Sikandar Raza: ಟೀಮ್ ಇಂಡಿಯಾ ವಿರುದ್ದ ಅಬ್ಬರಿಸಿ ದಾಖಲೆ ಬರೆದ ಸಿಕಂದರ್ ರಾಜಾ..! | Zimbabwe player sikandar raza 3 centuries while chasing target in august 2022


Sikandar Raza: 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಾಜಾ ಅನುಭವಿ ಟೀಮ್ ಇಂಡಿಯಾ ಬೌಲರ್​ಗಳ ಬೆಂಡೆತ್ತಿದ್ದರು. ಅಲ್ಲದೆ ನಿರಾಯಾಸವಾಗಿ ಬ್ಯಾಟ್ ಬೀಸಿ ಕೇವಲ 89 ಎಸೆತಗಳಲ್ಲಿ ಶತಕ ಪೂರೈಸಿದರು.

ಹರಾರೆಯ ಸ್ಪೋರ್ಟ್ಸ್​ ಕ್ಲಬ್ ಮೈದಾನದಲ್ಲಿ ಸೋಮವಾರ ನಡೆದ ಭಾರತದ ವಿರುದ್ದದ ಪಂದ್ಯದಲ್ಲಿ ಜಿಂಬಾಬ್ವೆ (IND vs ZIM)  ಬ್ಯಾಟರ್ ಸಿಕಂದರ್ ರಾಜಾ (Sikandar Raza) ಅಕ್ಷರಶಃ ಅಬ್ಬರಿಸಿದ್ದರು. ಅದರಲ್ಲೂ ಒಂದು ಹಂತದಲ್ಲಿ ಟೀಮ್ ಇಂಡಿಯಾಗೆ ಸೋಲಿನ ಭಯ ಹುಟ್ಟಿಸಿದ್ದರು. ಭಾರತ ತಂಡದ ನೀಡಿದ 290 ರನ್​ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಜಿಂಬಾಬ್ವೆ ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಸಿಕಂದರ್ ರಾಜಾ ಅವರ ವಿರೋಚಿತ ಏಕಾಂಗಿ ಹೋರಾಟ ಇಡೀ ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಯಿತು.

5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಾಜಾ ಅನುಭವಿ ಟೀಮ್ ಇಂಡಿಯಾ ಬೌಲರ್​ಗಳ ಬೆಂಡೆತ್ತಿದ್ದರು. ಭಾರತೀಯ ಬೌಲರ್​ಗಳ ಮುಂದೆ ನಿರಾಯಾಸವಾಗಿ ಬ್ಯಾಟ್ ಬೀಸಿದ ಜಿಂಬಾಬ್ವೆಯ ಈ ಆಟಗಾರ 89 ಎಸೆತಗಳಲ್ಲಿ ಶತಕ ಪೂರೈಸಿ ಟೀಮ್ ಇಂಡಿಯಾಗೆ ಸೋಲಿನ ಭಯ ಹುಟ್ಟಿಸಿದ್ದರು. ಆದರೆ ಅಂತಿಮ ಹಂತದಲ್ಲಿ ಎಡವಿದ ರಾಜಾ 95 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 9 ಫೋರ್​ನೊಂದಿಗೆ 115 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಜಿಂಬಾಬ್ವೆ ತಂಡವು 13 ರನ್​ಗಳಿಂದ ವಿರೋಚಿತ ಸೋಲೊಪ್ಪಿಕೊಂಡಿತು.

ವಿಶೇಷ ಎಂದರೆ ಈ ಭರ್ಜರಿ ಶತಕದೊಂದಿಗೆ ಸಿಕಂದರ್ ರಾಜಾ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ವಿಶೇಷ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಸಚಿನ್ 1998 ರಲ್ಲಿ ಚೇಸಿಂಗ್​ ಮಾಡುವಾಗ 3 ಶತಕಗಳನ್ನು ಬಾರಿಸಿ ಮಿಂಚಿದ್ದರು. ಇದೀಗ ರಾಜಾ ಕೂಡ ಒಂದೇ ವರ್ಷದಲ್ಲಿ ಚೇಸಿಂಗ್ ವೇಳೆ ಮೂರು ಸೆಂಚುರಿ ಸಿಡಿಸಿದ್ದಾರೆ.

ಭಾರತದ ವಿರುದ್ದದ ಸರಣಿಗೂ ಮುನ್ನ ಸಿಕಂದರ್ ರಾಜಾ ಬಾಂಗ್ಲಾದೇಶ್ ವಿರುದ್ದ 2 ಸೆಂಚುರಿ ಬಾರಿಸಿದ್ದರು. ಬಾಂಗ್ಲಾ ವಿರುದ್ದದ 2 ಪಂದ್ಯಗಳಲ್ಲಿ ಚೇಸಿಂಗ್ ವೇಳೆಯೇ ಅಜೇಯ135 ರನ್ ಹಾಗೂ ಅಜೇಯ 117 ರನ್ ಬಾರಿಸಿದ್ದ ರಾಜಾ ಇದೀಗ ಟೀಮ್ ಇಂಡಿಯಾ ವಿರುದ್ದ 130 ರನ್​ ಸಿಡಿಸಿದ್ದಾರೆ.

ಈ ಮೂಲಕ ಒಂದೇ ವರ್ಷದಲ್ಲಿ ಚೇಸಿಂಗ್ ವೇಳೆ 3 ಭರ್ಜರಿ ಶತಕ ಸಿಡಿಸಿದ ಸಚಿನ್ ತೆಂಡೂಲ್ಕರ್ ಅವರ ವಿಶೇಷ ದಾಖಲೆಯನ್ನು ಸಿಕಂದರ್ ರಾಜಾ ಸರಿಗಟ್ಟಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಜಿಂಬಾಬ್ವೆ ತಂಡದ ಮೊದಲ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಸದ್ಯ ಭರ್ಜರಿ ಫಾರ್ಮ್​ನಲ್ಲಿರುವ ಸಿಕಂದರ್ ರಾಜಾ ಕಳೆದ 12 ಇನ್ನಿಂಗ್ಸ್‌ಗಳಲ್ಲಿ 61.5 ಸರಾಸರಿಯಲ್ಲಿ 615 ರನ್ ಗಳಿಸಿದ್ದಾರೆ. ಈ ವೇಳೆ 2 ಅರ್ಧಶತಕ ಮತ್ತು 3 ಶತಕಗಳನ್ನು ಬಾರಿಸಿರುವುದು ವಿಶೇಷ.

TV9 Kannada


Leave a Reply

Your email address will not be published.