Simon Katich: ಸನ್​ರೈಸರ್ಸ್ ತಂಡದಲ್ಲಿ ಸಂಚಲನ: ಹರಾಜಿನ ಬೆನ್ನಲ್ಲೇ ಕೊಚ್ ಹುದ್ದೆ ತ್ಯಜಿಸಿ ಹೊರ ನಡೆದ ಕ್ಯಾಟಿಚ್ | Simon Katich has quit as the assistant coach of the Sunrisers Hyderabad SRH


Simon Katich: ಸನ್​ರೈಸರ್ಸ್ ತಂಡದಲ್ಲಿ ಸಂಚಲನ: ಹರಾಜಿನ ಬೆನ್ನಲ್ಲೇ ಕೊಚ್ ಹುದ್ದೆ ತ್ಯಜಿಸಿ ಹೊರ ನಡೆದ ಕ್ಯಾಟಿಚ್

Simon Katich and Sunrisers Hyderabad

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಗಾಗಿ ಇತ್ತೀಚೆಗಷ್ಟೆ ನಡೆದ ಐಪಿಎಲ್ 2022 ಮೆಗಾ ಹರಾಜಿನಲ್ಲಿ (IPL 2022 Mega Auction) ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಕೆಲ ಸ್ಟಾರ್ ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಆದರೆ, ಇದೀಗ ತಂಡಕ್ಕೆ ದೊಡ್ಡ ಆಘಾತ ಉಂಟಾಗಿದೆ. ಹೈದರಾಬಾದ್ ತಂಡದಲ್ಲಿ ಬಿರುಗಾಳಿ ಎಬ್ಬಿದ್ದು ಸಹಾಯಕ ಕೋಚ್ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಸೈಮನ್ ಕ್ಯಾಟಿಚ್ (Simon Katich) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕಳೆದ ಡಿಸೆಂಬರ್​ನಲ್ಲಿ ಎಸ್​ಆರ್​ಹೆಚ್ (SRH) ಫ್ರಾಂಚೈಸಿ ಸೈಮನ್ ಕ್ಯಾಟಿಚ್ ಅವರನ್ನು ಹೈದರಾಬಾದ್ ತಂಡದ ಸಹಾಯಕ ಕೋಚ್ ಆಗಿ ಆಯ್ಕೆ ಮಾಡಿತ್ತು. ಆದರೀಗ ಮೆಗಾ ಹರಾಜು  ಮುಕ್ತಾಯವಾದ ಕೆಲವೇ ದಿನಗಳನ್ನು ಇವರು ಈರೀತಿ ನಿರ್ಧಾರ ತೆಗೆದುಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಮೂಲಗಳ ಪ್ರಕಾರ, ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಹರಾಜಿಗೆ ಸಂಬಂದ ಪಟ್ಟಂತೆ ಯಾವುದೇ ಪೂರ್ವ ಯೋಜನೆ ಮಾಡದೆ ಕಡೆಗಣಿಸಿದ ಕಾರಣ ಕ್ಯಾಟಿಚ್ ಅವರು ಸಹಾಯಕ ಕೋಚ್ ಸ್ಥಾನಕ್ಕೆ ಗುಡ್ ಬೈ ಹೇಳಿದ್ದಾರೆ ಎಂದು ಹೇಳಲಾಗಿದೆ. ಕಳೆದ ಸೀಸಸ್​ನಲ್ಲಿ ಇವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್‌ ಆಗಿದ್ದರು. ಆದರೆ, ಐಪಿಎಲ್ 2021 ಮುಗಿದ ಬೆನ್ನಲ್ಲೆ ವೈಯಕ್ತಿಕ ಕಾರಣಗಳಿಂದ ಸೈಮನ್‌ ಕ್ಯಾಟಿಚ್‌ ಆರ್‌ಸಿಬಿ ತಂಡದ ಮುಖ್ಯ ಕೋಚ್‌ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಐಪಿಎಲ್ 2022 ಮೆಗಾ ಹರಾಜಿಗೂ ಮುನ್ನವೇ ಸನ್​ರೈಸರ್ಸ್ ತಂಡದಲ್ಲಿ ಭಾರೀ ದೊಡ್ಡ ಬೆಳವಣಿಗೆಗಳು ನಡೆದಿದ್ದವು. ತಂಡದ ಸ್ಟಾರ್ ಆಟಗಾರನಾಗಿದ್ದ ಡೇವಿಡ್ ವಾರ್ನರ್ ಅವರನ್ನು ಉಳಿಸಿಕೊಳ್ಳಲು ಆಗದೇ ಇದ್ದಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಬಳಿಕ ಸನ್ ರೈಸರ್ಸ್ ಹೈದರಾಬಾದ್ ವೆಸ್ಟ್ ಇಂಡೀಸ್ ಬ್ಯಾಟಿಂಗ್ ದೈತ್ಯ ಬ್ರಿಯಾನ್ ಲಾರಾ ಅವರನ್ನು ತಂಡದ ಕಾರ್ಯತಂತ್ರದ ಸಲಹೆಗಾರ ಮತ್ತು ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಿತ್ತು. ಅಲ್ಲದೆ ದಕ್ಷಿಣ ಆಫ್ರಿಕದ ಮಾಜಿ ಬೌಲರ್ ಡೇಲ್ ಸ್ಟೇನ್ ಅವರು ಎಸ್ ಆರ್​ಎಚ್ ತಂಡದ ವೇಗದ ಬೌಲಿಂಗ್ ಕೋಚ್ ಆಗಿ ಪ್ರಕಟ ಮಾಡಿತ್ತು. ಟಾಮ್ ಮೂಡಿ ಅವರು ತಂಡದ ಮುಖ್ಯ ಕೋಚ್ ಆಗಿದ್ದಾರೆ.

