Siddaramaiah: ಜಿಟಿ ದೇವೇಗೌಡ ನನ್ನನ್ನೇ ಚುನಾವಣೆಯಲ್ಲಿ ಸೋಲಿಸಿದ್ದ ಗಿರಾಕಿ; ಜಿಟಿಡಿ ಬಗ್ಗೆ ಸಿದ್ದರಾಮಯ್ಯ ಗುಣಗಾನ | Mysuru GT Deve Gowda Interested to Join Congress he is Always Welcome to our Party Siddaramaiah says


Siddaramaiah: ಜಿಟಿ ದೇವೇಗೌಡ ನನ್ನನ್ನೇ ಚುನಾವಣೆಯಲ್ಲಿ ಸೋಲಿಸಿದ್ದ ಗಿರಾಕಿ; ಜಿಟಿಡಿ ಬಗ್ಗೆ ಸಿದ್ದರಾಮಯ್ಯ ಗುಣಗಾನ

ಸಿದ್ದರಾಮಯ್ಯ

ಮೈಸೂರು: ಜಿಟಿ ದೇವೇಗೌಡ ಕಾಂಗ್ರೆಸ್​​ಗೆ ಬಂದಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ. ಜಿ.ಟಿ. ದೇವೇಗೌಡರಿಗೆ (GT Deve Gowda) ಕಾಂಗ್ರೆಸ್​ಗೆ ಬರುವುದಕ್ಕೆ ಮನಸ್ಸಿದೆ. ಆದರೆ, ಅವರಿನ್ನೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಲ್ಲ. ಅವರನ್ನು ತಮ್ಮ ಪಕ್ಷದಲ್ಲೇ ಉಳಿಸಿಕೊಳ್ಳಲು ದೇವೇಗೌಡರು (HD Deve Gowda), ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಪ್ರಯತ್ನ ಮಾಡುತ್ತಿದ್ದಾರೆ. ಜಿಟಿಡಿ (GT Deve Gowda) ನನ್ನ ರಾಜಕೀಯ ಎದುರಾಳಿ, ವೈಯಕ್ತಿಕ ದ್ವೇಷಿ ಅಲ್ಲ. ಅವರು ಕಾಂಗ್ರೆಸ್ ತತ್ವ, ಸಿದ್ಧಾಂತಗಳನ್ನು ಒಪ್ಪಿ ನಮ್ಮ ಪಕ್ಷಕ್ಕೆ ಬರುವುದಿದ್ದರೆ ಬರಲಿ. ಯಾರೇ ನಮ್ಮ ಕಾಂಗ್ರೆಸ್​​ ಪಕ್ಷಕ್ಕೆ ಬಂದರೂ ನಾವು ಸ್ವಾಗತಿಸುತ್ತೇವೆ ಎಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಬಳಿಕ ಮತ್ತೆ ನನಗೆ ಈ ಕ್ಷೇತ್ರಕ್ಕೆ ಬರುವುದಕ್ಕೆ ತುಂಬಾ ಬೇಸರ ಆಗಿತ್ತು. ಹಲವು ದಿನಗಳ ಬಳಿಕ ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದಿದ್ದೇನೆ. ಚುನಾವಣೆಯಲ್ಲಿ ನಾನು, ಜಿ.ಟಿ. ದೇವೇಗೌಡ ಪರಸ್ಪರ ಎದುರಾಗಿದ್ದೆವು. ಚುನಾವಣೆಯಲ್ಲಿ ನನ್ನನ್ನೇ ಸೋಲಿಸಿದ್ದ ಗಿರಾಕಿ ಅವರು. ಸೋತ ಬಳಿಕ ಇಬ್ಬರೂ ಒಂದೇ ವೇದಿಕೆಯಲ್ಲಿ ಕುಳಿತುಕೊಳ್ಳುವ ಬಗ್ಗೆ ಸಾಕಷ್ಟು ಕುತೂಹಲ ಇತ್ತು. ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತವನು, ಜಿ.ಟಿ. ದೇವೇಗೌಡರು ಗೆದ್ದಿದ್ದಾರೆ. ಜನರು ಕರೆದ ಮೇಲೆ ಒಂದೇ ವೇದಿಕೆಗೆ ಬರಲೇ ಬೇಕು. ಹಾಗಾಗಿ ಒಟ್ಟಿಗೇ ಕೂತಿದ್ದೇವೆ ಎಂದಿದ್ದಾರೆ.

