Sidhu Moosewala murder ಸಿಧು ಮೂಸೆ ವಾಲಾ ಹತ್ಯೆ ಪ್ರಕರಣ: ಸೆಲ್ಫಿ ಕ್ಲಿಕ್ಕಿಸಿದ್ದ ಅಭಿಮಾನಿ ಸೇರಿ 8 ಮಂದಿ ಬಂಧನ | Sidhu Moosewala murder Punjab Police have arrested at least eight people


Sidhu Moosewala murder ಸಿಧು ಮೂಸೆ ವಾಲಾ ಹತ್ಯೆ ಪ್ರಕರಣ: ಸೆಲ್ಫಿ ಕ್ಲಿಕ್ಕಿಸಿದ್ದ ಅಭಿಮಾನಿ ಸೇರಿ 8 ಮಂದಿ ಬಂಧನ

ಸಿಧು ಮೂಸೆ ವಾಲಾ

ಕೆನಡಾ ಮೂಲಕ ಗ್ಯಾಂಗ್​​ಸ್ಟರ್ ಗೋಲ್ಡಿ ಬ್ರಾರ್ ಮತ್ತು ಸಚಿನ್ ಥಾಪನ್ ನಿರ್ದೇಶನದ ಮೇರೆಗೆ ಸಂದೀಪ್ ಅಲಿಯಾಸ್ ಕೇಕ್ಡಾ, ಮೂಸೆ ವಾಲಾ ಮೇಲೆ ನಿಗಾ ಇರಿಸಿದ್ದ ಎಂದು ಆಂಟಿ ಗ್ಯಾಂಗ್​​ಸ್ಟರ್ ಟಾಸ್ಕ್ ಫೋರ್ಸ್ ಎಡಿಜಿಪಿ…

ದೆಹಲಿ: ಮೇ 29ರಂದು ಪಂಜಾಬಿ ಗಾಯಕ, ರಾಜಕಾರಣಿ ಶುಭ್​​ದೀಪ್ ಸಿಂಗ್ ಅಲಿಯಾಸ್ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣಕ್ಕೆ  (Sidhu Moosewala murder) ಸಂಬಂಧಿಸಿದಂತೆ ಪಂಜಾಬ್ ಪೊಲೀಸರು (Punjab Police) ಮಂಗಳವಾರದವರೆಗೆ 8 ಮಂದಿಯನ್ನು ಬಂಧಿಸಿದ್ದಾರೆ. ಮೂಸೆ ವಾಲಾ ಅವರನ್ನು ಹತ್ಯೆ ಮಾಡುವುದಕ್ಕಾಗಿ ಲಾಜಿಸ್ಟಿಕ್ ಬೆಂಬಲವನ್ನು ಒದಗಿಸಿದ, ನಿಗಾ ವಹಿಸಿದ ಮತ್ತು ಶೂಟರ್‌ಗಳಿಗೆ ಆಶ್ರಯ ನೀಡಿರುವ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಮೇ 29ರಂದು ಸಿಧು ಮೂಸೆ ವಾಲಾ ತನ್ನ ನೆರೆಮನೆಯಾತ ಗುರುವಿಂದರ್ ಸಿಂಗ್ ಮತ್ತು ಸಂಬಂಧಿ ಗುರುಪ್ರೀತ್ ಸಿಂಗ್ ಜತೆ ಸಂಜೆ ಸುಮಾರು 4.30ರ ವೇಳೆಗೆ ಮನೆಯಿಂದ ಹೊರಟಿದ್ದು ಅಪರಿಚಿತರ ಗುಂಡಿಗೆ ಬಲಿಯಾಗಿದ್ದರು. ಮೂಸೆ ವಾಲಾ ಅವರು ಬುಲೆಟ್ ಪ್ರೂಫ್ ರಹಿತ ಮಹೀಂದ್ರಾ ಥಾರ್ (Mahindra Thar) ವಾಹನವನ್ನು ಚಲಾಯಿಸುತ್ತಿದ್ದರು. ಬಂಧಿತರನ್ನು ಸಂದೀಪ್ ಸಿಂಗ್ ಅಲಿಯಾಸ್ ಹರ್ಯಾಣ ಸಿರ್ಸಾದ ಕೇಕ್ಡಾ, ಮನ್​​ಪ್ರೀತ್ ಸಿಂಗ್ ಅಲಿಯಾಸ್ ಬಟಿಂಡಾ ತಲವಂಡಿ ಸಬೋದ ಮನ್ನಾ, ಫರೀದ್ ಕೋಟ್ ಧೈಪಾಯಿಯ ಮನ್​​ಪ್ರೀತ್ ಬವು, ಅಮೃತ್ ಸರ್ ದೊಡೆ ಕಾಲ್ಸಿಯಾದ ಸಂರಾಜ್ ಮಿಂಟು, ಹರ್ಯಾಣದ ತಖತ್​​ ಮಾಲ್​​ನ ಪ್ರಭ್​​ದೀಪ್ ಸಿಧು ಅಲಿಯಾಸ್ ಪಬ್ಬೀ, ಹರ್ಯಾಣ ಸೋನಿಪತ್​​ನ ರೆವಾಲಿ ಗ್ರಾಮದ ಮೊನು ಡಗರ್, ಫತೇಹಬಾದ್​​ನ ಪವನ್ ಬಿಷ್ಣೋಯ್ ಮತ್ತು ನಸೀಬ್ ಎಂದುಗುರುತಿಸಲಾಗಿದೆ. ಈ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ನಾಲ್ವರು ಶೂಟರ್​​ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಪಂಜಾಬ್ ಪೊಲೀಸರ ವಕ್ತಾರರು ಹೇಳಿದ್ದಾರೆ.

