Shocking Video: ರೆಸ್ಟೋರೆಂಟ್​ನಲ್ಲಿ ಕೋಪ ಬಂದಿಂದ್ದಕ್ಕೆ ಮ್ಯಾನೇಜರ್ ಮುಖದ ಮೇಲೆ ಬಿಸಿಬಿಸಿ ಸೂಪ್ ಎರಚಿದ ಯುವತಿ! | Angry customer throws soup in managers face in restaurant shocking video goes viral


Shocking Video: ರೆಸ್ಟೋರೆಂಟ್​ನಲ್ಲಿ ಕೋಪ ಬಂದಿಂದ್ದಕ್ಕೆ ಮ್ಯಾನೇಜರ್ ಮುಖದ ಮೇಲೆ ಬಿಸಿಬಿಸಿ ಸೂಪ್ ಎರಚಿದ ಯುವತಿ!

ಕೋಪ ಬಂದಿಂದ್ದಕ್ಕೆ ಮ್ಯಾನೇಜರ್ ಮುಖದ ಮೇಲೆ ಬಿಸಿಬಿಸಿ ಸೂಪ್ ಎರಚಿದ ಯುವತಿ!

ಕೋಪಗೊಂಡ ಯುವತಿ ರೆಸ್ಟೋರೆಂಟ್​ನಲ್ಲಿ ಮ್ಯಾನೇಜರ್ ಮುಖದ ಮೇಲೆ ಬಿಸಿ ಬಿಸಿ ಸೂಪ್ ಎರಚಿದ್ದಾಳೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಘಟನೆ ಟೆಕ್ಸಾಸ್​ನಲ್ಲಿ ನಡೆದಿದೆ. ರೆಸ್ಟೋರೆಂಟ್​ನಲ್ಲಿ ಸೂಪ್ ತರಿಸಿಕೊಂಡ ಯುವತಿ, ಸೂಪ್​ನ ಬಿಸಿಗೆ ಡಬ್ಬದ ಮುಚ್ಚಳ ಕರಗಿದೆ ಎಂದು ಕೋಪಗೊಂಡಿದ್ದಾಳೆ. ಸಿಟ್ಟಿಗೆದ್ದ ಯುವತಿ ಮ್ಯಾನೇಜರ್ ಬಳಿ ಹೋಗಿ ಕೂಗಾಡಿದ್ದಾಳೆ. ಕೈಯಲ್ಲಿ ಹಿಡಿದಿದ್ದ ಬಿಸಿ ಬಿಸಿ ಸೂಪನ್ನು ಮ್ಯಾನೇಜರ್ ಮುಖದ ಮೇಲೆ ಎರಚಿದ್ದಾಳೆ.

ಘಟನೆಯ ದೃಶ್ಯಾವಳಿಗಳು ಟಿಕ್​ಟಾಕ್​ನಲ್ಲಿ ವೈರಲ್ ಆಗಿದ್ದು, ಸೂಪ್​ ಹಾಕಿದ್ದ ಡಬ್ಬದ ಮುಚ್ಚಳ ಕರಗಿದೆ ಎಂದು ಮ್ಯಾನೇಜರ್ ಬಳಿ ಜಗಳವಾಡುತ್ತಿರುವ ದೃಶ್ಯವನ್ನು ವಿಡಿಯೊದಲ್ಲಿ ನೋಡಬಹುದು. ನಂತರ ಕೋಪಗೊಂಡ ಯುವತಿ ಕೈಯಲ್ಲಿ ಹಿಡಿದಿದ್ದ ಸೂಪ್ ಪಾತ್ರೆಯನ್ನು ಮ್ಯಾನೇಜರ್ ಮುಖಕ್ಕೆ ಎಸೆದು ರೆಸ್ಟೋರೆಂಟ್​ನಿಂದ ಓಡಿ ಹೋಗಿದ್ದಾಳೆ.

ಅದೃಷ್ಟವಶಾತ್ ರೆಸ್ಟೋರೆಂಟ್ ಮ್ಯಾನೇಜರ್​ಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ. ಶಾಕಿಂಗ್ ವಿಡಿಯೊ ಇದೀಗ ಫುಲ್ ವೈರಲ್ ಆಗಿದ್ದು, ಯುವತಿ ಕ್ರಿಮಿನಲ್ ಆರೋಪಗಳನ್ನು ಎದುರಿಸಿರಬಹುದು ಎಂದು ನೆಟ್ಟಿಗರು ಹೇಳಿದ್ದಾರೆ. ಘಟನೆಯ ಕುರಿತು ಮ್ಯಾನೇಜರ್, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯುವತಿ ಬಂದಿದ್ದ ಕಾರಿನ ಫೋಟೋಗಳನ್ನು ಇತರ ಗ್ರಾಹಕರು ಕ್ಯಾಮರಾದಲ್ಲಿ ಸೆರೆ ಹಿಡಿದು ಪೊಲೀಸರಿಗೆ ನೀಡಿದ್ದಾರೆ. ಟಿಕ್​ಟಾಕ್​ನಲ್ಲಿ ಹರಿದಾಡಿದ ಈ ವಿಡಿಯೊ 5 ಮಿಲಿಯನ್​ಗೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಯುವತಿಯನ್ನು ಹಿಡಿದು ಜೈಲಿಗೆ ಹಾಕಬೇಕು ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ:

Shocking Video: ಕುದಿಯುತ್ತಿರುವ ಎಣ್ಣೆಯಲ್ಲಿ ಕೈ ಹಾಕಿ ಚಿಕನ್​ ತೆಗೆಯುತ್ತಾನೆ ಈ ವ್ಯಕ್ತಿ; ಈತ ಬಳಸೋ ತಂತ್ರವೇನು?

Shocking Video: ಬೈಕ್​ಗಳಿಗೆ ಡಿಕ್ಕಿ ಹೊಡೆದು, ರಸ್ತೆಯ ಪಕ್ಕದವರ ಮೇಲೆ ಹರಿದ ಐಷಾರಾಮಿ ಕಾರು; ಶಾಕಿಂಗ್ ವಿಡಿಯೋ ವೈರಲ್

TV9 Kannada


Leave a Reply

Your email address will not be published. Required fields are marked *