ಮುಂದೆ ರಾಜಕೀಯ ಬೆಳವಣಿಗೆ ಏನೇನಾಗುತ್ತದೆ ಅಂತ ಗೊತ್ತಿಲ್ಲ. ಹೀಗೆಲ್ಲೆ ನನ್ನ ಕಂಡರೆ ಹೊಟ್ಟೆ ಕಿಚ್ಚು ಪಡುವವರೇ ಹೆಚ್ಚಾಗಿದ್ದಾರೆ. ಇನ್ನೂ ನೀವೆಲ್ಲಾ ನಾನು ಪ್ರಧಾನಿ ಆಗಬೇಕು ಎಂದು ಕೂಗಿದರೆ ಹೊಟ್ಟೆ ಕಿಚ್ಚು ಪಡುವವರು ಹೆಚ್ಚಾಗುತ್ತಾರೆ. ನಾನು ಸ್ವಾಭಿಮಾನ ಬಿಟ್ಟು ಯಾವತ್ತೂ ರಾಜಕೀಯ ಮಾಡಿಲ್ಲ, ಮಾಡುವುದು ಇಲ್ಲ ಎಂದು ಸಿದ್ದರಾಮಯ್ಯ ತಮ್ಮ ಎದುರಾಳಿಗಳಿಗೆ ತಿರುಗೇಟು ನೀಡಿದ್ದಾರೆ.

ಇನ್ನು, ಚಾಮುಂಡೇಶ್ವರಿ ಕ್ಷೇತ್ರದ ಕೂರ್ಗಳ್ಳಿಯಲ್ಲಿ ಟ್ರಸ್ಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡರು ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿದ್ದಾರೆ. ತಮ್ಮ ಭಾಷಣದುದ್ದಕ್ಕೂ ಸಿದ್ದರಾಮಯ್ಯರ ಬಗ್ಗೆ ಗುಣಗಾನ ಮಾಡಿದ ಜಿಟಿಡಿ, 1983ರಿಂದ ನಿರಂತರವಾಗಿ ನಾನು ಹಾಗೂ ಸಿದ್ದರಾಮಯ್ಯ ಜೊತೆಯಾಗಿ ಬೆಳೆದಿದ್ದೇವೆ. ಜೆಡಿಎಸ್ ಪಕ್ಷವನ್ನು‌ ತಳಮಟ್ಟದಿಂದ ಜತೆಯಾಗಿ ಕಟ್ಟಿದ್ದೇವೆ. ನಂತರದ ಘಟನಾವಳಿಗಳಿಂದ ಸಿದ್ದರಾಮಯ್ಯ ಪಕ್ಷ ಬಿಟ್ಟರು. ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಸಿದ್ದರಾಮಯ್ಯ ಸಿಎಂ ಆದರು. ಸಿದ್ದರಾಮಯ್ಯ ಎಲ್ಲ ಜವಾಬ್ದಾರಿಗಳನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಸಿದ್ದರಾಮಯ್ಯರಿಗೆ ವೀರಶೈವ ವಿರೋಧಿ ಎಂಬ ಪಟ್ಟ ಕಟ್ಟಿದ್ದರು. ಕೆಲವು ವೀರಶೈವ ಮುಖಂಡರನ್ನು ಬೆಳೆಸಿದ್ದೇ ಸಿದ್ದರಾಮಯ್ಯ. ದಲಿತರು, ಒಕ್ಕಲಿಗರು, ನಾಯಕರು, ವೀರಶೈವರು ಸೇರಿದಂತೆ ಎಲ್ಲ ಸಮುದಾಯವನ್ನು ಸಿದ್ದರಾಮಯ್ಯ ಪ್ರೀತಿಸುತ್ತಾರೆ ಎಂದು ಜಿ.ಟಿ. ದೇವೇಗೌಡ ಹೇಳಿದ್ದಾರೆ.

ಇದನ್ನೂ ಓದಿ: ನಾನೂ ದಲಿತ; ಅವಕಾಶ ವಂಚಿತರೆಲ್ಲರೂ ದಲಿತರು: ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ

ಭಾರತದ ಕೊವಿಡ್ ಲಸಿಕೆಯ ಸರ್ಟಿಫಿಕೆಟ್​ಗೆ 96 ದೇಶಗಳಲ್ಲಿ ಮನ್ನಣೆ; ಇನ್ನು ಭಾರತೀಯರಿಗೆ ವಿದೇಶ ಪ್ರಯಾಣ ಸುಲಭ

TV9 Kannada


Leave a Reply

Your email address will not be published. Required fields are marked *