Signal Problem: ನೀವಿರುವ ಜಾಗದಲ್ಲಿ ಸರಿಯಾಗಿ ನೆಟ್​ವರ್ಕ್​ ಸಿಗುತ್ತಿಲ್ವಾ?: ಇಲ್ಲಿದೆ ಸಿಂಪಲ್ ಈ ಟ್ರಿಕ್ | Network Issue Here is the Tech Tips Tricks to Improve Your Mobile Signal Strength Mainly for work from home workers


ಸದ್ಯ ಹೆಚ್ಚಿನವರಿಗೆ ವರ್ಕ್ ಫ್ರಂ ಹೋಮ್ ಮನೆಯಿಂದಲೇ ಕೆಲಸ ಮಾಡುದ ಪ್ರಕ್ರಿಯೆ ಮುಂದುವರೆದಿದೆ. ಅನೇಕರು ಸಿಟಿ ಬಿಟ್ಟು ತಮ್ಮ ತಮ್ಮ ಊರುಗಳಲ್ಲಿ ಮನೆಯಿಂದಲೇ ಲ್ಯಾಪ್​​ಟಾಪ್​ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಹೆಚ್ಚಿನವರು ಎದುರಿಸುತ್ತಿರುವ ಪ್ರಮುಖ ತೊಂದರೆ ಎಂದರೆ ನೆಟ್​ವರ್ಕ್.

ದೇಶದಲ್ಲಿ ಕೊರೊನಾ ವೈರಸ್ (Corona Virus) 4ನೇ ಅಲೆ ನಿಧಾನವಾಗಿ ಶುರುವಾಗುತ್ತಿದೆ. ಹೀಗಾಗಿ ಹೆಚ್ಚಿನವರಿಗೆ ವರ್ಕ್ ಫ್ರಂ ಹೋಮ್ ಮನೆಯಿಂದಲೇ ಕೆಲಸ ಮಾಡುದ ಪ್ರಕ್ರಿಯೆ ಮುಂದುವರೆದಿದೆ. ಅನೇಕರು ಸಿಟಿ ಬಿಟ್ಟು ತಮ್ಮ ತಮ್ಮ ಊರುಗಳಲ್ಲಿ ಮನೆಯಿಂದಲೇ ಲ್ಯಾಪ್​​ಟಾಪ್​ನಿಂದ (Laptop) ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಹೆಚ್ಚಿನವರು ಎದುರಿಸುತ್ತಿರುವ ಪ್ರಮುಖ ತೊಂದರೆ ಎಂದರೆ ನೆಟ್​ವರ್ಕ್. ಗುಡ್ಡಗಾಡು ಪ್ರದೇಶ, ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಸರಿಯಾದ ನೆಟ್‌ವರ್ಕ್‌ (Network Problem) ಸಿಗುವುದಿಲ್ಲ. ಈ ತೊಂದರೆ ಅನೇಕ ಜನರು ಅನುಭವಿಸುತ್ತಿದ್ದಾರೆ. ಎಲ್ಲೆಡೆ ನೆಟ್‌ವರ್ಕ್ ಸ್ಥಾಪನೆಯ ಕಾರ್ಯ ಕಷ್ಟ ಆಗಿರುವುದರಿಂದ ಟೆಲಿಕಾಂ ಕಂಪನಿಗಳ ಸೇವೆ ಎಲ್ಲೆಡೆ ತಲುಪಲು ಸಾಧ್ಯವಾಗುವುದಿಲ್ಲ. ಯಾವುದೇ ಪ್ರದೇಶದಲ್ಲಿ ಸರಿಯಾಗಿ ಸಿಗ್ನಲ್‌ ಸಿಗುತ್ತಿಲ್ಲವಾದರೆ ನಿಮ್ಮ ಮೊಬೈಲ್ ನೆಟ್​ವರ್ಕ್ ಅನ್ನು ಹೆಚ್ಚಿಸಲು ಕೆಲವೊಂದು ಟ್ರಿಕ್​​​​ಗಳಿವೆ. ಅದು ಹೇಗೆ?, ಏನು ಆ ಟ್ರಿಕ್ ಎಂಬ ಬಗೆಗಿನ ಮಾಹಿತಿ ಇಲ್ಲಿದೆ ಓದಿ.

