಾಳಿ ತುಂಬಾ ಬೀಸುತ್ತಿತ್ತು ಎಂದು ಮೋಹನ್ ಲಕ್ಷ್ಮಣ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ನಾವು ಎತ್ತರಕ್ಕೆ ಹಾರಾಡುತ್ತಿದ್ದಂತೆಯೇ ಹಗ್ಗ ತುಂಡಾಗಿ, ಪ್ಯಾರಾಚೂಟ್ ಹೇಗೆ ನಿಯಂತ್ರಿಸಬೇಕು ಎಂದು ತಿಳಿಯದೇ ಒಂದು ಕಡೆಯಿಂದ ಇನ್ನುಂದು ಕಡೆಗೆ ತೂಗಾಡಲು ಪ್ರಾರಂಭಿಸಿದೆವು. ಕೆಲವು ಸೆಕೆಂಡುಗಳ ಬಳಿಕ ನಾವು ಸಮುದ್ರಕ್ಕೆ ಧುಮುಕಿದೆವು. ಲೈಫ್ ಜಾಕೆಟ್ ಧರಿಸಿದ್ದರಿಂದ ನೀರಿನಲ್ಲಿ ತೇಲುತ್ತಿದ್ದೆವು. ನನ್ನ ಹೆಂಡತಿ ತುಂಬಾ ಹೆದರಿದ್ದಳು ಹಾಗಾಗಿ ಕೆಲಹೊತ್ತು ಮಾತನಾಡಲು ಸಾಧ್ಯವಾಗಲಿಲ್ಲ. ರಕ್ಷಕ ತಂಡದವರು ಬಂದು ನಮ್ಮನ್ನು ರಕ್ಷಿಸಿದರು ಎಂದು ಅಜಿತ್ ಕಥಾಡ್ ಘಟನೆಯನ್ನು ವಿವರಿಸಿದ್ದಾರೆ.

ಇದನ್ನೂ ಓದಿ:

Shocking News: ಮೊಮ್ಮಗುವಿನ ಅಂತ್ಯಕ್ರಿಯೆಗೆ ಹೋದಾಗ ಮಗಳ ಮೇಲೆ ಅತ್ಯಾಚಾರ ಮಾಡಿ, ಹತ್ಯೆ ಮಾಡಿದ ಅಪ್ಪ !

Shocking Video: 22 ಅಂತಸ್ತಿನ‌‌ ಕಟ್ಟಡದ ಮೇಲೆ ಮಕ್ಕಳ ಹುಡುಗಾಟ; ಪೋಷಕರನ್ನು ಬೆಚ್ಚಿಬೀಳಿಸಿರುವ ವಿಡಿಯೋ ಇಲ್ಲಿದೆ

TV9 Kannada


Leave a Reply

Your email address will not be published. Required fields are marked *