Siddaramaiah Dance: ಲಂಬಾಣಿ ಮಹಿಳೆಯರ ಜೊತೆ ಹೆಜ್ಜೆ ಹಾಕಿದ ಸಿದ್ದರಾಮಯ್ಯ | Siddaramaiah dance with lambani women in vijayapura

Siddaramaiah Dance: ಲಂಬಾಣಿ ಮಹಿಳೆಯರ ಜೊತೆ ಹೆಜ್ಜೆ ಹಾಕಿದ ಸಿದ್ದರಾಮಯ್ಯ

ಲಂಬಾಣಿ ಮಹಿಳೆಯರ ಜೊತೆ ಹೆಜ್ಜೆ ಹಾಕಿದ ಸಿದ್ದರಾಮಯ್ಯ

ವಿಜಯಪುರ: ಸಿಂದಗಿ ಬೈಎಲೆಕ್ಷನ್ ಅಖಾಡ(Sindagi By Election) ಇಂದು ಮತ್ತಷ್ಟು ರಂಗೇರಿದೆ. ಮಾಜಿ ಸಿಎಂ ಸಿದ್ದರಾಮಯ್ಯ(siddaramaiah) ಪ್ರಚಾರಕ್ಕಾಗಿ ವಿಜಯಪುರಕ್ಕೆ ಆಗಮಿಸಿದ್ದು ಈ ವೇಳೆ ಅಭಿಮಾನಿಗಳು ಜಯಘೋಷ ಕೂಗಿದ್ದಾರೆ. ಸಿದ್ದರಾಮಯ್ಯ ಸಿಂದಗಿಯಲ್ಲಿ ಪ್ರಚಾರಕ್ಕೆ ತೆರಳುವ ಸಂದರ್ಭದಲ್ಲಿ ಮುಂದಿನ ಮುಖ್ಯಮಂತ್ರಿ ಸಿದ್ದರಾಯ್ಯ ಸಾಹೇಬ್ರಗೆ ಜಯ್ ಎಂದು ಅಭಿಮಾನಿಗಳು ಜಯಘೋಷ ಕೂಗಿ ಸ್ವಾಗತಿಸಿದ್ದಾರೆ.

ಲಂಬಾಣಿ ನೃತ್ಯ ಮಾಡಿದ ಸಿದ್ದರಾಮಯ್ಯ
ಸಿಂದಗಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಲಂಬಾಣಿ ಸಮಾಜದ ಮತಗಳನ್ನು ಸೆಳೆಯಲು ಕೈ ತಂತ್ರ ರೂಪಿಸಿದ್ದು ಇಂದು‌ ಸಿಂದಗಿ ಪಟ್ಟಣದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಲಂಬಾಣಿ ಸಮಾಜದ ಕಾರ್ಯಕರ್ತರ ಸಭೆ ನಡೆಯುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಸಭೆಯಲ್ಲಿ ಭಾಗಿಯಾಗಿದ್ದಾರೆ. ಕಲ್ಯಾಣ ಮಂಟಪದ ಹೊರಗೆ ಲಂಬಾಣಿ ಮಹಿಳೆಯರು ನೃತ್ಯ ಮಾಡಿ ಗಮನ ಸೆಳೆದಿದ್ದು ಲಂಬಾಣಿ ನೃತ್ಯಕ್ಕೆ ಸಿದ್ದರಾಮಯ್ಯ ಸಾಥ್ ನೀಡಿದ್ದಾರೆ.

ಲಂಬಾಣಿ ಸಮಾವೇಶದಲ್ಲಿ ಭಾಗಿಯಾಗಲು ಆಗಮಿಸಿದ ಸಿದ್ದರಾಮಯ್ಯ, ಶಾಸಕ ಭೀಮಾನಾಯ್ಕ್ ಮನವಿ ಮೇರೆಗೆ ಕೈಗಳನ್ನು ಮೇಲತ್ತಿ ಹೆಜ್ಜೆ ಹಾಕಿದ್ರು. ಇನ್ನು ಸಮಾವೇಶದಲ್ಲಿ ಭಾಗಿಯಾದ ಮಾಜಿ ಸಿಎಂ ಸಿದ್ದರಾಮಯ್ಯಗೆ ಲಂಬಾಣಿ ಸಂಸ್ಕೃತಿ ಬಿಂಬಿಸೋ ಶಾಲ್ ಹಾಕಿ ಸಮಾಜದ ಜನರು ಸಂತ್ಕರಿಸಿದ್ರು.

ಚುನಾವಣೆ ಇದ್ದಾಗ ಎದುರಾಳಿಗಳ ವಿರುದ್ಧ ಪ್ರಚಾರ ಮಾಡಲೇಬೇಕು
ಇನ್ನು ಪ್ರಾದೇಶಿಕ ಪಕ್ಷಗಳನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಮುಗಿಸಲು ಮುಂದಾಗಿವೆ ಎಂಬ ಮಾಜಿ ಪಿಎಂ ದೇವೇಗೌಡರ ಆರೋಪಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಸುಮ್ಮನೆ ಸುಳ್ಳು ಹೇಳುತ್ತಿದ್ದಾರೆ ನಾವ್ಯಾಕೆ ಪ್ರಾದೇಶಿಕ ಪಕ್ಷಗಳನ್ನು ಮುಗಿಸೋಕೆ ಹೋಗೋಣ. ಅವರ ನಡವಳಿಕೆಗಳಿಂದ ಅವರ ತತ್ವ ಸಿದ್ಧಾಂತ ಇಲ್ಲದೇ ಅವರೇ ಮುಗಿದು ಹೋಗುತ್ತಾರೆ. ನಾವ್ಯಾರು ಅವರನ್ನು ಮುಗಿಸೋಕೆ ಹೋಗಲ್ಲಾ ಎಂದು ಸಿದ್ದು ಟಾಂಗ್ ಕೊಟ್ಟಿದ್ದಾರೆ.

ಚುನಾವಣೆ ಇದ್ದಾಗ ಎದುರಾಳಿಗಳ ವಿರುದ್ಧ ಪ್ರಚಾರ ಮಾಡಲೇಬೇಕು. ನಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡಲೇಬೇಕು ಎಂದರು. ಹಾಗೂ ನಂಬಿಕೆಗೆ ಕಾಂಗ್ರೆಸ್ ಪಕ್ಷ ಅರ್ಹವಲ್ಲವೆಂಬ ಹೆಚ್ಡಿ ರೇವಣ್ಣ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಿದ್ದರಾಮಯ್ಯ, ಅವರ ತಂದೆ ಇದ್ದರಲ್ಲಾ ದೇವೇಗೌಡರು ಅವರು ಕಾಂಗ್ರೆಸ್ ನಲ್ಲಿ ಇದ್ದವರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಜನರ ನಂಬಿಕೆಗೆ ಅರ್ಹವಲ್ಲವಾ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಬಿಜೆಪಿ, ಜೆಡಿಎಸ್​ಗೆ ನಾನೇ ಟಾರ್ಗೆಟ್; ಇಬ್ಬರಿಗೂ ನನ್ನನ್ನು ಕಂಡರೆ ಭಯ: ಸಿದ್ದರಾಮಯ್ಯ ಹೇಳಿಕೆ

TV9 Kannada

Leave a comment

Your email address will not be published. Required fields are marked *