Shooting At Monterey Park Los Angeles America on Chinese New Year Party several feared dead | Los Angeles Shooting: ಅಮೆರಿಕದಲ್ಲಿ ಚೀನಿ ಹೊಸ ವರ್ಷಾಚರಣೆ ವೇಳೆ ಗುಂಡಿನ ದಾಳಿ; 10 ಮಂದಿ ಸಾವು


Chinese New Year Party: ಚೀನೀ ಚಾಂದ್ರಮಾನ ಪದ್ಧತಿಯ ಪ್ರಕಾರ ಅರಂಭವಾಗುವ ಹೊಸವರ್ಷವನ್ನು ಸಂಭ್ರಮಿಸಲು ಈ ವೇಳೆ ಅಲ್ಲಿ ಸಾವಿರಾರು ಮಂದಿ ನೆರೆದಿದ್ದರು.

Los Angeles Shooting: ಅಮೆರಿಕದಲ್ಲಿ ಚೀನಿ ಹೊಸ ವರ್ಷಾಚರಣೆ ವೇಳೆ ಗುಂಡಿನ ದಾಳಿ; 10 ಮಂದಿ ಸಾವು

ಅಮೆರಿಕದಲ್ಲಿ ಮತ್ತೊಂದು ಶೂಟೌಟ್​ ಆಗಿದೆ. (ಪ್ರಾತಿನಿಧಿಕ ಚಿತ್ರ)

ಲಾಸ್​ಏಂಜಲೀಸ್: ಅಮೆರಿಕದ ಲಾಸ್​ಏಂಜಲೀಸ್ ನಗರದ (Los Angeles) ಸಮೀಪ ಇರುವ ಮಾಂಟೆರೆ ಪಾರ್ಕ್​ನಲ್ಲಿ ಶನಿವಾರ ರಾತ್ರಿ ಅಪರಿಚಿತ ದುಷ್ಕರ್ಮಿ ನಡೆಸಿದ ಗುಂಡಿನ ದಾಳಿಯಲ್ಲಿ (Shooting) ಕನಿಷ್ಠ 10 ಮಂದಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಸತ್ತವರ ಮತ್ತು ಗಾಯಗೊಂಡವರ ನಿಖರ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ. ಗುಂಡಿನ ದಾಳಿ ನಡೆದಿರುವುದನ್ನು ‘ಲಾಸ್​ಏಂಜಲೀಸ್ ಟೈಮ್ಸ್​’ ವರದಿಯು ದೃಢಪಡಿಸಿದೆ.

ಕ್ಯಾಲಿಫೋರ್ನಿಯಾದ ಸ್ಥಳೀಯ ಕಾಲಮಾನ ಶನಿವಾರ ರಾತ್ರಿ 10 ಗಂಟೆಯ ವೇಳೆಗೆ ಈ ದುರ್ಘಟನೆ ನಡೆದಿದೆ. ಚೀನೀ ಚಾಂದ್ರಮಾನ ಪದ್ಧತಿಯ ಪ್ರಕಾರ ಅರಂಭವಾಗುವ ಹೊಸವರ್ಷವನ್ನು ಸಂಭ್ರಮಿಸಲು (Chinese New Year Party) ಈ ವೇಳೆ ಅಲ್ಲಿ ಸಾವಿರಾರು ಮಂದಿ ನೆರೆದಿದ್ದರು. ಲಾಸ್​ಏಂಜಲೀಸ್ ಕೌಂಟಿಯಲ್ಲಿರುವ ಮಾಂಟೆರೆ ಪಾರ್ಕ್​​ ಲಾಸ್​ಏಂಜಲೀಸ್ ನಗರದಿಂದ 11 ಕಿಮೀ ದೂರದಲ್ಲಿದೆ.

ತಾಜಾ ಸುದ್ದಿ

(ಮತ್ತಷ್ಟು ಮಾಹಿತಿ ಶೀಘ್ರ ಅಪ್​ಡೇಟ್ ಆಗಲಿದೆ)

TV9 Kannada


Leave a Reply

Your email address will not be published. Required fields are marked *