ಕೆನಡಾ ಮೂಲಕ ಗ್ಯಾಂಗ್​​ಸ್ಟರ್ ಗೋಲ್ಡಿ ಬ್ರಾರ್ ಮತ್ತು ಸಚಿನ್ ಥಾಪನ್ ನಿರ್ದೇಶನದ ಮೇರೆಗೆ ಸಂದೀಪ್ ಅಲಿಯಾಸ್ ಕೇಕ್ಡಾ, ಮೂಸೆ ವಾಲಾ ಮೇಲೆ ನಿಗಾ ಇರಿಸಿದ್ದ ಎಂದು ಆಂಟಿ ಗ್ಯಾಂಗ್​​ಸ್ಟರ್ ಟಾಸ್ಕ್ ಫೋರ್ಸ್ ಎಡಿಜಿಪಿ ಪ್ರಮೋದ್ ಬಾನ್ ಹೇಳಿದ್ದಾರೆ. ಅಭಿಮಾನಿ ಎಂಬ ಸೋಗಿನಲ್ಲಿ ಹತ್ಯೆ ಗಿಂತ ಮುಂಚೆ ಮೂಸೆ ವಾಲಾ ಬಳಿಗೆ ಹೋಗಿದ್ದ ಕೇಕ್ಡಾ ಆತನ ಜತೆ ಸೆಲ್ಫಿ ಕ್ಲಿಕ್ಕಿಸಿದ್ದ ಎಂದು ಬಾನ್ ಹೇಳಿದ್ದಾರೆ.

“ಕೇಕ್ಡಾ ಅವರು ವಿದೇಶದಿಂದ ಕಾರ್ಯನಿರ್ವಹಿಸುತ್ತಿದ್ದ ಶೂಟರ್‌ಗಳು ಮತ್ತು ಹ್ಯಾಂಡ್ಲರ್‌ಗಳಿಗೆ ಗಾಯಕ ತನ್ನ ಭದ್ರತಾ ಸಿಬ್ಬಂದಿಯೊಂದಿಗೆ ಬಂದಿದ್ದಾರೆ ಎಂದು ಹೇಳಿದರು. ಅವರಿಗೆ ಕಾರಿನಲ್ಲಿ ಇರುವವರ ಸಂಖ್ಯೆ, ವಾಹನಗಳ ವಿವರಗಳು ಮತ್ತು ಮೂಸೆ ವಾಲಾ ಅವರು ಅಲ್ಲದ ಬುಲೆಟ್ ಪ್ರೂಫ್ ಅಲ್ಲದ ವಾಹನದಲ್ಲಿ ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿ ನೀಡಿದ್ದರು ಎಂದಿದ್ದಾರೆ ಬಾನ್. ಪಂಜಾಬಿ ಗಾಯಕ ಮೂಸೆವಾಲಾ ಕೊಲೆ ಪ್ರಕರಣ
ಪ್ರಕರಣದ ಆರೋಪಿ ಕೇಕ್ಡಾನನ್ನು 7 ದಿನ  ಪೊಲೀಸ್  ಕಸ್ಟಡಿಯಲ್ಲಿರಿಸಲಾಗುವುದು.

TV9 Kannada


Leave a Reply

Your email address will not be published.