Shubman Gill: ಭಾರತದ ಗೆಲುವಿಗೆ ಕಾರಣವಾಯ್ತು ಶುಭ್ಮನ್ ಗಿಲ್ ಹಿಡಿದ ರೋಚಕ ಕ್ಯಾಚ್: ವಿಡಿಯೋ | Shubman Gill incredible catch turn he match and end to Sikandar Raza show in IND vs ZIM 3rd ODI


IND vs ZIM 3rd ODI: ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶುಭ್ಮನ್ ಗಿಲ್ ಅವರು ಕೇವಲ ಬ್ಯಾಟಿಂಗ್​ನಲ್ಲಿ ಮಾತ್ರವಲ್ಲದೆ ಫೀಲ್ಡಿಂಗ್​ನಲ್ಲೂ ಭಾರತಕ್ಕೆ ನೆರವಾದರು. ಅದರಲ್ಲೂ ಗಿಲ್ ಹಿಡಿದ ಒಂದು ಕ್ಯಾಚ್ ಪಂದ್ಯದ ಗತಿಯನ್ನೇ ಬದಲಾಯಿಸಿತು.

ವೆಸ್ಟ್ ಇಂಡೀಸ್ ಬಳಿಕ ಇದೀಗ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯನ್ನೂ ಭಾರತ (Zimbabwe vs India) ಕ್ರಿಕೆಟ್ ತಂಡ ಕ್ಲೀನ್​ಸ್ವೀಪ್ ಮಾಡಿದ ಸಾಧನೆ ಗೈದಿದೆ. ಹರಾರೆಯಲ್ಲಿ ಸೋಮವಾರ ನಡೆದ ಅಂತಿಮ ತೃತೀಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 13 ರನ್​ಗಳ ರೋಚಕ ಗೆಲುವು ಕಂಡಿತು. ಶುಭ್ಮನ್ ಗಿಲ್ (Shubman Gill) ಅವರ ಆಕರ್ಷಕ ಶತಕ, ಇಶಾನ್ ಕಿಶನ್ ಅರ್ಧಶತಕ ಒಂದು ಕಡೆಯಾದರೆ ಬೌಲರ್​ಗಳು ಮತ್ತೊಮ್ಮೆ ಸಂಘಟಿತ ಪ್ರದರ್ಶನ ತೋರಿದರು. ಈ ಮೂಲಕ 3-0 ಅಂತರದಿಂದ ಕೆಎಲ್ ರಾಹುಲ್ (KL Rahul) ಪಡೆ ಏಕದಿನ ಸರಣಿಯನ್ನು ಟೈಟ್​ವಾಷ್ ಮಾಡಿದೆ. ಶುಭ್ಮನ್ ಗಿಲ್ ಅವರು ಕೇವಲ ಬ್ಯಾಟಿಂಗ್​ನಲ್ಲಿ ಮಾತ್ರವಲ್ಲದೆ ಫೀಲ್ಡಿಂಗ್​ನಲ್ಲೂ ತಂಡಕ್ಕೆ ನೆರವಾದರು. ಅದರಲ್ಲೂ ಗಿಲ್ ಹಿಡಿದ ಒಂದು ಕ್ಯಾಚ್ ಪಂದ್ಯದ ಗತಿಯನ್ನೇ ಬದಲಾಯಿಸಿತು.

ಭಾರತ ನೀಡಿದ್ದ 290 ರನ್​ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಜಿಂಬಾಬ್ವೆ ಮುಖ್ಯ ವಿಕೆಟ್​ಗಳನ್ನು ಕಳೆದುಕೋಳ್ಳುತ್ತಾ ಸಾಗಿದರೂ 5ನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಬಂದ ಸಿಖಂದರ್ ರಾಜಾ ಏಕಾಂಗಿ ಹೋರಾಟವನ್ನ ನಡೆಸಿದರು. ತಂಡದ ಗೆಲುವಿಗೆ ರನ್ ಗಳಿಸುತ್ತಾ ಸಾಗಿದ ಸಿಖಂದರ್ ಆಕರ್ಷಕ ಶತಕ ಸಿಡಿಸಿ ಅಬ್ಬರಿಸಿದರು. ಕೊನೆಯ ಹಂತದ ವರೆಗೂ ಕ್ರೀಸ್​ನಲ್ಲಿದ್ದ ಇವರು ತಂಡಕ್ಕೆ ಗೆಲುವು ತಂದುಕೊಡುತ್ತಾರೆ ಎಂದೇ ನಂಬಲಾಗಿತ್ತು. ಆದರೆ, 49ನೇ ಓವರ್​ನಲ್ಲಿ ನಡೆದ ಒಂದು ಘಟನೆ ಭಾರತದ ಗೆಲುವಿಗೆ ಕಾರಣವಾದರೆ, ಇದು ಜಿಂಬಾಬ್ವೆ ಸೋಲು ಖಚಿತಪಡಿಸಿತು.

49ನೇ ಓವರ್​ನಲ್ಲಿ ಶಾರ್ದೂಲ್ ಠಾಕೂರ್ ಬೌಲಿಂಗ್​ನ 4ನೇ ಎಸೆತದಲ್ಲಿ ಸಿಖಂದರ್ ಲಾಂಗ್​ ಆನ್​ನಲ್ಲಿ ಸಿಕ್ಸರ್​ಗೆಂದು ಚೆಂಡನ್ನು ಅಟ್ಟಿದರು. ಆದರೆ ಅವರು ಅಂದುಕೊಂಡ ರೀತಿ ಟೈಮ್ ಆಗದೆ ಚೆಂಡು ನೇರವಾಗಿ ಬೌಂಡರಿ ಗೆರೆ ದಾಟಲಿಲ್ಲ. ಶುಭ್ಮನ್ ಗಿಲ್ ಸರಿಯಾದ ಸಮಯಕ್ಕೆ ಓಡಿ ಬಂದು ಡೈವ್ ಬಿದ್ದು ರೋಚಕ ಕ್ಯಾಚ್ ಹಿಡಿದರು. ಇದು ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು. ಸಿಖಂದರ್ ಕೇವಲ 95 ಎಸೆತಗಳಲ್ಲಿ 9 ಫೋರ್, 3 ಸಿಕ್ಸರ್ ಬಾರಿಸಿ 115 ರನ್ ಸಿಡಿಸಿದರು.

ಇದಕ್ಕೂ ಮುನ್ನ ಮೊದಲ ಬ್ಯಾಟಿಂಗ್ ಮಾಡಿದ ಭಾರತ ತಂಡವು 50 ಓವರ್​ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 289 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಾಧನೆ ಮಾಡಿದ ಶುಭ್ಮನ್ ಗಿಲ್ 97 ಎಸೆತಗಳಲ್ಲಿ ಜೀವನಶ್ರೇಷ್ಠ 130 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು. ಇವರಿಗೆ ಸಾಥ್ ನೀಡಿದ ಇಶಾನ್ ಕಿಶನ್ 61 ಎಸೆತಗಳಲ್ಲಿ 6 ಬೌಂಡರಿ ಬಾರಿಸಿ 50 ರನ್ ಗಳಿಸಿ ಮಿಂಚಿದರು. ಜಿಂಬಾಬ್ವೆ ಪರ ಬ್ರಾಡ್ ಇವಾನ್ಸ್ ಐದು ವಿಕೆಟ್ ಕಿತ್ತರು.

TV9 Kannada


Leave a Reply

Your email address will not be published.