ಸ್ಪೆಕ್ಟ್ರಮ್ ಬದಲಾಯಿಸಿ: ಟೆಲಿಕಾಂನಲ್ಲಿ 4ಜಿ, 3ಜಿ ಮತ್ತು 2ಜಿ ನೆಟ್‌ವರ್ಕ್, ಬೇರೆ ಬೇರೆ ಸ್ಪೆಕ್ಟ್ರಮ್‌ಗಳಲ್ಲಿ ಕಾರ್ಯನಿರ್ವಹಣೆ ನೀಡುತ್ತವೆ. ಇವುಗಳಲ್ಲಿ 2ಜಿ, 3ಜಿ ಸೇವೆ ಬಹುತೇಕ ಎಲ್ಲೆಡೆ ಲಭ್ಯವಿರುವುದರಿಂದ ಸ್ಮಾರ್ಟ್‌ಫೋನ್‌ನಲ್ಲಿ 2ಜಿ,3ಜಿ ಕನೆಕ್ಟಿವಿಟಿಗೆ ಬದಲಾದರೆ ಹೆಚ್ಚು ನೆಟ್‌ವರ್ಕ್ ಸಿಗುತ್ತದೆ. ಹಾಗೆಯೇ ಬಹುತೇಕರು ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಉಪಯೋಗ ಮಾಡುತ್ತಿರುತ್ತಾರೆ. ಹಾಗಾಗಿ, ಒಂದು ಕಂಪನಿ ಸಿಮ್​ನ ಸಿಗ್ನಲ್‌ ಸಿಗುತ್ತಿಲ್ಲವೆಂದಾದಲ್ಲಿ ಆ ನಂಬರ್‌ಗೆ ಬರಬೇಕಾದ ಎಲ್ಲಾ ಕರೆಗಳನ್ನು ನಿಮ್ಮದೇ ಮತ್ತೊಂದು ನಂಬರ್‌ಗೆ ಫಾರ್ವಡ್ ಮಾಡಿ ಸಮಸ್ಯೆಯಿಂದ ಮುಕ್ತವಾಗಬಹುದು.

Redmi Note 10S: ಬಜೆಟ್ ಬೆಲೆಯ ಈ ಫೋನಿನ ದರದಲ್ಲಿ ಮತ್ತಷ್ಟು ಕಡಿತ: ರೆಡ್ಮಿಯಿಂದ ಬಂಫರ್ ಆಫರ್

ನೆಟ್‌ವರ್ಕ್ ರಿಸೀವರ್ ಖರೀದಿಸಿ: ಇದು ಪ್ರಯಾಣದ ವೇಳೆಯಲ್ಲಿ ಹೆಚ್ಚು ಉಪಯೋಗಕ್ಕೆ ಬರದಿರಬಹುದು. ಆದರೆ, ಮನೆಯ ಒಳಗೆ ನೆಟ್‌ವರ್ಕ್ ಸರಿಯಾಗಿ ಸಿಗುತ್ತಿಲ್ಲ ಎಂದರೆ ನೆಟ್‌ವರ್ಕ್ ರಿಸೀವರ್ ಬಹಳಷ್ಟು ಪ್ರಯೋಜನಕಾರಿ. ಹಾಗಾಗಿ, ಮನೆಯಲ್ಲಿ ಉತ್ತಮ ಸಿಗ್ನಲ್‌ ಪಡೆಯಲು ನೆಟ್‌ವರ್ಕ್ ರಿಸೀವರ್ ಖರೀದಿಸಿದರೆ ಉತ್ತಮ.

ಮೊಬೈಲ್ ಕವರ್ ಸಹ ಪ್ರಾಬ್ಲಮ್: ಹೌದು, ಅಚ್ಚರಿಯಾದರೂ ಇದು ಸತ್ಯ. ತಜ್ಞರ ಪ್ರಕಾರ ಮೊಬೈಲ್ ಮೇಲೆ ರಕ್ಷಣೆಗೆ ಹಾಕುವ ಕವರ್ ಸಹ ಸಿಗ್ನಲ್​ಗೆ ತೊಂದರೆ ಅಡಚಣೆ ಉಂಟುಮಾಡುತ್ತದಂತೆ. ಹಾಗಾಗಿ, ನೆಟ್‌ವರ್ಕ್ ಕ್ಷಿಣವಾಗಿರುವ ಪ್ರದೇಶದಲ್ಲಿ ಮೊಬೈಲ್ ಕವರ್ ತೆಗೆದು ಒಮ್ಮೆ ಟ್ರೈ ಮಾಡಿನೋಡಿ.

TV9 Kannada


Leave a Reply

Your email address will not be published.