ನೀವು ಕುಡಿಯುವ ಹಾಲು ಶೀತ, ಆಯಾಸ, ಉರಿಯೂತ ಮತ್ತು ಟೈಪ್ 2 ಮಧುಮೇಹದಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರಾದ ಅಂಜಲಿ ಮುಖರ್ಜಿ ಹೇಳುತ್ತಾರೆ.

ಸಾಂದರ್ಭಿಕ ಚಿತ್ರ
ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಹಾಗೆ ಹಾಲು(Milk) ಆರೋಗ್ಯಕ್ಕೆ ಉತ್ತಮ. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ನಿಮ್ಮ ಮೂಳೆಗಳನ್ನು ಬಲಗೊಳಿಸುತ್ತದೆ. ಆದರೆ ನೀವು ಹಾಲು ಕುಡಿಯುವುದರಿಂದ ಅನಾರೋಗ್ಯಕ್ಕೂ ಕಾರಣವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ನೀವು ಕುಡಿಯುವ ಹಾಲು ಶೀತ, ಆಯಾಸ, ಉರಿಯೂತ ಮತ್ತು ಟೈಪ್ 2 ಮಧುಮೇಹದಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.ಅನೇಕ ಅಧ್ಯಯನಗಳು ಹಾಲು ತೂಕನಷ್ಟಕ್ಕೆ ಸಹಾಯಕವಾಗಿದೆ ಮತ್ತು ದೃಢವಾದ ಮೂಳೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿವೆ.
ನೀವು ಕುಡಿಯುವ ಹಾಲು ಶೀತ, ಆಯಾಸ, ಉರಿಯೂತ ಮತ್ತು ಟೈಪ್ 2 ಮಧುಮೇಹದಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರಾದ ಅಂಜಲಿ ಮುಖರ್ಜಿ ಹೇಳುತ್ತಾರೆ. ಹಾಲಿನಿಂದ ಯಾವ ರೀತಿ ದೇಹದ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂದು ಅಂಜಲಿಯವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಮಾಹಿತಿ ಇಲ್ಲಿದೆ.
ತಾಜಾ ಸುದ್ದಿ
ಅಂಜಲಿಯವರ ಪ್ರಕಾರ ಸಾಮಾನ್ಯ ಹಸುವಿನ ಹಾಲಿನಲ್ಲಿ ಕಂಡುಬರುವ A1-ಬೀಟಾ-ಕೇಸಿನ್ ಎಂಬ ಪ್ರೋಟೀನ್ನಿಂದ ಕೆಲವು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಈ ಪ್ರೋಟೀನ್ಗಳು ಶೀತ, ಕಫ, ಸೈನಸ್, ಆಯಾಸ, ಉರಿಯೂತ, ದೇಹದ ಬಿಗಿತ, ಟೈಪ್ 2 ಮಧುಮೇಹ ಮತ್ತು ಇತರ ನರವೈಜ್ಞಾನಿಕ ಸಮಸ್ಯೆಗಳಂತಹ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.