ಉಳಿದಂತೆ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಅವರು ಸ್ಪಿನ್ ಕೋಚ್ ಮತ್ತು ಹೇಮಾಂಗ್ ಬದಾನಿ ಅವರು ಫೀಲ್ಡಿಂಗ್ ಕೋಚ್ ಆಗಿದ್ದಾರೆ. ಕಳೆದ ಸೀಸನ್ ನಲ್ಲಿ ಕಳಪೆ ಪ್ರದರ್ಶನ ತೋರಿದ್ದ ಹೈದರಾಬಾದ್ ಈ ಬಾರಿ ನಾಯಕ ಕೇನ್ ವಿಲಿಯಮ್ಸನ್, ವೇಗಿ ಉಮ್ರಾನ್ ಮಲಿಕ್ ಮತ್ತು ಆಲ್ ರೌಂಡರ್ ಅಬ್ದುಲ್ ಸಮದ್ ಅವರನ್ನು ಹೈದರಾಬಾದ್ ಈ ಬಾರಿ ರಿಟೈನ್ ಮಾಡಿಕೊಂಡಿತ್ತು. ಸ್ಟಾರ್ ಆಟಗಾರರಾದ ಡೇವಿಡ್ ವಾರ್ನರ್, ರಶೀದ್ ಖಾನ್ ಅವರು ತಂಡ ತೊರೆದಿದ್ದರು.

ಸನ್‌ರೈಸರ್ಸ್‌ ಹೈದರಾಬಾದ್‌ 2022:

ಕೇನ್ ವಿಲಿಯಮ್ಸನ್, ಉಮ್ರಾನ್ ಮಲಿಕ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ನಿಕೋಲಸ್ ಪೂರನ್, ಟಿ ನಟರಾಜನ್, ಭುವನೇಶ್ವರ್ ಕುಮಾರ್, ಪ್ರಿಯಮ್ ಗರ್ಗ್, ರಾಹುಲ್ ತ್ರಿಪಾಠಿ, ಅಭಿಷೇಕ್ ಶರ್ಮಾ, ಕಾರ್ತಿಕ್ ತ್ಯಾಗಿ, ಶ್ರೇಯಸ್ ಗೋಪಾಲ್, ಜಗದೀಶ ಸುಚಿತ್, ಏಡೆನ್ ಮಾರ್ಕ್ರಮ್, ಮಾರ್ಕೊ ಯೆನ್ಸನ್, ಗ್ಲೆನ್ ಫಿಲಿಪ್ಸ್, ಫಜಲ್ಹಕ್ ಫಾರೂಕಿ, ರೊಮಾರಿಯೊ ಶೆಫರ್ಡ್, ಶೇನ್‌ ಅಬಾಟ್, ಆರ್ ಸಮರ್ಥ್, ಶಶಾಂಕ್ ಸಿಂಗ್, ಸೌರಭ್ ದುಬೆ, ವಿಷ್ಣು ವಿನೋದ್.

IND vs WI T20: 2ನೇ ಟಿ20ಯಿಂದ ಸ್ಟಾರ್ ಪ್ಲೇಯರ್ ಔಟ್: ಭಾರತ ಪರ ಮತ್ತೊಬ್ಬ ಆಟಗಾರ ಪದಾರ್ಪಣೆ?

IND vs WI T20: ಇಂದು ಭಾರತ- ವೆಸ್ಟ್ ಇಂಡೀಸ್ ಎರಡನೇ ಟಿ20: ಸರಣಿ ವಶಪಡಸಿಕೊಳ್ಳುವತ್ತ ರೋಹಿತ್ ಚಿತ್ತ

TV9 Kannada


Leave a Reply

Your email address will not be published. Required fields are marked *