Shocking Video: ವೇಗವಾಗಿ ಚಲಿಸುತ್ತಿದ್ದ ಟ್ರಕ್​ನಿಂದ ದನಗಳನ್ನು ಬಿಸಾಡಿದ ಹಸುಗಳ ಸ್ಮಗ್ಲರ್; ಶಾಕಿಂಗ್ ವಿಡಿಯೋ ವೈರಲ್ | Smugglers Throw Cattle From High speed Truck In Gurugram Police Chase Captured On Video


Shocking Video: ವೇಗವಾಗಿ ಚಲಿಸುತ್ತಿದ್ದ ಟ್ರಕ್​ನಿಂದ ದನಗಳನ್ನು ಬಿಸಾಡಿದ ಹಸುಗಳ ಸ್ಮಗ್ಲರ್; ಶಾಕಿಂಗ್ ವಿಡಿಯೋ ವೈರಲ್

ಹಸು ಕಳ್ಳಸಾಗಣೆ ಮಾಡುತ್ತಿರುವ ಸಿಬ್ಬಂದಿ

ಗುರುಗ್ರಾಮ: ಗುರುಗ್ರಾಮದ (Gurugram) ಸೋಹ್ನಾದಲ್ಲಿ ಹಸುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಟ್ರಕ್ ಅನ್ನು ಹಿಂಬಾಲಿಸುತ್ತಿದ್ದ ಮೂರು ಎಸ್‌ಯುವಿ ವಾಹನಗಳ ಮೇಲೆ ಗುಂಡು ಹಾರಿಸಿದ ಹಿನ್ನೆಲೆಯಲ್ಲಿ ಐದು ಜನರನ್ನು ಬಂಧಿಸಲಾಗಿದೆ. ಹಸುಗಳ ಕಳ್ಳಸಾಗಣೆ (Cow Smuggling) ಮಾಡುತ್ತಿರುವ ಮಾಹಿತಿ ಸಿಗುತ್ತಿದ್ದಂತೆ 22 ಕಿಮೀ ದೂರ ವೇಗವಾಗಿ ಪೊಲೀಸರೂ ಆ ಟ್ರಕ್ ಅನ್ನು ಹಿಂಬಾಲಿಸಿದ್ದರು. ಹಸುಗಳಿದ್ದ ಟ್ರಕ್ ಅನ್ನು ಪೊಲೀಸ್ ವಾಹನ ಹಿಂಬಾಲಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಚೇಸಿಂಗ್ ವಿಡಿಯೋವನ್ನು ಪೊಲೀಸರೇ ರೆಕಾರ್ಡ್​ ಮಾಡಿಕೊಂಡಿದ್ದಾರೆ.

ಈ ಆಘಾತಕಾರಿ ಘಟನೆಯ ವೀಡಿಯೊದಲ್ಲಿ ಆರೋಪಿಗಳು ಟ್ರಕ್ ವೇಗವಾಗಿ ಓಡಿಸುತ್ತಿರುವುದನ್ನು ನೋಡಬಹುದು. ಅಲ್ಲದೆ, ಆ ವೇಗವಾಗಿ ಚಲಿಸುತ್ತಿರುವ ವಾಹನದಿಂದ ಹಸುಗಳನ್ನು ಕೆಳಗೆ ಎಸೆಯುವುದನ್ನು ಕೂಡ ನೋಡಬಹುದು. ಈ ಘಟನೆಯ ಕುರಿತು ತನಿಖೆ ನಡೆಸಲಾಗಿದ್ದು, ಹಸುಗಳ ಕಳ್ಳಸಾಗಣೆದಾರರಿಂದ ಕೆಲವು ದೇಸಿ ಬುಲೆಟ್​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುಗಾಂವ್​ನ ಸೈಬರ್ ಸಿಟಿ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯ ವಿವರಗಳನ್ನು ಪೊಲೀಸರು ನೀಡಿದ್ದಾರೆ.

ದೆಹಲಿ-ಗುರುಗ್ರಾಮ ಗಡಿಯಲ್ಲಿ ಪೊಲೀಸರು ಮತ್ತು ಟ್ರಕ್ ನಡುವೆ ಚೇಸ್ ಆರಂಭವಾಯಿತು. ಹಸುಗಳ ಕಳ್ಳಸಾಗಣೆದಾರರು ತಮ್ಮ ಟ್ರಕ್ ಅನ್ನು ಓಡಿಸುತ್ತಿದ್ದರು. ಏಳು ಹಸುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಪೊಲೀಸರಿಗೆ ದೂರು ಬಂದಿತ್ತು. ಹೀಗಾಗಿ, ಟೋಲ್‌ನಲ್ಲಿ ಪೊಲೀಸ್ ಕಾರುಗಳಿಗೆ ಡಿಕ್ಕಿ ಹೊಡೆದು, ಉರುಳಿಸುವ ಪ್ರಯತ್ನದಲ್ಲಿ ಟ್ರಕ್ ಅನ್ನು ಅತಿ ವೇಗದಲ್ಲಿ ಓಡಿಸಲಾಗುತ್ತಿತ್ತು. ಆದರೆ, ಆ ಟ್ರಕ್​ನಲ್ಲಿ ಹಸುಗಳಿರುವ ಬಗ್ಗೆ ಪೊಲೀಸರಿಗೆ ಅನುಮಾನ ಉಂಟಾದ ಬಗ್ಗೆ ಖಾತರಿಯಾಗುತ್ತಿದ್ದಂತೆ ಸಿಕ್ಕಿಹಾಕಿಕೊಳ್ಳುವ ಭೀತಿಯಿಂದ ಅವರು ಟ್ರಕ್​ನಿಂದ ರಸ್ತೆಗೆ ಹಸುಗಳನ್ನು ಬಿಸಾಡತೊಡಗಿದರು.

ದೆಹಲಿ ಗಡಿಯಿಂದ ಗುರುಗ್ರಾಮವನ್ನು ಪ್ರವೇಶಿಸುವಾಗ ಹಸು ಕಳ್ಳಸಾಗಣೆದಾರರಿಗೆ ವಾಹನವನ್ನು ನಿಲ್ಲಿಸಲು ಪೊಲೀಸರು ಸೂಚಿಸಿದರು. ಅದರಿಂದ ಗಾಬರಿಯಾದ ಟ್ರಕ್ ಚಾಲಕ ವೇಗವಾಗಿ ವಾಹನ ಚಲಾಯಿಸಲು ಶುರುಮಾಡಿದ್ದರಿಂದ ಪೊಲೀಸರು ಆ ವಾಹನವನ್ನು ಬೆನ್ನತ್ತಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಕೊನೆಗೂ ಹಸು ಕಳ್ಳಸಾಗಣೆದಾರರನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 5 ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಹಿಂದೂಸ್ತಾನ್ ಟೈಮ್ಸ್‌ನ ವರದಿಯ ಪ್ರಕಾರ ಹಸುಗಳನ್ನು ವಧೆ ಮಾಡಲು ದೆಹಲಿಯಿಂದ ಮೇವಾರ್‌ಗೆ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಆರೋಪಿಗಳನ್ನು ಯಾಹ್ಯಾ, ಬಲ್ಲು, ತಸ್ಲೀಂ, ಖಾಲಿದ್ ಮತ್ತು ಸಾಹಿದ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

TV9 Kannada


Leave a Reply

Your email address will not be published.